ತಮ್ಮ ಮುದ್ದಾದ ಮಗನೊಂದಿಗೆ ಕ್ಯೂಟೆಸ್ಟ್ ಫೋಟೋ ಶೂಟ್ ಮಾಡಿಸಿದ ರಾಧಾಕ ಲ್ಯಾಣ ನಟಿ ರಾಧಿಕಾ ರಾವ್

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ತಾರೆಯರು ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಒಂದಲ್ಲ ಒಂದು ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಾ ಸದಾ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಗಂಡು ಮಗು ಒಂದಕ್ಕೆ ಜನ್ಮ ನೀಡಿದಂತಹ ರಾಧಾಕಲ್ಯಾಣ ಸೀರಿಯಲ್(Radha Kalyana Serial) ನಾಯಕ ನಟಿ ರಾಧಿಕ ರಾವ್(Radhika Rao) ಅವರು ತಮ್ಮ ಮಗನ ಜೊತೆಗೆ ಫೋಟೋಗಳನ್ನು ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಮಗು ಜನಿಸಿದ ಆರಂಭಿಕ ವಾರಗಳಲ್ಲಿ ಪುಟ್ಟ ಕಂದಮ್ಮನನ್ನು ತಮ್ಮ ಅಂಗೈಯಲ್ಲಿ ಹಿಡಿದುಕೊಂಡು ಎಲ್ಲರ ಗಮನ ಸೆಳೆಯುವಂತಹ ವಿಶೇಷ ಫೋಟೋಶೂಟ್ ಮಾಡಿಸಿದ್ದು, ಈ ನಟಿ ಇದೀಗ ಮತ್ತೊಮ್ಮೆ ತಮ್ಮ ಮಗನನ್ನು ಅಪ್ಪಿ ಮುದ್ದಾಡುತ್ತಿರುವ ಕೆಲ ಸುಂದರ ಚಿತ್ರಗಳನ್ನು ತೆಗೆಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮನಂತೆ ಬಹಳ ಮುದ್ದಾಗಿ ಇರುವಂತಹ ರಾಧಿಕಾ ರಾವ್ ಅವರ ಮಗುವಿಗೆ ನೆಟ್ಟಿಗರು ಆಶೀರ್ವಾದ ಮಾಡುತ್ತಾ ಶುಭ ಹಾರೈಸುತಿದ್ದಾರೆ.

ಹೌದು ಗೆಳೆಯರೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ ರಾಧಾಕಲ್ಯಾಣ ಹಾಗೂ ಯುವರಾಣಿಯಂತಹ ಸಾಕಷ್ಟು ಸೀರಿಯಲ್ನಲ್ಲಿ ನಾಯಕ ನಟಿಯಾಗಿ ಅಭಿನಯಿಸಿ ತಮ್ಮ ಮುಗ್ಧ ಹಾಗೂ ಮನೋಜ್ಞ ನಟನೆಯ ಮೂಲಕವೇ ಕಿರುತೆರೆ ಪ್ರಿಯರ ಮನಸ್ಸನ್ನು ಸೆಳೆದಿದಂತಹ ರಾಧಿಕಾ ರಾಮ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತಸದ ಜೀವನವನ್ನು ಕಳೆಯುತ್ತಿದ್ದಾರೆ.

ಸದ್ಯ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿರುವ ರಾಧಿಕಾ ರಾವ್ ಅವರು ಎಂಟು ತಿಂಗಳ ಮಗುವನ್ನು ತಮ್ಮ ಕೈಯಲ್ಲಿ ಅಪ್ಪಿ ಹಿಡಿದು ಕ್ಯೂಟ್ ಆದ ಫೋಟೋಗಳನ್ನು ತೆಗೆಸಿದ್ದು, ಫೋಟೋದಲ್ಲಿ ಅಮ್ಮ ಮಗ ಇಬ್ಬರು ನೇರಳೆ ಬಣ್ಣದ ಉಡುಪಿನಲ್ಲಿ ಅವಳಿ ಜವಳಿಯಂತೆ ಕಾಣುತ್ತಿದ್ದಾರೆ. ಹೌದು ಗೆಳೆಯರೇ ರಾಧಿಕಾ ರಾವ್(Radhika Rao) ಅವರಂತೆ ಮಗ ಕೂಡ ಬಹಳ ಮುದ್ದು ಮುದ್ದಾಗಿದ್ದು ಮಗನ ಎಲ್ಲಾ ಕ್ಯೂಟೆಸ್ಟ್ ಫೋಟೋಗಳನ್ನು ಹಂಚಿಕೊಂಡು

“ ಇದು ನಿಜವಾದ ಪ್ರೀತಿಯನ್ನು ಆಚರಿಸುವ ತಿಂಗಳು ಎಂದು ನಾನು ಭಾವಿಸುತ್ತೇನೆ ಮತ್ತು ನನ್ನ ಅಭಿಪ್ರಾಯದಲ್ಲಿ ತಾಯಿಯು ತನ್ನ ಮಗುವಿನ ಬಗ್ಗೆ ಏನನ್ನು ಅನುಭವಿಸುತ್ತಾಳೆ ಎಂಬುದು ಬಹುಶಃ ಪ್ರೀತಿಯ ಶುದ್ಧತೆಯನ್ನು ತೋರುತ್ತದೆ. ಮತ್ತು ಅದು ನಿಜವಾದ ರೂಪವಾಗಿದೆ ಮಗುವಿಗೆ ತನ್ನ ತಾಯಿಯ ಬಗ್ಗೆ ಏನು ಅನಿಸುತ್ತದೆಯೋ ಅದು ಪ್ರೀತಿಯ ಶುದ್ಧ ರೂಪವಾಗಿದೆ.

ಅವನು ಯಾವಾಗಲೂ ತನ್ನ ಪಕ್ಕದಲ್ಲಿ ಅವಳನ್ನು ಬಯಸುತ್ತಾನೆ. ಕುಟುಂಬದ ಪ್ರತಿಯೊಬ್ಬರಿಗೂ ನಗು ವಿಭಿನ್ನವಾಗಿದೆ. ತನ್ನ ತಾಯಿ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ಆ ಸಂತೋಷದ ಮಿಂಚು, ಆ ಸಂತೋಷವು ಜೀವನದಲ್ಲಿ ವಿಶೇಶವಾದ ಸಂತೋಷವಾಗಿರುತ್ತೆ ಅಲ್ಲವೇ? ಇದನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂಬ ಸುಂದರವಾದ ಕ್ಯಾಪ್ಶನ್ ಬರೆದು ಮಗನನ್ನು ಮುದ್ದಾಡುತ್ತಿರುವ ರೀಲ್ಸ್ ವಿಡಿಯೋ ಒಂದನ್ನು ರಾಧಿಕಾ ರಾವ್(Radhika Rao) ಅವರು ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!