ಮಂತ್ರಾಲಯದ ಗುರು ರಾಘವೇಂದ್ರ ರಾಯರ ದರ್ಶನ ಪಡೆದ ಹಿರಿಯ ನಟ ದೇವರಾಜ್ ಕುಟುಂಬ

ಕಳೆದ ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾರಳಗದ ಹಿರಿಯ ನಟ ದೇವರಾಜ್ ಮತ್ತು ಕುಟುಂಬಸ್ಥರು ಆಂಧ್ರಪ್ರದೇಶದಲ್ಲಿ ಇರುವಂತಹ ಗುರು ರಾಘವೇಂದ್ರ ರಾಯರ ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ತೆರಳಿ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ಇದರ ಕೆಲವು ಸುಂದರ ಫೋಟೋಗಳನ್ನು ದೇವರಾಜ್ ಅವರ ಮನೆ ಸೊಸೆ ರಾಗಿಣಿ ಚಂದ್ರನ್(Ragini Chandran) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಭಾರಿ ವೈರಲ್ ಆಗಿದ್ದಾರೆ.

ಕನ್ನಡ ಸಿನಿಮಾ ರಂಗದ ಕಾಲದಲ್ಲಿ ತಮ್ಮ ಅದ್ಭುತ ಗತ್ತು ಗಾಂಭೀರ್ಯ ಹಾಗೂ ಧ್ವನಿಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಂತಹ ಡೈನಮಿಕ್ ಹೀರೋ ದೇವರಾಜ್(Dynamic hero Devraj) ಅವರು ಇಂದಿಗೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುತ ನೋಡುಗರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಇದರ ಜೊತೆ ಜೊತೆಗೆ ತಮ್ಮ ಇಬ್ಬರೂ ಮಕ್ಕಳನ್ನು ಸಿನಿಮಾ ಕ್ಷೇತ್ರಕ್ಕೆ ಕರೆತಂದಿರುವ ಪ್ರಜ್ವಲ್ ದೇವರಾಜ್(Prajwal Devraj) ಪ್ರತಿ ಸಿನಿಮಾದಲ್ಲಿ ಬೆನ್ನ ಹಿಂದೆ ನಿಂತು ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಾರೆ.

ಅದರಂತೆ ಪ್ರಜ್ವಲ್ ದೇವರಾಜ್ ಹಾಗು ಪ್ರಣಂ ದೇವರಾಜ್ ಇಬ್ಬರೂ ಕೂಡ ತಮ್ಮದೇ ಆದ‌ವಿಶೇಷ ಜಾನರ್ ಇರುವ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿದ್ದು, ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳ ಮೂಲಕ ರಂಜಸುತ್ತಿದ್ದಾರೆ. ಇನ್ನೂ ಸಿನಿಮಾ ಶೂಟಿಂಗ್ ಸಮಯದ ನಡುವೆಯೂ ಬಿಡುವು ಮಾಡಿಕೊಂಡು ತಮ್ಮ ಅಮೂಲ್ಯವಾದಂತಹ ಸಮಯವನ್ನು ಕಳೆಯುವ ಪ್ರಜ್ವಲ್ ದೇವರಾಜ್(Prajwal Devraj) ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ತಂದೆ ತಾಯಿ ತಮ್ಮ ಹಾಗೂ ಹೆಂಡತಿಯೊಂದಿಗೆ ಆಂಧ್ರಪ್ರದೇಶದಲ್ಲಿ ಇರುವಂತಹ ಗುರು ರಾಘವೇಂದ್ರ ರಾಯರ ಪಿಣ್ಯ ಸ್ಥಳ ಮಂತ್ರಾಲಯಕ್ಕೆ ತೆರಳಿದ್ದು,

ಆ ಸಮಯದಲ್ಲಿ ಕುಟುಂಬಸ್ಥರೆಲ್ಲರೂ ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು,‌ ಇದನ್ನು ರಾಗಿಣಿ ಚಂದ್ರನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ಮನೆ ಮಂದಿಯೆಲ್ಲ ಧಾರ್ಮಿಕ ಉಡುಪಿನಲ್ಲಿ ಕಂಗೊಳಿಸಿದ್ದು ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೇವರ ಆಶೀರ್ವಾದ ಪಡೆದುಕೊಳ್ಳುವುದರ ಜೊತೆಗೆ ಮಂತ್ರಾಲಯದ ಶ್ರೀಗಳೊಂದಿಗೆ ಮಾತುಕತೆ ನಡೆಸಿ ದೇವಸ್ಥಾನದ ಆಗುಹೋಗುಗಳನ್ನು ದೇವರಾಜ್ ವಿಚಾರಿಸುತ್ತಿರುವಂತಹ ಸಂದರ್ಭದಲ್ಲಿ ತೆಗೆಯಲಾದಂತಹ ಫೋಟೋಗಳು ನೆಟ್ಟುಗಳನ್ನು ಸೆಳೆದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!