ಮಾತಿನಮಲ್ಲಿ ಅನುಶ್ರೀ ಅವರ 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ, ಅದ್ದೂರಿ ಸೆಲೆಬ್ರೇಷನ್ ಫೋಟೋಸ್ ಇಲ್ಲಿವೆ

ಸ್ನೇಹಿತರೆ, ತಮ್ಮ ಚಿಟಪಟ ಮಾತುಗಾರಿಕೆಯ ಮೂಲಕವೇ ಕನ್ನಡ ಸಿನಿಮಾ ರಂಗದ ನಂಬರ್ ಒನ್ ಆಂಕರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿರುವಂತಹ ಅನುಶ್ರೀ ಅವರು ಎಂದಿಗೂ ಕೂಡ ಸಾಕಷ್ಟು ರಿಯಾಲಿಟಿ ಶೋಗಳನ್ನು ಹಾಗೂ ಸಿನಿಮಾ ಕುರಿತಾದ ಕಾರ್ಯಕ್ರಮಗಳನ್ನು ಬಹಳ ಸುಂದರವಾಗಿ ನಡೆಸಿಕೊಡುವ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ಅದ್ಭುತ ಡ್ಯಾನ್ಸರ್ ಹಾಗೂ ನಟಿಯಾಗಬೇಕೆಂಬ ಆಸೆಯಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಅನುಶ್ರೀಯವರು ಆರಂಭಿಕ ದಿನಗಳಲ್ಲಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಅನಾವರಣಗೊಳಿಸಿದರು. ಆನಂತರ ಒಂದೆರಡು ಶೋಗಳನ್ನು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ನಿರೂಪಣೆ ಮಾಡಿದ ಅನುಶ್ರೀ ಅವರಿಗೆ ಆಂಕರಿಂಗ್ ವಿಭಾಗ ಕೈಬೀಸಿ ಕರೆಯುತ್ತದೆ ಎಂದರೆ ತಪ್ಪಾಗಲಾರದು.

ಸಿಕ್ಕಂತಹ ಅವಕಾಶ ಸದುಪಯೋಗ ಪಡಿಸಿಕೊಂಡಂತಹ ಅನುಶ್ರೀ ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಮುಂತಾದ ರಿಯಾಲಿಟಿ ಶೋ ಗಳನ್ನು ನಿರೂಪಣೆ ಮಾಡುತ್ತಾ ಕನ್ನಡಿಗರ ಪ್ರೀತಿಯನ್ನು ಗಳಿಸಿಕೊಳ್ಳುತ್ತಲೆ ಇದ್ದಾರೆ. ಕೇವಲ ನಿರೂಪಣೆಗೆ ಮಾತ್ರ ಸೀಮಿತವಾಗದೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಹಾಗೂ ಸಹ ನಟಿಯಾಗಿ ಬಣ್ಣ ಹಚ್ಚಿರುವ ಅನುಶ್ರೀ ತಮ್ಮ ನಟನ ಕೌಶಲ್ಯವನ್ನು ಜನರಿಗೆ ಪರಿಚಯಿಸಿದ್ದು,

ವಿವಿಧ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದು ಇತರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅನುಶ್ರೀ(Anushree) ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮ 36ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಇವರ ಬರ್ತಡೇಗೆ ಕನ್ನಡ ಸಿನಿಮಾ ರಂಗದ ಸಾಕಷ್ಟು ಕಲಾವಿದರು ಹಾಗೂ ಸ್ಟಾರ್ ನಟ ನಟಿಯರು ಭಾಗಿಯಾಗಿ ಶುಭ ಹಾರೈಸಿದರು.

ಇನ್ನು ಪ್ರಪ್ರಥಮ ಬಾರಿಗೆ ತಮ್ಮ ಸ್ನೇಹಿತರ ಬಳಗದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅನುಶ್ರೀ ಅವರು ಅದರ ಕೆಲ ಸುಂದರ ಫೋಟೋಸ್ಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram Account) ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ನನ್ನ ಹುಟ್ಟುಹಬ್ಬವನ್ನು ಹೊರಗೆ ಆಚರಿಸಿಕೊಂಡಿದ್ದು ಇದು ತುಂಬಾ ವಿಶೇಷವಾದ ದಿನವಾಗಿತ್ತು, ಇದರ ವಿಡಿಯೋ ಹಾಗೂ ಫೋಟೋಗಳನ್ನು ಸದ್ಯದಲ್ಲೆ ಹಂಚಿಕೊಳ್ಳುತ್ತೇನೆ.

ನನ್ನ ದಿನವನ್ನು ಮತ್ತಷ್ಟು ವಿಶೇಷವಾಗಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂಬ ಶೀರ್ಷಿಕೆ ಬರೆದು ಹಾಸಿಗೆಯ ಮೇಲೆ ಕುಳಿತು ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಫೋಟೋಗಳನ್ನು ಅನುಶ್ರೀ(Anushree) ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಹುಟ್ಟು ಹಬ್ಬದ ದಿನ ರಾತ್ರಿ ಅನು ಶ್ರೀಯವರ ಗೆಳೆಯರ ಬಳಗ ಹಾಗೂ ಸಾಕಷ್ಟು ಕಲಾವಿದರು ಒಟ್ಟಿಗೆ ಸೇರಿ ವಿಶೇಷವಾದ ಬಲೂನ್ ಹಾಗೂ ಲೈಟಿಂಗ್ ಡೆಕೋರೇಷನ್ ಮಾಡಿಸಿ ಅನುಶ್ರೀ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಜೊತೆಗೆ ನಟ ಶಿವರಾಜ್ ಕುಮಾರ್(Shivaraj Kumar) ಮತ್ತು ಗೀತಕ್ಕ(Geethakka) ದಂಪತಿಗಳು ಕೂಡ ಅನುಶ್ರೀ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಕೇಕ್ ತಿನ್ನಿಸುವ ಮೂಲಕ ಶುಭ ಹಾರೈಸಿದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!