ನಿದ್ರಾಹೀನತೆ ನಿವಾರಿಸುವ ಜೊತೆಗೆ ಹತ್ತಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಅರಿಶಿನ ಹಾಲು

ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನ ವಾಗಿರುವಂತಹ ಒಂದು ದ್ರವ ಪದಾರ್ಥ ಅಂದರೆ ಅದೇ ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿ ಎಂದು ಹಿರಿಯರು ಆಶೀರ್ವಾದವನ್ನ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಾಲಿನಲ್ಲಿರುವ ಲಕ್ಷಣಗಳನ್ನು ಎತ್ತಿ ಹಿಡಿಯುವುದು. ಮಗು ತಾಯಿ ಬಳಿಕ ಮೊಟ್ಟಮೊದಲಾಗಿ ಹಸಿವಿನ ಹಾಲು ಸೇವಿಸುತ್ತೆ.ಆದರೆ ವಯಸ್ಕರಾದ ಬಳಿಕ ಹಸಿವಿನ ಹಾಲು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವಂತೆಯೇ, ಕೆಟ್ಟದ್ದನ್ನು ಮಾಡುತ್ತದೆ. ಈ ಬಗ್ಗೆ ಹತ್ತಾರು ಸಂಶೋಧನೆಗಳು ನಡೆಯುತ್ತಿವೆ.

ಹಾಲಿನಲ್ಲಿ ಅರಿಶಿಣ ಹಾಕಿ ಕುಡಿದರೆ ನಮ್ಮ ದೇಹಕ್ಕೆ ಹತ್ತಾರು ಲಾಭಗಳು ಸಿಗುತ್ತವಂತೆ. ಅಡುಗೆ ಮನೆಯಲ್ಲಿ ಇರುವ ಹಾಲು ಮತ್ತು ಅರಿಸಿಣ ಸೂಕ್ಷ್ಮ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ನಮ್ಮ ನಿತ್ಯದ ಆಹಾರಗಳೊಂದಿಗೆ ಈ ಎರಡು ವಸ್ತುಗಳನ್ನ ಅರಿಸಿಣಕ್ಕೆ ಹಾಲನ್ನು ಬೆರಸಿ ಬಳಸುವುದರಿಂದ ಹಲವಾರು ಸಮಸ್ಯೆಗಳಿಗೆ ಶಾಶ್ವತ ಸಮಸ್ಯೆ ದೊರೆಯುತ್ತದೆ. ಇವು ಪರಿಸರದ ಅತ್ಯಂತ ಅಪಾಯಕಾರಿ ಜೀವಾಣುಗಳ ವಿರುದ್ಧ ಹೋರಾಡಿ ನಮ್ಮ ದೇಹವನ್ನು ಅಂತ್ಯತ ಸುರಕ್ಷಿತವಾಗಿ ರಕ್ಷಿಸುತ್ತದೆ. ಆದ್ದರಿಂದ ಹಾಲು ಮತ್ತು ಅರಿಶಿಣದಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಉಸಿರಾಟದ ತೊಂದರೆ ಅರಿಶಿಣ ಮತ್ತು ಹಾಲುನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಸೊಂಕುಗಳನ್ನು ನಿವಾರಿಸುವ ಗುಣವಿರುತ್ತದೆ. ಇದು ಉಸಿರಾಟ ಸಂಬಂಧಿ ತೊಂದರೆಗಳನ್ನು ನಿಯಂತ್ರಿಸುತ್ತೆ.
ಕ್ಯಾನ್ಸರ್ ಕಾಯಿಲೆಗೆ ಉಪಯುಕ್ತ: ಈ ಅರಿಶಿಣ ಹಾಲು ಉರಿಊತ ವಿರೋಧ ಗುಣಗಳನ್ನು ಹೊಂದಿದ್ದು, ಸ್ತನ, ಶ್ವಾಸಕೋಶ, ಉದ್ದನಳಲ್ಲಿನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಇದು ಹಾನಿಕಾರಕ ಡಿಎನ್ ಎಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ.

ನಿದ್ರಾ ಹೀನತೆ : ಬಿಸಿ ಅರಿಸಿಣ ಹಾಲು ಅಮೈನೋ ಆಮ್ಲ, ಟ್ರಿಪ್ಲೋಪ್ಲ್ಯಾನ್ ಅನ್ನು ಉತ್ಪಾದಿಸುತ್ತದೆ. ಇದು ಶಾಂತಿಯುತ ಹಾಗೂ ಸುಖನಿದ್ರೆಗೆ ಕಾರಣವಾಗುತ್ತೆ.
ಶೀತ, ಕೆಮ್ಮು ನಿವಾರಣೆ: ಅರಿಶಿಣ ಹಾಲು ವೈರಸ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಕಾರಣ. ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಅಂತ ಪರಿಗಣಿಸಲಾಗಿದೆ.

ಸಂಧಿವಾತದ ನಿವಾರಣೆ: ಅರಿಶಿಣ ಹಾಲು ಸಂಧಿವಾತ ಹಾಗೂ ಅದರ ಮತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿ ಇರುವ ಹೆಚ್ಚಿನ ನೋವುವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಉತ್ಕರ್ಷಣ ನಿರೋಧಕವಾಗಿದೆ ಅರಿಶಿಣದ ಹಾಲು ಪ್ರೀ ಆರ್ಟಿಕಲ್ಸ್ ವಿರುದ್ಧ ಹೋರಾಡುವ ಅತ್ಯುತ್ತಮ ಉತ್ಕರ್ಷಣ ಮೂಲಗಳಾಗಿರುತ್ತದೆ. ಇದರಿಂದ ಅನೇಕ ಕಾಯಿಲೆಗಳನ್ನ ಗುಣ ಪಡಿಸಿಕೊಳ್ಳ ಬಹುದು.

ರಕ್ತ ಶುದ್ಧೀಕರಣ : ಅರಿಶಿಣ ಹಾಲು ಸಂಪ್ರದಾಯಿಕ ಆಯುರ್ವೇದದಲ್ಲಿ ಅತ್ಯುತ್ತಮ ರಕ್ತ ಶುದ್ಧೀಕರಣ ಕ್ಲೀನರ್ಸ್ ಎಂದು ಪರಿಗಣಿಸಲಾಗುತ್ತದೆ.ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಗಿಸೋದ್ದಕ್ಕೆ ಸಹಾಯ ಮಾಡುತ್ತದೆ.

ಲೀವರ್ ಗೆ ಸಹಕಾರಿ: ಅರಿಶಿಣದ ಹಾಲು ಪಿತ್ತ ಜನಕಾಂಗದ ಕ್ರಿಯೆಯನ್ನ ಹೆಚ್ಚಿಸುತ್ತದೆ. ಮತ್ತು ರಕ್ತ ಶುದ್ಧೀಕರಣದ ಮೂಲಕ ಲಿವರ್ ಅನ್ನು ಬೆಂಬಲಿಸುತ್ತದೆ. ಲಿವರ್ ಆರೋಗ್ಯ ವಾಗಿರುವಂತೆ ಅರಿಶಿಣ ಹಾಲು ನಮ್ಮ ದೇಹದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೆ.

ಮೂಳೆಗಳ ಆರೋಗ್ಯಕ್ಕೆ ಉತ್ತಮ: ಅರಿಶಿಣದ ಹಾಲು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಕ್ಯಾಲ್ಸಿಯಂ ನ ಮೂಲವಾಗಿ ಅರಿಶಿಣದ ಹಾಲು ಕೆಲಸ ಮಾಡುತ್ತೆ ಭಾರತದ ಕ್ರಿಕೇಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೂಳೆಗಳ ಗಟ್ಟಿತನಕ್ಕೆ ಅರಿಶಿಣದ ಹಾಲನ್ನೇ ಕುಡಿಯುತ್ತಾರಂತೆ.

ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ: ಮುಟ್ಟಿನ ಸೆಳೆತ ಹಾಗೂ ನೋವನ್ನು ಸರಾಗಗೊಳಿಸುವ ಆಂಟಿ ಸ್ಪೇಸ್ ಪೋಡಿಕ್ ಹೊಂದಿರುವ ಅರಶಿಣದ ಹಾಲು ಅದ್ಭುತ ಶಕ್ತಿಯನ್ನು ಹೊಂದಿದೆ.ಗರ್ಭಿಣಿ ಮಹಿಳೆಯರು ಹೆರಿಗೆ ಸುಲಭವಾಗಲು ಅರಿಶಿಣ ಹಾಲು ಸೇವಿಸುವುದು ಒಳ್ಳೆಯದು.

ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದನ್ನ ತಡೆಗಟ್ಟುತ್ತದೆ: ಈಜಿಪ್ಟ್ ನ ರಾಣಿ ಕ್ಲೀಯೋ ಪಾತ್ರ ಮೃದು ಮತ್ತು ಹೊಳೆಯುವ ಚರ್ಮಕ್ಕಾಗಿ ಅರಿಶಿಣ ಹಾಲಿನಿಂದ ಸ್ನಾನವನ್ನು ಮಾಡ್ತಿದ್ದರಂತೆ. ಹತ್ತಿಯನ್ನು ಅರಿಶಿಣದ ಹಾಲಿನಲ್ಲಿ ಅದ್ದಿ ಮುಖದ ಕೆಂಪಾಗಿರುವ ಜಾಗಕ್ಕೆ ಲೇಪಿಸಿದರೆ ಮುಖದ ಕಾಂತಿಯು ಹೆಚ್ಚುತ್ತದೆ.

ತೂಕವನ್ನ ಕಡಿಮೆಗೊಳಿಸುತ್ತದೆ: ಅರಿಶಿಣ ಹಾಲು ದೇಹದಲ್ಲಿನ ಕೊಬ್ಬಿನಾಂಶವನ್ನು ಸ್ಥಗಿತಗೊಳಿಸುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಲಿನ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಿದ್ದ ನಮಗೆ ಇತ್ತೀಚಿನ ಸಂಶೋಧನೆಗಳಿಂದ ಹಾಲಿನ ಅಡ್ಡಪರಿಣಾಮದ ದೆಸೆಯಿಂದ ಹಾಲು ಸಹ ನಮ್ಮ ಜೀವಕ್ಕೆ ತೊಂದರೆ ನೀಡುತ್ತದೆ ಎಂಬ ಗಾಳಿ ಮಾತು ಕೇಳಿಬಂದಿದೆ.ಆದರೆ ಹಾಲು ಎಂದೆಂದಿಗೂ ಸಕಲ ಕೋಟಿ ಜೀವಾರಾಶಿಗೂ ಒಂದು ಅದ್ಭುತವಾದಂತಹ ಅಮೃತವಾಗಿದೆ.

Leave a Comment

error: Content is protected !!