Malashree: ಮಾಲಾಶ್ರೀ ಮಗಳನ್ನು ಅಪ್ಪಿ ಮುತ್ತಿಟ್ಟು, ಜನ್ಮದಿನದ ಶುಭಾಶಯಗಳು ಎಂದು ವಿಶೇಷ ಸಂದೇಶ ಕಳುಹಿಸಿದ ನಟಿ ಶ್ರುತಿ ಫೋಟೋ ಭಾರಿ ವೈರಲ್

Malashree: ಸ್ನೇಹಿತರೆ, ನಟ ದರ್ಶನ್ ಅವರ ನಾಯಕಿಯಾಗಿ ರಾಕ್ ಲೈನ್ ವೆಂಕಟೇಶ್(Rockline Venkatesh) ಅವರ ನಿರ್ಮಾಣದಲ್ಲಿ ತಯಾರಾದ ಕಾಟೇರಾ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣವನ್ನು ಪ್ರಾರಂಭಿಸಿರುವಂತಹ ಕನಸಿನ ರಾಣಿ ಮಾಲಾಶ್ರೀ(Malashree) ಅವರ ಮಗಳು ಆರಾಧನಾ ರಾಮ್ ಕಳೆದ ಕೆಲವು ದಿನಗಳ ಹಿಂದೆ ತಮ್ಮ 22ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮ ತಾಯಿಯೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.‌

ಇವರ ವಿಶೇಷ ದಿನಕ್ಕೆ ಕುಟುಂಬಸ್ಥರು ಸ್ನೇಹಿತರು ಹಾಗೂ ಸಿನಿಮಾ ಸ್ಟಾರ್ಸ್ ಗಳು ಮತ್ತು ಅಭಿಮಾನಿಗಳ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂತು ಎಂದರೆ ತಪ್ಪಾಗಲಾರದು. ಇನ್ನು ತಮ್ಮ ಮಗಳ ಆರಾಧನಾ ಅವರ ಹುಟ್ಟು ಹಬ್ಬವನ್ನು ಮತ್ತಷ್ಟು ವಿಶೇಷ ಗೊಳಿಸಲು ತಮ್ಮ instagram ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡ ಶೃತಿ(Shruthi) ಅಮ್ಮನವರು ಸುಂದರವಾದ ಶೀಷಿಕೆ ಬರೆದು ಜನ್ಮದಿನದ ಶುಭ ಕೋರಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತೀರ ವೈರಲ್ ಆಗುತ್ತಿದ್ದು, ಅಮ್ಮ ಮಗಳ ಈ ಸುಂದರ ಭಾಂದವ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಚಿಕ್ಕಂದಿನಿಂದಲೂ ತಮ್ಮ ತಾಯಿಯಂತೆ ನಟಿಯಾಗಬೇಕೆಂಬ ಮಹಾದಾಸೆಯನ್ನು ಹೊಂದಿದ್ದಂತಹ ಆರಾಧನಾ ರಾಮ್(Aradhana Ram) ಅವರು ಕಾಟೇರಾ ಚಿತ್ರದ ಮೂಲಕ ಅದಾಗಲೇ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಬ್ಲಾಕ್ಬಸ್ಟರ್ ಹಿಟ್ ಯಶಸ್ಸನ್ನು ಕಂಡಿರುವ ಆರಾಧನಾ ಅವರ ನಟನೆಗೆ ಅಭಿಮಾನಿಗಳು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೀಗೆ ಮೊದಲ ಸಿನಿಮಾದಲ್ಲಿಯೇ ಕನ್ನಡಿಗರ ಪ್ರೀತಿ ಗಳಿಸುವಲ್ಲಿ ಆರಾಧನಾ ರಾಮ್ ಯಶಸ್ವಿಯಾಗಿದ್ದು, ಅವರಿಗೆ ಮತ್ತಷ್ಟು ಸ್ಟಾರ್ ನಿರ್ದೇಶಕರ ಸಿನಿಮಾಗಳು ಹರಸಿ ಬರುತ್ತಿವೆ. ಸದ್ಯದಲ್ಲೇ ತಮ್ಮ ಮುಂದಿನ ಚಿತ್ರದ ಕುರಿತು ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಿರುವ ಭರವಸೆಯನ್ನು ನೀಡಿದ್ದಾರೆ. ಆರಾಧನಾ ರಾಮ್ ಅವರು ಫೆಬ್ರವರಿ 2ನೇ ತಾರೀಕು 22ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ತಾಯಿ ಹಾಗೂ ತಮ್ಮನೊಂದಿಗೆ ಆಚರಿಸಿಕೊಂಡಿದ್ದು

ಇವರ ಹುಟ್ಟು ಹಬ್ಬದ ಅಂಗವಾಗಿ ಕನ್ನಡ ಸಿನಿಮಾ ರಂಗದ ಸಾಕಷ್ಟು ಕಲಾವಿದರ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಶ್ರುತಿ ಅವರು ಕಾಟೇರ ಸಿನಿಮಾ ಸಮಯದಲ್ಲಿ ತೆಗೆಯಲಾದಂತಹ ಕೆಲವು ಮುದ್ದಾದ ಫೋಟೋಗಳನ್ನು ಶೇರ್ ಮಾಡಿ “ಜನುಮದಿನದ ಶುಭಾಶಯಗಳು ಪುಟ್ಟ ಬದುಕಿನ ಎಲ್ಲಾ ಸಂತೋಷ ನಿನದಾಗಲಿ, ನಿನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಲಿ ಕೀರ್ತಿವಂತಳಾಗು ಅಮ್ಮನ ಕನಸು ನನಸು ಮಾಡು, ವನ್ಸ್ ಅಗೈನ್ ಹ್ಯಾಪಿ ಬರ್ತ್ಡೇ ಡಿಯರ್” ಎಂಬ ಶೀರ್ಷಿಕೆ ಬರೆದು ಆರಾಧನಾ (Aradhana) ಅವರನ್ನು ತಬ್ಬಿ ಮುತ್ತಿಡುತ್ತಿರುವಂತಹ ಫೋಟೋ ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!