ವಿಶ್ವ ಪ್ರಸಿದ್ದಿ ದಂಪತಿಗಳು ಇವರು ವಿಡಿಯೋ

ಸಾಮಾನ್ಯವಾಗಿ ಯಾರಾದರೂ ಇಡೀ ಪ್ರಪಂಚದ ತುಂಬಾ ಹೆಸರು ಗಳಿಸಬೇಕು ಅಂತ ಇದ್ದರೆ ಅದು ಬಹಳ ಕಷ್ಟ. ಅದೇ ರೀತಿಯಾಗಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸಾಧಿಸುವುದು ಕೂಡ ಬಹಳವೇ ಕಷ್ಟ ಇದು ಸಾಮಾನ್ಯವಾದ ವಿಷಯವೇನೂ ಅಲ್ಲ. ಆದರೆ ಈ ಎರಡು ವಿಷಯಗಳನ್ನು ಒಂದೇ ಮದುವೆಯಲ್ಲಿ ಸಾಧಿಸಿದ ಆರು ದಂಪತಿಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ಪಾಲೊ ಅಂಡ್ ಕತ್ಯೂಸಿಯಾ: ಇವರು ಪ್ರಪಂಚದಲ್ಲಿ ಅತಿ ಚಿಕ್ಕ ಜೋಡಿ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರು ಗಳಿಸಿದ್ದಾರೆ. ಪಾಲೊ ಗೆ ೩೧ ವರ್ಷ ವಯಸ್ಸು ಹಾಗೆ ಇವರ ಎತ್ತರ ೯೧ ಸೆಂಟಿಮೀಟರ್. ಕತ್ಯೂಸಿಯಾ ಗೆ ೨೮ ವರ್ಷ ವಯಸ್ಸು ಹಾಗೆ ಇವರ ಎತ್ತರ ಕೂಡ ೯೨ ಸೆಂಟಿಮೀಟರ್. ಇವರು ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗುತ್ತಾರೆ. ಪರಿಚಯ ನಂತರದ ದಿನಗಳಲ್ಲಿ ಪ್ರೇಮವಾಗಿ ಬದಲಾಗುತ್ತದೆ. ಇದರ ಮೂಲಕ ಎರಡು ವರ್ಷಗಳ ಕಾಲ ಆನ್ಲೈನಲ್ಲೇ ಪ್ರೀತಿಸಿ ೨೦೦೮ರಲ್ಲಿ ಇಬ್ಬರು ನೇರವಾಗಿ ಭೇಟಿಯಾಗುತ್ತಾರೆ. ನಂತರ ೨೦೧೨ ರಲ್ಲಿ ಮದುವೆಯಾಗಿ ಇವರು ತಮ್ಮ ಮದುವೆಯ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಹೊಂದುತ್ತಾರೆ.

ವಿಕ್ಟರ್ ಅಂಡ್ ಗೇಬ್ರಿಯಲ್ ಪೇರಲ್ಟ: ಇವರಿಬ್ಬರೂ ಪ್ರಪಂಚದಲ್ಲೇ ಅತೀ ಹೆಚ್ಚು ದೇಹ ಮಾರ್ಪಾಡು ಮಾಡಿಸಿಕೊಂಡ ದಂಪತಿಗಳು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ. ಇವರಿಬ್ಬರೂ ಒಟ್ಟೂ ೫೭ ಬಾರಿ ದೇಹ ಮಾರ್ಪಾಡು ಮಾಡಿಸಿಕೊಂಡಿದ್ದಾರೆ. ಇವರ ಮೈಯಲ್ಲಿ ಟ್ಯಾಟೂ ಗಳು ಕೂಡಾ ಅತಿಯಾಗಿ ಇವೆ. ೧೯೯೯ ರಲ್ಲಿ ನಡೆದ ಟ್ಯಾಟೂ ಕಾಂಪಿಟೇಶನ್ ನಲ್ಲಿ ಇವರ ಮೊದಲ ಭೇಟಿ. ನಂತರ ಪ್ರೇಮಿಗಳಾಗಿ ಎರಡು ತಿಂಗಳಲ್ಲೇ ಮದುವೆ ಕೂಡಾ ಆಗುತ್ತಾರೆ. ಈ ರೀತಿ ಇವರು ಪ್ರಸಿದ್ಧಿ ಹೊಂದುತ್ತಾರೆ. ಇದೇ ರೀತಿ ಇವರು ತಮ್ಮ ಮೈಯ್ಯ ಮೇಲೆ ಎಷ್ಟು ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನುವುದು ಕೂಡಾ ಇವರಿಗೆ ಲೆಕ್ಕಕ್ಕೆ ಇಲ್ಲ.

ಸನ್ ಮಿಂಗ್ಮಿಂಗ್ ಅಂಡ್ ಕ್ಸುಯ್ಯನ್: ಇವರಿಬ್ಬರೂ ಪ್ರಪಂಚದಲ್ಲೇ ಅತೀ ಎತ್ತರದ ಜೋಡಿ ಎಂದು ಗಿನ್ನಿಸ್ ರೆಕಾರ್ಡ್ ಬರೆದಿದ್ದಾರೆ. ಸನ್ ಗೆ ೩೩ ವರ್ಷ ವಯಸ್ಸು ಹಾಗೂ ಎತ್ತರ ೨೩೬ ಸೆಂಟಿಮೀಟರ್. ಕ್ಸುಯ್ಯನ್ ೨೯ ವರ್ಷ ವಯಸ್ಸು. ಎತ್ತರ ೧೮೭ ಸೆಂಟಿಮೀಟರ್. ಇವರಿಬ್ಬರೂ ಅತ್ಲೇಟಿಕ್ ಆಟಗಾರರು. ಇವರು ಮೊದಲು ನ್ಯಾಯಶನಲ್ ಗೇಮ್ ಆಫ್ ಚೈನಾ ಎಂಬಾ ಕಾಂಪಿಟೇಶನ್ ಅಲ್ಲಿ ಭೇಟಿ ಆಗುತ್ತಾರೆ. ನಂತರ ಸ್ನೇಹಿತರಾಗಿ ಪ್ರೇಮ ಉಂಟಾಗಿ ನಾಲ್ಕು ವರ್ಷಗಳ ನಂತರ ಮದುವೆ ಆಗುವ ಮೂಲಕ ಜಗತ್ತಿನ ಅತೀ ಎತ್ತರದ ಜೋಡಿ ಎಂದು ಪ್ರಸಿದ್ಧಿ ಆಗುತ್ತಾರೆ.

ಅನಾಲಿಸಾ ಅಂಡ್ ಡೇವಿಡ್ ಹಾಕ್ಮನ್: ಅನಾಲಿಸಾ ಅವರನ್ನು ಎಲ್ಲರೂ ಬೀಯರ್ಡ್ ಲೇಡಿ ಎಂದು ಕರೆಯುತ್ತಾರೆ. ಏಕೆಂದರೆ ಇವರಿಗೆ ಚಿಕ್ಕ ವಯಸ್ಸಿನಿಂದಲೇ ಗಡ್ಡ ಬೆಳೆಯುತ್ತಿತ್ತು. ಇದರಿಂದ ಎಲ್ಲರೂ ಇವರಿಗೆ ಗೇಲಿ ಮಾಡಿದಾಗ ಮನೆಯಿಂದ ಹೊರ ಬೀಳುವುದಿಲ್ಲ. ಆಗ ಡೇವಿಡ್ ಅನಾಳಿಸಾ ಗೆ ಧೈರ್ಯ ಹೇಳಿ ತಾನೂ ಕೂಡಾ ಆನಾಲಿಸಾ ರೀತಿ ಗಡ್ಡ ಬೆಳೆಸಲು ಆರಂಭಿಸುತ್ತಾನೆ. ನಂತರ ಇವರಲ್ಲಿ ಸ್ನೇಹವಾಗಿ ಅದು ಪ್ರೇಮಕ್ಕೆ ತಿರುಗಿ ವಿವಾಹ ಆಗುತ್ತಾರೆ. ಇಬ್ಬರೂ ಕೂಡಾ ತಮ್ಮ ಮದುವೆಯಲ್ಲಿ ಕೂಡಾ ಹಾಗೇ ಗಡ್ಡ ಬಿಟ್ಟುಕೊಂಡು ಇದ್ದರು. ಇದರಿಂದಾಗಿ ಇವರು ಪ್ರಸಿದ್ಧಿ ಹೊಂದುತ್ತಾರೆ.

ಸೀನ್ ಸ್ಟೀಫನ್ ಸನ್ ಅಂಡ್ ಮೈಂಡಿ ಕಿನ್ಸ್ : ಸೀನ್ ಸ್ಟೀಫನ್ ಸನ್ ೧೯೭೭ ರಾಲ್ಲಿ ಚಿಕಾಗೊದಲ್ಲಿ ಹುಟ್ಟುತ್ತಾರೆ ಅದೂ ಒಂದು ಅಪರೂಪವಾದ ಕಾಯಿಲೆಯ ಜೊತೆಗೆ. ಈ ಕಾಯಿಲೆಯಿಂದ ಇವರು ಎತ್ತರ ಬೆಳೆಯಲೇ ಇಲ್ಲಾ. ತುಂಬಾ ಸಮಸ್ಯೆಗಳನ್ನು ಎದುರಿಸಿ ಕೊನೆಗೆ ಎಲ್ಲವನ್ನೂ ಗೆದ್ದು ಮೋಟಿವೇಶನಲ್ ಸ್ಪೀಕರ್ ಆಗಿ ಬದಲಾಗಿ ತಮ್ಮ ಮಾತುಗಳಿಂದಲೇ ಸಾಕಷ್ಟು ಜನರನ್ನು ಬದಲಾಯಿಸುತ್ತಾರೆ. ಈ ರೀತಿ ಇವರ ಮಾತುಗಳನ್ನು ಕೇಳಿ ಮೈಂಡಿ ಕಿ ನ್ಸ್ ಗೆ ಪ್ರೀತಿ ಹುಟ್ಟುತ್ತದೆ. ೨೦೦೯ ರಲ್ಲಿ ತಮ್ಮ ಲವ್ ಪ್ರಪೋಸ್ ಮಾಡಿದ ಮೈಂಡಿ ಕಿ ನ್ಸ್ ಮೂರು ವರ್ಷದ ನಂತರ ಇಬ್ಬರೂ ವಿವಾಹ ಆಗುತ್ತಾರೆ. ಆಗ ಇವರ ವಯಸ್ಸು ೩೧ ವರ್ಷ ಹಾಗೂ ಇವರ ಎತ್ತರ ಬರೀ ೯೧ ಸೆಂಟಿಮೀಟರ್. ಆದರೆ ಮೈಂಡಿ ಕಿ ನ್ಸ್ ವಯಸ್ಸು ಆಗ ಕೇವಲ ೧೯ ವರ್ಷ ಮಾತ್ರ ಹಾಗೂ ಎತ್ತರ ೧೬೭ ಸೆಂಟಿಮೀಟರ್ ಇತ್ತು. ಇದರಿಂದಾಗಿ ಇವರು ಪ್ರಪಂಚದ ತುಂಬಾ ಪ್ರಸಿದ್ಧಿ ಆಗುತ್ತಾರೆ. ಆದರೆ ಕೆಲವರು ಈ ಹುಡುಗಿ ಕೆಲ್ವಲ ಹಣದ ಸಲುವಾಗಿ ಮದುವೆ ಆಗಿದ್ದಾಳೆ ಎಂದು ಹೇಳುತ್ತಾರೆ. ಕೇವಲ ಹಣಕ್ಕಾಗಿ ವಿವಾಹ ಆಗಿದ್ದರೆ ಈಗಾಗಲೇ ವಿಚ್ಛೇದನ ಆಗಿರಬೇಕಿತ್ತು ಆದರೆ ಇವರಿಬ್ಬರೂ ಸಂತೋಷದಿಂದ ಇದ್ದಾರೆ.

ಕ್ರಿಸ್ ಅಂಡ್ ಲೀಸಾ ಪಿತ್ಮನ್ :ಇವರಿಬ್ಬರೂ ಕೂಡಾ ಅತ್ಯಂತ ಬಲಶಾಲಿ ಜೋಡಿ ಎಂದು ಗಿನ್ನಿಸ್ ರೆಕಾರ್ಡ್ ಬರೆದಿದ್ದಾರೆ. ಕ್ರಿಸ್ ೩೧೫ ವುಡ್ ಬೋರ್ಡ್ ಗಳನ್ನು ಕೈಯ್ಯಲ್ಲಿ ಒಡೆದಿದ್ದಾರೆ. ಲೀಸಾ ೨೧೩ ವುಡ್ ಬೋರ್ಡ್ ಗಳನ್ನು ಕೈಯ್ಯಲ್ಲಿ ಒಡೆದಿದ್ದಾರೆ. ಇವರು ಈ ಸಾಧನೆ ಮಾಡುವುದಕ್ಕೂ ಮೊದಲೇ ಇವರ ವಿವಾಹ ಆಗಿತ್ತು. ನಾವೂ ಕೂಡಾ ಏನಾದರೂ ಸಾಧನೆ ಮಾಡಬೇಕು ಎಂದು ಕಷ್ಟ ಪಟ್ಟು ಟ್ರೀನಿಂಗ್ ತೆಗೆದುಕೊಂಡು ಈ ರೆಕಾರ್ಡ್ ಸಾಧಿಸಿದ್ದಾರೆ.

Leave a Comment

error: Content is protected !!