ಪೋಲೀಸ್ ಅಧಿಕಾರಿಯ ದೌರ್ಜನ್ಯಕ್ಕೆ ಬಲಿಯಾದ 25ರ ಯುವಕ! ಪೊಲೀಸ್ ಅಧಿಕಾರಿಯ ಕರಾಳ ಸ್ಟೋರಿ

ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಮಾತಿದೆ. ಹೊಲವನ್ನು ಕಾಯೋದಕ್ಕಾಗಿ ಹಾಕಿರುವ ಬೇಲಿ ಹೊಲವನ್ನು ತಿಂದು ಬಿಟ್ಟರೆ ಹೇಗಿರುತ್ತೆ! ಅದೇ ರೀತಿ ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಜನರಿಗೆ ತೊಂದರೆ ಆಗುವ ಹಾಗೆ ನಡೆದುಕೊಂಡರೆ ಹೇಗಿರುತ್ತೆ. ಇಂಥದೊಂದು ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾಮಾನ್ಯನ ಮೇಲೆ ನಡೆಸಿದ ದೌರ್ಜನ್ಯದಿಂದಾಗಿ ಇಂದು ಆತ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. 

ಈ ಘಟನೆ ನಡೆದಿದ್ದು ವಿಜಯಪುರದಲ್ಲಿ ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅವರ ಸಹೋದರ ಸೋಮನಾಥ ನಾಗಮೂತಿ ಎನ್ನುವವರ ಮೃ’ತ್ಯುವಿಗೆ ಕಾರಣರಾಗಿದ್ದಾರೆ. ಹೌದು ಸೋಮನಾಥ ನಾಗಮೂರ್ತಿ ಎನ್ನುವ 25 ವರ್ಷದ ಹುಡುಗ ತನ್ನ ಸಾ’ ವಿಗೆ ಯಾರು ಕಾರಣ ಎನ್ನುವುದನ್ನ ಡೆತ್ ನೋಟ್ ಬರೆದಿಟ್ಟು ಫೇಸ್ಬುಕ್ ನಲ್ಲಿ ವಿಡಿಯೋವನ್ನು ಕೂಡ ಮಾಡಿ ಜೀವ ಕಳೆದುಕೊಂಡಿದ್ದಾನೆ. ಜುಲೈ 8 ರಿಂದ ಫೆಸ್ ಬುಕ್ ನಲ್ಲಿ ವಿಡಿಯೋ ಮಾಡಿದ ನಂತರ ಸೋಮನಾಥ ಕಾಣೆಯಾಗಿದ್ದ ಇದೀಗ ವಿಜಯಪುರದ ಜಿಲ್ಲೆಯ ಕೋಲಾರ ಪಟ್ಟಣದ ಕೃಷ್ಣ ನದಿ ತೀರದಲ್ಲಿ ಆತನ ಶ’ವ ಪತ್ತೆಯಾಗಿದೆ.

ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಸೋಮೇಶ ಗೆಜ್ಜಿ, ಅವರ ಸಹೋದರ ಸಚಿನ್ ಗೆಜ್ಜೆ, ತಾನು ಕೆಲಸ ಮಾಡುತ್ತಿದ್ದ ಗ್ಯಾರೇಜನ ಓನರ್ ಆದ ರವಿ ದೇಗಿನಾಳ ಹಾಗೂ ಸಂತೋಷ ದೇಗಿನಾಳ ನಾಲ್ವರ ಹೆಸರನ್ನ ಡೆ-ತ್ ನೋಟ್ ನಲ್ಲಿ ಬರೆದಿಟ್ಟು ಯುವಕ ಸೋಮನಾಥ ನಾಗಮೂತಿ ಜೀವ ಕಳೆದುಕೊಂಡಿದ್ದಾನೆ. ಇನ್ನು ಸೋಮನಾಥ್ ಅವರ ಸಾ’ವಿಗೆ ನಿಜವಾದ ಕಾರಣ ಏನು ಅಂತ ನೋಡೋದಾದ್ರೆ, ಸೋಮನಾಥ್ ವಿಜಯಪುರ ದಲ್ಲಿರುವ ಶಿವಗಿರಿ ಚೆಸ್ ಅಂಡ್ ವೀಲ್ಸ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಐಪಿಎಸ್ ಸೋಮೇಶ ಗೆಜ್ಜೆ ಹಾಗೂ ಅವರ ಸಹೋದರ ಸಚಿನ್ ಗೆಜ್ಜೆ ಬಂದು ತಮ್ಮ ಕಾರಣ ಸರ್ವಿಸ್ ಗೆ ಬಿಟ್ಟಿದ್ದರು.

ಈ ಕಾರಿನಲ್ಲಿ ಸರ್ವಿಸ್ ಮಾಡಿಸುವಾಗ ಒಂದು ಲಕ್ಷ ಹಣ ಇತ್ತು ಅಂತ ಅವರು ಹೇಳಿದ್ದಾರೆ ಜೊತೆಗೆ ಇಲ್ಲಿ ಕೆಲಸ ಮಾಡುತ್ತಿದ್ದ ಸೋಮನಾಥನೇ ಈ ಹಣವನ್ನು ಕದ್ದಿದ್ದಾನೆ ಅಂತ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಸೋಮನಾಥನನ್ನು ಸಿಕ್ಕಾಪಟ್ಟೆ ತಿಳಿಸಿದ್ದಾರೆ. ತಾನು ಮಾಡದೆ ಇರುವ ತಪ್ಪಿಗೆ ಹೊಡೆತ ತಿಂದಿದ್ದು ಅಲ್ಲದೆ ಅವಮಾನವನ್ನು ಅನುಭವಿಸಿದ ಸೋಮನಾಥ್ ಕೊನೆಗೆ ಜೀವ ಕಳೆದುಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾನೆ. ಇನ್ನು ಸೋಮನಾಥ್ ಕೆಲಸ ಮಾಡುತ್ತಿದ್ದ ಗ್ಯಾರೇಜಿನ ಓನರ್ ಆದ ಸಂತೋಷ್ ದೇಗಿನಾಳ ಹಾಗೂ ರವಿ ದೇಗಿನಾಳ ನೀನು ತೆಗೆದುಕೊಂಡಿರುವ ಒಂದು ಲಕ್ಷ ರೂಪಾಯಿ ಅನ್ನು ಹಿಂತಿರುಗಿಸಿ ಕೊಡು ಇಲ್ಲವಾದರೆ ಪೊಲೀಸರು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ.. ಅವರಿಗೆ ನಾವೇ ಕೊಡ್ತೀವಿ ಎಂದು ಕೂಡ ಹೆದರಿಸಿದ್ದರು. ಈ ನಾಲ್ವರಿಂದಾಗಿ ತಾನು ಕಷ್ಟ ಪಡುತ್ತಿದ್ದೇನೆ ಅವಮಾನ ಅನುಭವಿಸುತ್ತಿದ್ದೇನೆ ಎಂದು ಫೇಸ್ಬುಕ್ ನಲ್ಲಿ ತಮ್ಮ ಖಾತೆಯಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ ಸೋಮನಾಥ್.

ಇನ್ನು’ ನನಗೆ ಚೆನ್ನಾಗಿ ಹೊಡೆದು ಬಿಡಿಸಿದ್ದು ಮಾತ್ರವಲ್ಲದೆ ಒಂದು ಲಕ್ಷ ರೂಪಾಯಿ ತಂದು ಕೊಡು ಆಗ ಬಿಡುತ್ತೇವೆ ಅಂತ ಒಂದು ಬಿಳಿ ಹಾಳೆಯ ಮೇಲೆ ತನ್ನ ಸಹಿಯನ್ನು ಹಾಕಿಕೊಂಡಿದ್ದಾರೆ ಇನ್ನು ನನ್ನನ್ನ ಈ ವಿಷಯದಲ್ಲಿ ಸಿಕ್ಕಿ ಹಾಕಿಸಬೇಕು ಅಂತ ಈ ರೀತಿ ಪ್ಲಾನ್ ಮಾಡಿದ್ದಾರೆ ಅಂತ ನನಗೆ ಅನಿಸುತ್ತೆ. ನಾನು ಇದುವರೆಗೆ ಮರ್ಯಾದೆಯಿಂದ ಬದುಕಿದ್ದೇನೆ ನನ್ನ ತಂದೆ ತೀರಿ ಹೋಗಿ ನಾಲ್ಕೈದು ವರ್ಷವಾಯಿತು ಅಂದಿನಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ ಇದ್ದರಲ್ಲಿಯೇ ನಾನು ನನ್ನ ಹೆಂಡತಿ ಖುಷಿಯಾಗಿದ್ದೆವು ಆದರೆ ಈಗ ನನಗೆ ಈ ಆರೋಪವನ್ನು ಸಹಿಸುವುದಕ್ಕೆ ಆಗುತ್ತಿಲ್ಲ’ ಅಂತ ಕಣ್ಣೀರಿಟ್ಟು ವಿಡಿಯೋ ಮಾಡಿದ್ದರು ಸೋಮನಾಥ್. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸೋಮನಾಥ್ ಅವರ ಕುಟುಂಬ ಬಹಳ ದುಃಖವನ್ನು ಅನುಭವಿಸುತ್ತಿದ್ದು ಈ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಬೇಕು ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಅಂತ ಪಟ್ಟು ಹಿಡಿದು ಕುಳಿತಿದ್ದಾರೆ.

Leave a Comment

error: Content is protected !!