Olle Huduga Pratham: ಒಳ್ಳೆ ಹುಡುಗ ಪ್ರಥಮ್ ಅವರ ಮದುವೆಯಲ್ಲಿ ಸ್ಯಾಂಡಲ್ವುಡ್ ತಾರೆಯರು, ವೈರಲ್ ಫೋಟೋಸ್ ಇಲ್ಲಿವೆ

Olle Huduga Pratham Marriage: ಸ್ನೇಹಿತರೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋನಲ್ಲಿ ಒಂದಾದ ಬಿಗ್ ಬಾಸ್ನ ಸೀಸನ್ 4 ಓರ್ವ ಕಾಮನ್ ಮ್ಯಾನ್ (Common man) ಆಗಿ ಪ್ರವೇಶ ಮಾಡಿದಂತಹ ಒಳ್ಳೆ ಹುಡುಗ ಪ್ರಥಮ್ ತಮ್ಮ ವಿಭಿನ್ನತೆ ಹಾಗೂ ಅದ್ಭುತ ಆಟ ವೈಕರಿಯಿಂದ ಕನ್ನಡಿಗರ ಮನಸ್ಸನ್ನು ಗೆದ್ದು ಆ ಆವೃತ್ತಿಯ ವಿಜೇತರ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡರು. ಹೀಗೆ ಬಿಗ್ ಬಾಸ್(Big boss) ಮನೆಯಿಂದ ಹೊರಬಂದ ನಂತರ ನಟ ಭಯಂಕರ, ದೇವರಂತ ಮನುಷ್ಯ, ಎಂಎಲ್ಎದಂತಹ ಚಿತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್ವುಡ್ನ ಭರವಸೆಯ ನಟನಾಗಿ ಹೊರ ಹೊಮ್ಮಿರುವ ಪ್ರಥಮ್ (Pratham) ಸದ್ಯ ಕರ್ನಾಟಕದ

ಅಳಿಯ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಇದೆಲ್ಲದರ ನಡುವೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಯೋಚಿಸಿ ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಂಡು, ಕಳೆದ ಕೆಲ ತಿಂಗಳ ಹಿಂದೆ ಮಂಡ್ಯ ಮೂಲದ ಬಾನುಶ್ರೀ(Bhanu shree) ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈಯಕ್ತಿಕ ಬದುಕಿನ ಕುರಿತು ಮಾಹಿತಿ ಹಂಚಿಕೊಂಡಿದ್ದ ಪ್ರಥಮ್ (Pratham) ಅವರು ನಿನ್ನೆ ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ

ಕಾಲಿಟ್ಟಿದ್ದು, ಕಳೆದ ವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಬಹಳ ಸರಳವಾಗಿ ಮದುವೆಯಾಗುತ್ತಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಅದರಂತೆ ಇವರ ಮದುವೆಗೆ ಆತ್ಮೀಯ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಿನಿ ಸೆಲೆಬ್ರಿಟಿಗಳಿಗೆ ಆಮಂತ್ರಣ ಪತ್ರ (Invitation card) ನೀಡಿದ್ದರು‌. ಅದರಂತೆ ನೆನಪಿರಲಿ ಸಿನಿಮಾ ಖ್ಯಾತಿಯ ಪ್ರೇಮ್ ಮತ್ತು ದಂಪತಿಗಳು(Prem couples),

ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ವಿನಯ್ ರಾಜಕುಮಾರ್ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿ ಊರ್ಮಿಳಾ ಇಶಾನಿ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Druva sarja) ಸೇರಿದಂತೆ ಮುಂತಾದ ಕಲಾವಿದರು ಬಂದು ನವ ಜೋಡಿಗಳನ್ನು ಹರಸಿ ಆಶೀರ್ವದಿಸಿದರು. ಸದ್ಯ ಪ್ರಥಮ್ (Pratham) ಅವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!