
ಸೋಲು ಎದುರಾಗಿ ಜೀವನವೇ ಬೇಡ ಅನಿಸಿದಾಗ ಚಾಣಿಕ್ಯನ ಈ ಮಾತನ್ನು ನೆನಪಿಸಿಕೊಳ್ಳಿ
ಪ್ರತಿಯೊಬ್ಬರ ಜೀವನದಲ್ಲಿ ಕೂಡ ಸೋಲು ಗೆಲುವು ಇದ್ದೇ ಇರುತ್ತದೆ. ಹಾಗೆ ಜೀವನದಲ್ಲಿ ಸೋಲನ್ನೇ ಎದುರಿಸಿ ಜೀವನವೇ ಬೇಡ ಎಂದು ಎನಿಸಿದಾಗ ಚಾಣಕ್ಯ ಹೇಳಿರುವಂತಹ 16 ಮಾತುಗಳನ್ನು ಕೇಳಿ ಸೋಲನ್ನು ಹೇಗೆ ಗೆಲುವಾಗಿಸಿಕೊಳ್ಳಬಹುದು ಎಂದು ಯೋಚಿಸಿ ಜೀವನ ನಡೆಸುವುದನ್ನು ನಾವು ಕಲಿಯಬಹುದು. ಜೀವನದಲ್ಲಿ ಸೋಲನ್ನು ಕಂಡವರಿಗೆ ಚಾಣಕ್ಯ ಹೇಳಿರುವಂತಹ 16 ಮಾತುಗಳು ಯಾವುದು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ನಾವು ಇನ್ನೊಬ್ಬರ ತಪ್ಪುಗಳನ್ನು ನೋಡಿ ಕಲಿತುಕೊಳ್ಳಬೇಕು ಎಲ್ಲ ತಪ್ಪುಗಳನ್ನು ನಾವೊಬ್ಬರೇ ಮಾಡಲು ನಮ್ಮ ಆಯಸ್ಸು ಸಾಲದು ಎಂದು ಚಾಣಕ್ಯ ಹೇಳುತ್ತಾರೆ. ನಮ್ಮ ಜೀವನದಲ್ಲಿ ಅತಿಯಾಗಿ ಪ್ರಾಮಾಣಿಕ ತನವನ್ನು ಹೊಂದಿರಬಾರದು ನೇರವಾಗಿ ಇರುವಂತಹ ಮರಗಳು ಮೊದಲು ನೆಲಕ್ಕುರುಳುತ್ತವೆ ನಂತರ ಡೊಂಕು ಮರಗಳು. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ಹೆಚ್ಚು ಪ್ರಾಮಾಣಿಕವಾಗಿ ಇರುವಂತಹ ವ್ಯಕ್ತಿ ಬೇಗ ನಾಶ ಹೊಂದುತ್ತಾನೆ ದುರ್ಮಾರ್ಗ ದುರ್ನಡತೆ ಹೊಂದಿರುವ ವ್ಯಕ್ತಿ ಅತಿ ಹೆಚ್ಚು ಕಾಲ ಬಾಳುತ್ತಾನೆ. ಒಂದು ಹಾವು ತನ್ನಲ್ಲಿ ವಿಷ ಇಲ್ಲದೆ ಇದ್ದರೂ ಸಹ ಅದು ಇರುವಂತೆಯೇ ಬುಸು ಗೂಡಬೇಕಾಗುತ್ತದೆ. ಚಾಣಕ್ಯ ಹೇಳಿರುವ ಇನ್ನೊಂದು ಸೂತ್ರ ಎಂದರೆ ನಮ್ಮ ಜೀವನದಲ್ಲಿ ನಮ್ಮ ರಹಸ್ಯಗಳನ್ನು ಅತ್ಯಂತ ದೊಡ್ಡ ರಹಸ್ಯಗಳನ್ನು ಯಾರಿಗೂ ಹೇಳಬಾರದು. ನಮ್ಮ ಜೀವನದಲ್ಲಿ ಮುಂದೆ ಅವೇ ಮುಳುವಾಗುವುದು. ಚಾಣಕ್ಯ ಹೇಳುವಂತೆ ಪ್ರತಿಯೊಂದು ಸ್ನೇಹದ ಹಿಂದೆಯೂ ಒಂದು ಸ್ವಾರ್ಥ ಇದ್ದೇ ಇರುತ್ತದೆ ಸ್ವಾರ್ಥವಿಲ್ಲದ ಸ್ನೇಹ ಯಾವುದು ಇಲ್ಲ ಜಗತ್ತಿನಲ್ಲಿ ಎಂದು ಹೇಳುತ್ತಾರೆ.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಮೊದಲು ತನ್ನನ್ನು ತಾನು ಈ ಮೂರು ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳಬೇಕು. ನಾನೇಕೆ ಈ ಕಾರ್ಯ ಮಾಡುತ್ತಿದ್ದೇನೆ? ನಾನು ಮಾಡುತ್ತಿರುವ ಈ ಕಾರ್ಯ ಸಫಲವಾಗುವುದೇ? ಹಾಗೂ ಈ ಕಾರ್ಯದಿಂದ ನನಗೆ ಏನು ಪ್ರಯೋಜನ? ಎನ್ನುವ ಈ ಮೂರು ಪ್ರಶ್ನೆಗಳಿಗೆ ನಿಖರವಾದ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಬೇಕು ಇಲ್ಲವಾದರೆ ಆ ಪ್ರಯತ್ನ ವ್ಯರ್ಥವಾಗುವುದು. ಜೀವನದಲ್ಲಿ ಭಯ ಎನ್ನುವುದು ನಿಮ್ಮನ್ನು ಕಾಡುತ್ತಿದ್ದರೆ ಅದು ನಿಮ್ಮ ಬಳಿ ಬರುತ್ತಿದ್ದಂತೆ ಭಯದ ಮೇಲೆ ಆಕ್ರಮಣ ಮಾಡಿ ಭಯವನ್ನು ವಿನಾಶ ಗೊಳಿಸಬೇಕು ಎಂದು ಆಚಾರ್ಯ ಚಾಣಕ್ಯ ತಿಳಿಸುತ್ತಾರೆ. ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ. ಒಂದು ಕಾರ್ಯವನ್ನು ಕೈಗೆತ್ತಿಕೊಂಡ ಬಳಿಕ ವಿಫಲವಾಗುತ್ತದೆ ಎಂದು ಭಯದಲ್ಲಿ ಮಧ್ಯಕ್ಕೆ ಕಾರ್ಯವನ್ನು ನಿಲ್ಲಿಸಬಾರದು. ತಾವು ಮಾಡುತ್ತಿರುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸುವರು ಅತ್ಯಂತ ಸುಖಿಗಳಾಗಿರುತ್ತಾರೆ. ಹೂವಿನ ಸುಗಂಧ ಗಾಳಿ ಇರುವ ದಿಕ್ಕಿನಲ್ಲಿ ಮಾತ್ರ ಹರಡುತ್ತದೆ ಆದರೆ ಒಬ್ಬ ಒಳ್ಳೆಯ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿ ಹರಡುತ್ತದೆ. ದೇವರು ವಿಗ್ರಹಗಳಲ್ಲಿ ಇಲ್ಲ ನಿಮ್ಮ ಭಾವನೆಗಳಲ್ಲಿ ದೇವರು ಇದ್ದಾನೆ ನಿಮ್ಮ ಆತ್ಮವೇ ದೇವರು ಎಂದು ಆಚಾರ್ಯ ಚಾಣಕ್ಯ ತಿಳಿಸಿದ್ದಾರೆ.
ಓರ್ವ ವ್ಯಕ್ತಿ ತಾನು ಮಾಡುವಂತಹ ಒಳ್ಳೆಯ ಕೆಲಸಗಳಿಂದ ದೊಡ್ಡವನಾಗುತ್ತಾನೆ ಹೊರತು ಹುಟ್ಟಿನಿಂದ ದೊಡ್ಡ ವ್ಯಕ್ತಿ ಎನಿಸಿಕೊಳ್ಳುವುದಿಲ್ಲ. ಆಚಾರ್ಯ ಚಾಣಕ್ಯ ಹೇಳುತ್ತಾರೆ ನಮ್ಮ ಅಂತಸ್ತಿಗಿಂತ ಮೇಲಿನ ಅಥವಾ ಕೆಳಗಿನ ವ್ಯಕ್ತಿಯ ಜೊತೆಗೆ ಸ್ನೇಹವನ್ನು ಮಾಡಬಾರದು ಏಕೆಂದರೆ ಆ ಸ್ನೇಹ ಎಂದಿಗೂ ಸಂತೋಷವನ್ನು ನೀಡುವುದಿಲ್ಲ. ನಮ್ಮ ಮಗುವನ್ನು ಮೊದಲು ಐದು ವರ್ಷಗಳವರೆಗೆ ಮುದ್ದಾಗಿ ಸಾಕಬೇಕು. ನಂತರ ಐದು ವರ್ಷಗಳಲ್ಲಿ ಮಕ್ಕಳು ಮಾಡುವಂತಹ ತಪ್ಪುಗಳನ್ನು ಬೆದರಿಸಿ ತಿದ್ದಿ ಹೇಳಬೇಕು. 16 ವರ್ಷದ ನಂತರ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಹಾಗೆಯೇ ಬೆಳೆದ ಮಕ್ಕಳು ನಿಮ್ಮ ಅತ್ಯಂತ ನಿಕಟ ಸ್ನೇಹಿತರಾಗಿರುತ್ತಾರೆ. ಮೂರ್ಖ ವ್ಯಕ್ತಿಗೆ ಪುಸ್ತಕಗಳು ಅಂಧ ವ್ಯಕ್ತಿಗೆ ಕನ್ನಡಿ ಇರುವಷ್ಟೇ ನಿರುಪಯೋಗ ವಾಗಿರುತ್ತವೆ. ವಿದ್ಯೆಯೇ ನಿಜವಾದ ಸ್ನೇಹಿತ ವಿದ್ಯಾವಂತನಿಗೆ ಎಲ್ಲಿಯೂ ಮನ್ನಣೆ ಸಿಗುವುದು. ವಿದ್ಯೆಯೇ ನಿಜವಾದ ಭೂಷಣ ಹಾಗೂ ವಿದ್ಯೆಯೇ ಎಂದಿಗೂ ಯೌವನ.
ಚಾಣಕ್ಯ ಹೇಳಿರುವಂತಹ ಈ ಮೇಲಿನ ಮಾತುಗಳನ್ನು ನಾವು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಖಮಯವಾಗಿರುವುದು.
