Roaring star Murali: ಹೆಂಡತಿ ಮಕ್ಕಳೊಂದಿಗೆ ರಜೆ ದಿನವನ್ನು ಸಂಭ್ರಮಿಸುತ್ತಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ

Roaring star Murali: ಸ್ನೇಹಿತರೆ, ಹಲವು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟ ಶ್ರೀಮುರಳಿಯವರು ಯಶಸ್ವಿ ಚಿತ್ರಗಳ ಮೂಲಕ ಇಂದಿಗೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಮದಗಜ (Madagaja) ಚಿತ್ರದ ಬಳಿಕ ನಿರ್ದೇಶಕ ಡಾಕ್ಟರ್ ಸುನಿ ಅವರ ಅದ್ಭುತ ಆಕ್ಷನ್ ಕಟ್ ನಲ್ಲಿ ಮೂಡಿ ಬರುತ್ತಿರುವ ಭಗೀರ ಸಿನಿಮಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಹೆಂಡತಿ ಮಕ್ಕಳಿಗೆ ಸಮಯ ನೀಡುವುದನ್ನು ಎಂದಿಗೂ ಮರೆಯದ ಶ್ರೀಮುರುಳಿಯವರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮನೆಯವರೊಟ್ಟಿಗೆ ಕಳೆಯುವ ಸುಂದರ ಕ್ಷಣಗಳನ್ನು ಕ್ಯಾಪ್ಚರ್ ಮಾಡಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಶ್ರೀಮುರಳಿ ತಮ್ಮ instagram ನಲ್ಲಿ ಮಾಡಿರುವಂತಹ ಮುದ್ದಾದ ಫ್ಯಾಮಿಲಿ ಫೋಟೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಗೆಳೆಯರೇ ಶ್ರೀಮುರಳಿ ಅವರು ಹಂಚಿಕೊಂಡಿರುವಂತಹ ಫೋಟೋದಲ್ಲಿ ತಮ್ಮ ಹೆಂಡತಿ ವಿದ್ಯಾ(vidhya) ಹಾಗೂ ಇಬ್ಬರು ಮುದ್ದಿನ ಮಕ್ಕಳಾದ ಅತೀವ ಮತ್ತು ಅಗಸ್ತ್ಯ ಜೊತೆಗೆ ಮುದ್ದಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಶ್ರೀಮುರಳಿ ಮತ್ತು ವಿದ್ಯಾ ಅವರದ್ದು ಲವ್ ಮ್ಯಾರೇಜ್ ಶ್ರೀ ಮುರುಳಿ(Sri Murali) 1999 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿರುವಾಗಲೇ ವಿದ್ಯಾ ಅವರನ್ನು ತಮ್ಮ ಪ್ರೀತಿಯ ಬಲೆಗೆ ಬೀಳಿಸಿಕೊಂಡರು. ಹೌದು ಸ್ನೇಹಿತರೆ ಪ್ರೀತಿ ಪ್ರೇಮದಲ್ಲೆಲ್ಲ ಆಸಕ್ತಿ ಜೂನಿಯರ್ ವಿದ್ಯಾ ಅವರನ್ನು ನೋಡಿದ ಮೊದಲ ನೋಟದಲ್ಲಿಯೇ ಪ್ರೇಮಾಂಕರವಾಗುತ್ತದೆ. ಹೀಗೆ ಹತ್ತು ವರ್ಷಗಳ ಕಾಲ ಪ್ರೀತಿಸಿ, ಆನಂತರ ಮನೆಯವರ ಮುಂದೆ ತಮ್ಮ ಪ್ರೀತಿ ವಿಚಾರವನ್ನು ಹೇಳಿಕೊಳ್ಳುತ್ತಾರೆ.

ವಿದ್ಯಾ ಅವರ ಮನೆಯಿಂದ ಇವರ ಪ್ರೀತಿಗೆ ವಿರೋಧ ವ್ಯಕ್ತವಾಗುತ್ತದೆ ಅನಂತರ ಕುಟುಂಬಸ್ಥರೆಲ್ಲ ಕುಳಿತು ಇಬ್ಬರಿಗೂ ಮದುವೆ ಮಾಡುವ ನಿರ್ಧಾರ ಕೈಗೊಂಡರು. ಶ್ರೀ ಮುರುಳಿ(Sri Murali) ವಿದ್ಯಾ ಜೋಡಿಗಳು ಬಹಳ ಅದ್ದೂರಿಯಾಗಿ ಗುರು ಹಿರಿಯರ ಹಾಗೂ ಕನ್ನಡ ಸಿನಿಮಾ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಶ್ರೀಮುರಳಿಯವರಂತೆ ವಿದ್ಯಾ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕಾಸ್ಟ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡದ ಬಹು ಯಶಸ್ವಿ ಸಿನಿಮಾಗಳಾದ ಉಗ್ರಂ ಹಾಗೂ ಕೆಜಿಎಫ್ ಸರಣಿಗಳ ಗಾಡ್ ಫಾದರ್ ಪ್ರಶಾಂತ್ ನೀಲ್(Prashanth Neel) ಅವರ ಸಹೋದರಿಯೇ ವಿದ್ಯಾ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಮುದ್ದಾದ ಜೋಡಿ ಹಕ್ಕಿಗಳ ಸುಂದರ ಕುಟುಂಬದ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಅಭಿಮಾನಿಗಳು ಈ ಕ್ಯೂಟ್ ಕಪಲ್ ಮೇಲೆ ಯಾರ ಕಣ್ಣು ತಾಕದಿರಲಿ ದೇವರೇ ಎಂದು ಬೇಡುತ್ತ ನೂರು ಕಾಲ ಸುಖವಾಗಿ ಬಾಳಿ ಎಂದು ಆಶೀರ್ವದಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!