Pooja Gandhi: ಮದುವೆಯಾದ ಕೂಡಲೇ ಕುವೆಂಪು ಅವರ ಜನ್ಮ ಸ್ಥಳಕ್ಕೆ ಭೇಟಿ ನೀಡಿದ ಸ್ಟಾರ್ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ವಿಜಯ್ ದಂಪತಿಗಳು

Pooja Gandhi: ಸ್ನೇಹಿತರೆ, ಕಳೆದ ನವೆಂಬರ್ 29ನೇ ತಾರೀಕು 2023 ರಂದು ಮಳೆ ಹುಡುಗಿ ಪೂಜಾ ಗಾಂಧಿ(Pooja Gandhi) ಯವರು ತಮ್ಮ ಬಹುಕಾಲದ ಗೆಳೆಯ ಹಾಗೂ ಕನ್ನಡವನ್ನು ಕಲಿಸಿಕೊಟ್ಟಂತಹ ಗುರು ವಿಜಯ್ (Vijay) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಓರ್ವ ಸ್ಟಾರ್ ನಟಿಯಾದರೂ ಕೂಡ ಬಹಳ ಸಿಂಪಲ್ಲಾಗಿ ರಾಷ್ಟ್ರ ಕವಿ ಕುವೆಂಪು(Kuvempu) ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ದಂಪತಿಗಳು ಮದುವೆಯ ಮರುದಿನ ಕುವೆಂಪು ಅವರು ಹುಟ್ಟಿದಂತಹ ಪುಣ್ಯ ಭೂಮಿಗೆ ಭೇಟಿ ನೀಡಿ ಸಮಯ ಕಳೆದಿರುವಂತಹ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಎಲ್ಲಾ ಫೋಟೋಗಳು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಮೂಲತಃ ಬೇರೆ ಭಾಷೆಯವರಾದರೂ ಕೂಡ ಕಷ್ಟಪಟ್ಟು ಕನ್ನಡವನ್ನು ಕಲಿತು ಕನ್ನಡದ ಶ್ರೇಷ್ಠ ಕವಿ ಮಹಾಶಯರ ವಿಶೇಷ ಗ್ರಂಥಗಳನ್ನು ಓದಿ ಹಾಗೂ ಅದರ ಮಹತ್ವವನ್ನು ತಮ್ಮ ಅಭಿಮಾನಿಗಳಿಗೂ ಅರ್ಥೈಸುತ್ತಿರುವ ಪೂಜಾಗಾಂಧಿ ಅವರು ತಮ್ಮ ಬದುಕಿನ ಬಹುದೊಡ್ಡ ಗಳಿಗೆಯಾದ ಮದುವೆಯನ್ನು ಕೂಡ ಯಾವುದೇ ಹೆಚ್ಚಿನ ವೈಡೂರ್ಯತೆ ಆಡಂಬರವಿಲ್ಲದೆ ಬಹಳ ಸರಳವಾಗಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಹೊಸ ಬಾಳಿಗೆ ಕಾಲಿಟ್ಟಿರುವುದು ಎಲ್ಲರಿಂದ ಶ್ಲಾಘನೆಗೆ ಒಳಗಾಗಿದೆ.

ಹೀಗೆ ಮದುವೆಯಾದ ಬಳಿಕ ಎಲ್ಲರೂ ತಮ್ಮ ಸಂಗಾತಿಯೊಂದಿಗೆ ಹಾಯಾಗಿ ಕಾಲ ಕಳೆಯಲು ಮಾಲ್ಡೀಸ್ ಸ್ವಿಜರ್ಲ್ಯಾಂಡ್ಗೆಂದು ಹಾರಿದರೆ ನಟಿ ಪೂಜಾ ಗಾಂಧಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕುವೆಂಪು ಅವರ ಜನ್ಮ ಸ್ಥಳವಾದ ಚಿಕ್ಕಮಂಗಳೂರಿನ ಕುಪ್ಪಳ್ಳಿಗೆ ತೆರಳಿ ಅವರ ಸುಂದರವಾದ ಮನೆಯನ್ನು ವೀಕ್ಷಿಸಿದ್ದಾರೆ. ಆ ವೇಳೆ ಪೂಜಾ ಗಾಂಧಿ(Pooja Gandhi) ಅವರು ಸಾಂಪ್ರದಾಯಕವಾಗಿ ಸೀರೆಯುಟ್ಟು ಕೈ ಗಳ ತುಂಬ ಬಳೆ ಮಾಂಗಲ್ಯ ಸರ ಹಾಗೂ ಅಣೆತುಂಬ ಕುಂಕುಮ ಇಟ್ಟುಕೊಂಡು ಬಹಳ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ.

ಹೀಗೆ ಪೂಜಾ ಗಾಂಧಿ ಅವರ ಪ್ರತಿ ಇಷ್ಟಾರ್ಥಗಳನ್ನು ಮದುವೆಯಾದ ಮರುದಿನದಿಂದಲೂ ಈಡೇರಿಸಲು ಪ್ರಾರಂಭ ಮಾಡಿರುವಂತಹ ವಿಜಯ್ರವರು ಪೂಜಾ ಗಾಂಧಿಯವರಿಗೆ ಬಲು ಇಷ್ಟದ ಕವಿ ಮಹಾಶಯರಾದ ಕುವೆಂಪು ಅವರ ಜನ್ಮ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರ ಸಂತಸವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ನಟಿ ಪೂಜಾ ಗಾಂಧಿ(Pooja Gandhi) ಅವರು ಈ ಎಲ್ಲಾ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ನಿಮ್ಮಂತವರನ್ನು ನೋಡಿದರೆ ಬಹಳ ಖುಷಿಯಾಗುತ್ತೆ ಮೇಡಂ, ಕನ್ನಡದ ಕಂಪನ್ನು ಎಲ್ಲೆಡೆ ಹರಳಿಸಲು ಕನ್ನಡದವರೇ ಆಗಿರಬೇಕಂತೇನಿಲ್ಲ. ಎಂದೆಲ್ಲ ಕಮೆಂಟ್ ಮಾಡುತ್ತ ಪೂಜಾ ಗಾಂಧಿಯವರ ಕನ್ನಡ ತನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!