Jai Jagadish: ಹಿರಿಯ ನಟ ಜೈ ಜಗದೀಶ್ ಅವರ ಸುಂದರ ಕುಟುಂಬ, ಇವರ 3 ಹೆಣ್ಮಕ್ಕಳು ಯಾವ ಬಾಲಿವುಡ್ ಹೀರೋಯಿನ್ ಗಳಿಗೂ ಕಡಿಮೆ ಇಲ್ಲ

Jai Jagadish Kannada Actor Daughter: ಸ್ನೇಹಿತರೆ ತಮ್ಮ ಅದ್ಭುತ ಅಭಿನಯದ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿರುವಂತಹ ನಟ ಜೈ ಜಗದೀಶ್(Jai Jagadish) ಯಾವುದೇ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಬಹು ಬೇಡಿಕೆಯನ್ನು ಹೊಂದಿದಂತಹ ನಟ. ಅಷ್ಟೇ ಅಲ್ಲದೆ ಬಿಗ್ ಬಾಸ್(Big Boss) ಸೀಸನ್ ಏಳರ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟು ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಹಲವು ದಿನಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದ ಜೈ ಜಗದೀಶ್

ವೀಕೆಂಡ್ ವಿತ್ ರಮೇಶ್ ಐದನೇ ಆವೃತ್ತಿಯ 19ನೇ ಸಾಧಕರಾಗಿ ಕೆಂಪು ಕುರ್ಚಿಯ ಮೇಲೆ ಕುಳಿತು ತಮ್ಮ ಬದುಕಿನ ಪಯಣವನ್ನು ಮೆಲುಕು ಹಾಕಿದರು. ಫಲಿತಾಂಶ ಎಂಬ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ಜೈ ಜಗದೀಶ್ ಅವರಿಗೆ ಚಿಕ್ಕಂದಿನಿಂದಲೂ ಪೈಲೆಟ್(pilot) ಆಗಬೇಕೆಂಬ ಆಸೆ ಇರುತ್ತದೆ, ಆದರೆ ಪುಟ್ಟಣ್ಣ ಕಣಗಾಲ್ ಅವರ ಪರಿಚಯದಿಂದ ನಟನಾಗಿ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗೆ ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ಚಿತ್ರಗಳ ಮೂಲಕ

ನಾಯಕನಟನಾಗಿ ಹೆಸರುವಾಸಿಯಾಗಿದ್ದಂತಹ ಜೈ ಜಗದೀಶ್(Jai Jagadish) ಅವರು ಮುಂದೆ ಖಳನಟನಾಗಿಯು ಹೆಸರು ಮಾಡಿದರು ಹಾಗೂ ಪೋಷಕ ನಟನಾಗಿಯು ಗುರುತಿಸಿಕೊಂಡರು. ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಹಲವು ವರ್ಷಗಳ ಹಿಂದೆ ಜೈ ಜಗದೀಶ ರೂಪ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಆದರೆ ಇವರಿಬ್ಬರ ಸಂಸರಿಕ ಜೀವನದಲ್ಲಿ ಮೂಡಿದ ಬಿರುಕಿನಿಂದ ವಿಚ್ಛೇ-ದನ ಪಡೆದು ದೂರಾಗಿ ವಿಜಯಲಕ್ಷ್ಮಿ ಸಿಂಗ್(Vijayalakshmi) ಅವರನ್ನು ಎರಡನೇ ಮದುವೆಯಾದರು.

ಈ ದಂಪತಿಗಳಿಗೆ ವೈದೇಹಿ, ವೈಭವಿ ಮತ್ತು ವೈ ಸಿರಿಯೆಂಬ ಮೂವರು ಹೆಣ್ಣು ಮಕ್ಕಳಿದ್ದು, ಅವರು ಕೂಡ ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುವ ಜೈ ಜಗದೀಶ್(Jai Jagadish) ಅವರ ಮೂವರು ಹೆಣ್ಣು ಮಕ್ಕಳು ಬಹಳ ರೂಪವತಿಯರಾಗಿದ್ದು, ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲದಂತಹ ಸೌಂದರ್ಯವನ್ನು ಹೊಂದಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಜೈ ಜಗದೀಶ್ ಅವರ ಸುಂದರ ಫ್ಯಾಮಿಲಿ ಫೋಟೋ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಈ ಸುಂದರ ಕುಟುಂಬಕ್ಕೆ ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ನೆಟ್ಟಿಗರು ತಮ್ಮ ಪ್ರೀತಿಯನ್ನು ಹರಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!