ಚಂದ್ರಶೇಖರ್ ಗುರೂಜಿ ಎರಡನೇ ಮದುವೆ ಆಗಿದ್ದು ಏಕೆ? ಆ ದಿನ ಎರಡನೇ ಪತ್ನಿಯ ಮಾತು ಕೇಳಿದಿದ್ದರೆ ಗುರೂಜಿ ಬಚಾವ್ ಆಗ್ತಾ ಇದ್ರು

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ ಹ’ತ್ಯೆ ಇಡೀ ಕರ್ನಾಟಕವನ್ನೇ ಶಾಕ್ ಮಾಡಿದೆ. ಚಂದ್ರಶೇಖರ್ ಗುರೂಜಿ ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಕೂಡ ಬೆಸ್ಟ್ ವಾಸ್ತು ತಜ್ಞ ಎಂದು ಹೆಸರಾಗಿದ್ದರು. ಇಂತಹ ಪ್ರಸಿದ್ಧ ವ್ಯಕ್ತಿಯನ್ನೇ ಹಾಡುಹಗಲು ಹೊಟೇಲ್ ನಲ್ಲಿ ಎಲ್ಲರೆದುರೇ ಚಾಕುವಿನಿಂದ ಕೊ’ಚ್ಚಿ ಮುಗಿಸಿರುವುದು ನಿಜಕ್ಕೂ ಅರಗಿಸಿಕೊಳ್ಳಲಾಗದ ವಿಷಯ. ಗುರೂಜಿ ಅವರು ಇಹಲೋಕ ತ್ಯಜಿಸಿದ ಮೇಲೆ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಹಲವಾರು ಸಂಗತಿಗಳು ಹೊರಬಿದ್ದಿವೆ.

ಚಂದ್ರಶೇಖರ್ ಗುರೂಜಿ ಅವರು ಸಿಕ್ಕಾಪಟ್ಟೆ ಆಸ್ತಿ ಮಾಡಿದ್ದಾರೆ ಸಾವಿರಾರು ಕೋಟಿ ರೂಪಾಯಿಗಳ ಒಡೆಯ ಎಂಬ ವಿಷಯಗಳು ಇದೀಗ ಹೊರ ಬಂದಿದೆ ಅಷ್ಟೇ ಅಲ್ಲದೆ ಗುರೂಜಿಯವರು ಎರಡನೇ ಮದುವೆ ಕೂಡ ಆಗಿದ್ರು ಎಂಬ ಸುದ್ದಿ ಇದೀಗ ಗೊತ್ತಾಗಿದೆ. ಅರುವತ್ತು ವರ್ಷ ವಯಸ್ಸಾಗಿದ್ದ ಗುರೂಜಿಯವರು ಎರಡನೇ ಮದುವೆಯಾಗಿದ್ದೇಕೆ ಎಂಬ ಸಂಶಯ ಇದೀಗ ಎಲ್ಲರಲ್ಲೂ ಮೂಡಿದೆ. ಹಾಗಾದರೆ ಮೊದಲನೇ ಹೆಂಡತಿ ಏನಾದಳು ಯಾಕೆ ಗುರೂಜಿ ಎರಡನೇ ಮದುವೆಯಾದರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.

ಗುರೂಜಿಯವರ ಮೊದಲನೇ ಪತ್ನಿ ಅನಾರೋಗ್ಯದ ಕಾರಣ ತೀರಿಕೊಂಡಿದ್ದರು. ಒಂಟಿಯಾದ ಚಂದ್ರಶೇಖರ್ ಗುರೂಜಿ ಅವರು ಎರಡನೇ ಮದುವೆ ಆದರು. ತನಗಿಂತ ಚಿಕ್ಕ ವಯಸ್ಸಿನ ಮಹಿಳೆಯನ್ನು ಗುರೂಜಿಯವರು ಮದುವೆಯಾದರು. ಮೊದಲ ಹೆಂಡತಿಗೆ ಹೆಣ್ಣು ಮಗಳು ಹುಟ್ಟಿದಳು. ಆದರೆ ಚಂದ್ರಶೇಖರ ಗುರೂಜಿಯವರ ಎರಡನೇ ಹೆಂಡತಿಗೆ ಇನ್ನೂ ಕೂಡ ಮಕ್ಕಳು ಆಗಿರಲಿಲ್ಲ. ಚಂದ್ರಶೇಖರ್ ಗುರೂಜಿ ಅವರು ಎರಡನೇ ಹೆಂಡತಿಯೊಂದಿಗೆ ತುಂಬ ಸುಖ ಸುಖ ಜೀವನವನ್ನು ನಡೆಸುತ್ತಿದ್ದರು. ಇಬ್ಬರು ಕೂಡ ತುಂಬಾ ಅನ್ಯೋನ್ಯವಾಗಿ ಬಾಳುತ್ತಿದ್ದರು.

ಗುರೂಜಿ ಅವರ ಎರಡನೇ ಹೆಂಡತಿಯ ಹೆಸರು ಅಂಕಿತಾ ಅಂಕಿತಾ ಚಂದ್ರಶೇಖರ್ ಗುರೂಜಿ ಅವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಮತ್ತು ಗುರೂಜಿ ಅವರ ಮೇಲೆ ಯಾವಾಗಲೂ ಎಚ್ಚರಿಕೆಯ ಕಣ್ಣನ್ನು ಇಟ್ಟಿದ್ದಳು. ಗುರೂಜಿಯವರ ಕೊ’ಲೆಯಾಗುವ ದಿನ ಅಂಕಿತಾಗೆ ಮುಂಚೆಯೇ ಮುನ್ಸೂಚನೆ ಸಿಕ್ಕಿತ್ತಂತೆ. ಆ ದಿನ ಮಧ್ಯಾಹ್ನ ಗುರೂಜಿ ಮತ್ತು ಎರಡನೇ ಪತ್ನಿ ಇಬ್ಬರು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ವಾಸವಾಗಿದ್ರು. ಮಧ್ಯಾಹ್ನ ಗುರೂಜಿಯವರಿಗೆ ಅವರ ಮಾಜಿ ಸಹೋದ್ಯೋಗಿ ಮಹಂತೇಶ್ ನಿಂದ ಕಾಲ್ ಬರುತ್ತೆ. ನಿಮ್ಮನ್ನು ಭೇಟಿ ಮಾಡಬೇಕು ದಯವಿಟ್ಟು ಹೋಟೆಲಿನ ರಿಸೆಪ್ಶನ್ ಬಳಿ ಬರುವಂತೆ ಮಹಂತೇಶ್ ಗುರೂಜಿ ಬಳಿ ಫೋನ್ ನಲ್ಲಿ ಕೇಳಿಕೊಂಡಿದ್ದ.

ಯಾವಾಗ ಮಹಂತೇಶ್ ಶಿರೂರ್ ಹೋಟೆಲ್ ಗೆ ಬಂದು ಗುರೂಜಿ ಅವರನ್ನು ಭೇಟಿ ಮಾಡಬೇಕು ಎಂದು ಹೇಳುತ್ತಾನೋ ಆಗ ಗುರೂಜಿಯವರ ಪತ್ನಿ ಅಂಕಿತಾ ಗುರೂಜಿ ಗೆ ಮಹಂತೇಶ್ ನನ್ನು ಭೇಟಿ ಮಾಡದಂತೆ ತಡೆಯುತ್ತಾಳೆ. ಯಾಕೆಂದರೆ ಮಂಜುನಾಥ್ ಗುರೂಜಿಯವರಿಗೆ ಆಗಾಗ ಕಾಲ್ ಮಾಡಿ ಪೀಡಿಸುತ್ತಿದ್ದ. ಮತ್ತು ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಆಗಾಗ ಇವರಿಬ್ಬರ ನಡುವೆ ಹಣಕಾಸಿನ ಜಗಳ ನಡೆಯುತ್ತಲೇ ಇತ್ತು ಇದೆಲ್ಲ ಅಂಕಿತಾಗೆ ಕೂಡ ಆಗುತ್ತಿತ್ತು. ಮಹಂತೇಶ್ ಗುರೂಜಿಯವರನ್ನು ಹುಡುಕಿಕೊಂಡು ಬಂದಿದ್ದಾನೆಯೆಂದರೆ ಜಗಳ ಅಥವಾ ವಿವಾದ ಹುಟ್ಟು ಹಾಕೋಕೆ ಬಂದಿದ್ದಾನೆ ಅಂತ ಅಂಕಿತಾಗೆ ಪಕ್ಕಾ ಕನ್ಫರ್ಮ್ ಆಗುತ್ತೆ. ಆಗ ಗಂಡನ ಬಳಿ ದಯವಿಟ್ಟು ಹೋಗಬೇಡಿ ಎಂದು ವಿನಂತಿಸಿಕೊಳ್ಳುತ್ತಾಳೆ ಆದರೆ ಗುರೂಜಿ ಹೆಂಡತಿಯ ಮಾತು ಕೇಳದೆ ಮಂಜುನಾಥ್ ನನ್ನು ಭೇಟಿ ಮಾಡೋಕೆ ಹೊರಡುತ್ತಾರೆ. ಅದಾದ ಮೇಲೆ ಏನಾಯ್ತು ಅಂತ ನಿಮಗೆಲ್ಲ ಗೊತ್ತೇ ಇದೆ. ಏನೂ ಮಾಡೋಕಾಗಲ್ಲ ವಿಧಿಯಾಟ.. ವಾಸ್ತು ವನ್ನು ಸರಿಪಡಿಸುವ ವಾಸ್ತುತಜ್ಞರಿಗೆ ಆ ದಿನ ವಾಸ್ತು ಸರಿ ಇರಲಿಲ್ಲ ಅನ್ಸತ್ತೆ.

Leave A Reply

Your email address will not be published.

error: Content is protected !!