ದಂತದ ಗೊಂಬೆ ಹಾಗಿರುವ ದುನಿಯಾ ವಿಜಯ್ ಮಗಳ ಸೌಂದರ್ಯ ನೋಡಿದರೆ ಶಾಕ್ ಆಗ್ತೀರಾ

ದುನಿಯಾ ವಿಜಯ್ ಅವರು ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. ಬೆಂಗಳೂರಿಗೆ ಒಂದು ಕಾಲದಲ್ಲಿ ಖಾಲಿ ಜೇಬಿನಲ್ಲಿ ಬಂದ ವ್ಯಕ್ತಿ ಇಂದು ಕರ್ನಾಟಕದಕ್ಲಿ ದೊಡ್ಡ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸ್ವಂತ ಟ್ಯಾಲೆಂಟ್ ಮತ್ತು ಪರಿಶ್ರಮದಿಂದ ಮೇಲೆ ಬಂದಿರುವ ದುನಿಯಾ ವಿಜಯ್ ಅವರು ಹಲವಾರು ಯುವಕರಿಗೆ ಸ್ಫೂರ್ತಿದಾಯಕವಾಗಿದ್ದಾರೆ. ಖಳ ನಾಯಕನಾಗಿ ಸಿನಿಮಾರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್ ಇಂದು ಬ್ಯುಸಿಯೇಸ್ಟ್ ನಾಯಕನಾಗಿದ್ದಾರೆ.

ಸಿನಿಮಾ ಬದುಕಿನಲ್ಲಿ ದುನಿಯಾ ವಿಜಿ ಅವರು ಏರುಪೇರುಗಳನ್ನು ಕಂಡಿದ್ದಾರೆ ಹಾಗೇ ದುನಿಯಾ ವಿಜಯ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಕೂಡ ಹಲವಾರು ಏಳು ಬೀಳುಗಳನ್ನು ಅನುಭವಿಸಿದ್ದಾರೆ. 1999 ರಲ್ಲಿ ದುನಿಯಾ ವಿಜಯ್ ಅವರು ನಾಗರತ್ನ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಸುಮಾರು ಹದಿನಾಲ್ಕು ವರ್ಷಗಳ ಕಾಲ ಇಬ್ಬರೂ ಸುಖಸಂಸಾರವನ್ನು ನಡೆಸಿದರು. ದುನಿಯಾ ವಿಜಿ ನಾಗರತ್ನಗೆ 3 ಜನ ಮುದ್ದಾದ ಮಕ್ಕಳು ಹುಟ್ಟಿದರು. ಆದರೆ ಕೆಲವೇ ಕೆಲವು ವರ್ಷಗಳ ನಂತರ ಇವರ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿತ್ತು.

2013 ರಲ್ಲಿ ನಾಗರತ್ನ ಗೆ ದುನಿಯಾ ವಿಜಯ್ ವಿಚ್ಚೇದನವನ್ನು ಕೊಟ್ಟಿದ್ದಾರೆ. ತದನಂತ 2016 ರಲ್ಲಿ ದುನಿಯಾ ವಿಜಯ್ ಅವರು ಕೀರ್ತಿ ಗೌಡ ಎಂಬ ನಾಯಕಿಯನ್ನು ವಿವಾಹವಾಗಿದ್ದಾರೆ. ದುನಿಯಾ ವಿಜಯ್ ಮತ್ತು ನಾಗರತ್ನ ವಿಚ್ಛೇದನ ಪಡೆದ ನಂತರ ನಾಗರತ್ನ ಮತ್ತು ಇಬ್ಬರು ಹೆಣ್ಣು ಮಕ್ಕಳು ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಪತ್ನಿ ಕೀರ್ತಿ ಮತ್ತು ಮಗ ಸಾಮ್ರಾಟ್ ಜೊತೆ ವಾಸವಾಗಿದ್ದಾರೆ. ವಿಜಿಯವರ ಇಬ್ಬರು ಹೆಣ್ಣುಮಕ್ಕಳಿಗೆ ತಂದೆಗಿಂತ ತಾಯಿಯೆಂದರೆ ಜಾಸ್ತಿ ಪ್ರೀತಿ.

ನಾಗರತ್ನ ಮತ್ತು ದುನಿಯಾ ವಿಜಯ್ ಗೆ ಮೋನಿಕಾ ಮತ್ತು ಮೋನಿಷಾ ಎಂಬ ಮುದ್ದಾದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅದರಲ್ಲೂ ಮೋನಿಷಾ ಎಂಬ ಚಿಕ್ಕ ಮಗಳು ನೋಡಲಿಕ್ಕೆ ಯಾವ ಹೀರೋಯಿನ್ ಗೂ ಕಡಿಮೆಯಿಲ್ಲ. ಮೋನಿಷಾ ಸ್ವಂತ ಉದ್ಯಮವೊಂದನ್ನು ಕೂಡ ಇತ್ತೀಚೆಗೆ ಶುರುಮಾಡಿದ್ದಾಳೆ. ಶುಗರ್ ಬೈ ಮೋನಿಷಾ ಎಂಬ ಬಟ್ಟೆ ವ್ಯಾಪಾರ ಮಾಡುವ ಆನ್ ಲೈನ್ ಶಾಪಿಂಗ್ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮೋನಿಷಾ ಮಾಡೆಲಿಂಗ್ ಮತ್ತು ಫ್ಯಾಷನ್ ಡಿಸೈನ್ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾಳೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದಾಳೆ. ತಂದೆಯ ಹಾಗೆ ಮೋನಿಷಾ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಎಲ್ಲ ಸಾಧ್ಯತೆಗಳು ಕೂಡ ಇವೆ .

ದುನಿಯಾ ವಿಜಯ್ ಮಗಳು ಮೋನಿಷಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟೀವ್ ಆಗಿ ಇರುತ್ತಾಳೆ. ಹೊಸ ಹೊಸ ಫೋಟೋ ಶೂಟ್ ಗಳನ್ನು ಮಾಡಿಸಿ ವಿಧವಿಧವಾದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ. ಮೋನಿಷಾ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೆಸರನ್ನು ಮೋನಿಷಾ ವಿಜಯ್ ಅಂತ ಇಟ್ಟುಕೊಂಡಿದ್ದಾಳೆ. ಆದರೆ ತಂದೆ ದುನಿಯಾ ವಿಜಯ್ ಅವರ ಇನ್ ಸ್ಟಾಗ್ರಾಂ ಅಕೌಂಟ್ ಅನ್ನು ಈಕೆ ಫಾಲೋ ಮಾಡದೇ ಇರುವುದು ವಿಲಕ್ಷಣ. ಒಟ್ಟಿನಲ್ಲಿ ಮೋನಿಷಾ ಅವರ ಬ್ಯೂಟಿ ಗೆ ನೆಟ್ಟಿಗರು ಮನಸೋತಿದ್ದಾರೆ.

Leave A Reply

Your email address will not be published.

error: Content is protected !!