Vinay Gowda: ಬಿಗ್ ಬಾಸ್ ಮನೆಯ ಆನೆ ವಿನಯ್ ಗೌಡ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ

Vinay Gowda: ಸ್ನೇಹಿತರೆ ಕನ್ನಡ ಕಿರುತೆರೆಯ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸುತ್ತಾ ಹೆಸರುವಾಸಿಯಾಗಿದ್ದಂತಹ ವಿನಯ್ ಗೌಡ (Vinay Gowda) ಮತ್ತು ಅಕ್ಷತಾ ಗೌಡ ದಂಪತಿಗಳು ಬಾಲ್ಯದಿಂದಲೂ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದು ತಮ್ಮ ಮುದ್ದಿನ ಮಗನೊಂದಿಗೆ ಸುಖ ಸಂಚಾರಿಕ ಜೀವನವನ್ನು ನಡೆಸುತ್ತಿದ್ದಾರೆ. ಬಿಗ್ ಬಾಸ್ ಬರುವ ಮೊದಲು ತಕ್ಕ ಮಟ್ಟದಲ್ಲಿ ಫೇಮಸ್ ಆಗಿದ್ದಂತಹ ಈ ಜೋಡಿ ಹಕ್ಕಿಗಳು ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ಬಳಿಕ ಮತ್ತಷ್ಟು ಫೇಮಸ್ ಆಗಿ ಆದರ್ಶ ದಂಪತಿಗಳಾಗಿದ್ದಾರೆ ಎಂದರೆ ತಪ್ಪಾಗಲಾರದು.

ಪ್ರತಿ ಹಂತದಲ್ಲಿಯೂ ಗಂಡನ ನಡೆಯನ್ನು ಪ್ರೋತ್ಸಾಹಿಸುವಂತಹ ಪತ್ನಿ ತನ್ನ ಪ್ರತಿ ಕೆಲಸದಲ್ಲಿಯೂ ಹೆಂಡತಿಯನ್ನು ಆರಾಧಿಸುವಂತಹ ಪತಿ ಎಂತಹ ಸಂದರ್ಭ ಬಂದರು ಕೂಡ ಒಬ್ಬರನ್ನು ಮತ್ತೊಬ್ಬರು ಬಿಟ್ಟುಕೊಡದೆ ಬಹಳ ಅನ್ಯೋನ್ಯವಾಗಿ ಇರುವಂತಹ ಈ ಜೋಡಿ ಹಕ್ಕಿಗಳು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ನಂತರ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ಹೌದು ಸ್ನೇಹಿತರೆ, ಕಳೆದ ಕೆಲವು ವಾರಗಳ ಹಿಂದಷ್ಟೇ ಮುಗಿದಂತ ಬಿಗ್ ಬಾಸ್ ಸೀಸನ್ ಹತ್ತಿರ ಮೂರನೇ ರನ್ನರಪ್ಪಾಗಿ ಆಟದಿಂದ ಹೊರ ನಡೆದಂತಹ ವಿನಯ್ ಗೌಡ ಕಾರ್ಯಕ್ರಮದ ಉದ್ದಕ್ಕೂ ತಮ್ಮ ಗತ್ತು ಗರ್ವವನ್ನು ಕಾಯ್ದುಕೊಂಡು ಬಂದರು ಎಂತಹ ಸಮಯದಲ್ಲಿಯೂ ಕುಗ್ಗದೆ ತಮ್ಮ ಎದುರಾಳಿಯನ್ನು ತಮ್ಮ ತೋಳ್ಬಲ ಹಾಗೂ ಮಾತಿನ ಚಾಣಕ್ಯತನದಿಂದಲೇ ಕುಗ್ಗಿಸಿ ಬಿಡುವಂತಹ ಪ್ರತಿಭೆಯನ್ನು ಹೊಂದಿದ್ದ ವಿನಯ್ ಗೌಡ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಹೆಚ್ಚಿತ್ತು.

ಆದರೆ ವೋಟ್ ಗಳ ಆಧಾರದ ಮೇಲೆ ನಟ ಕಾರ್ತಿಕ್ ಮಹೇಶ್ ಅವರು ಈ ಬಾರಿಯ ವಿಜೇತರ ಟ್ರೋಫಿ ಯನ್ನು ತಮ್ಮ ಮುಡುಗೇರಿಸಿಕೊಂಡರು. ಗೆಳೆಯನ ಗೆಲುವನ್ನು ಸಂಭ್ರಮಿಸಿದಂತಹ ವಿನಯ್ ಗೌಡ ಮತ್ತಷ್ಟು ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು. ವಿನಯ್ ಗೌಡ ತಮ್ಮ ಹೆಂಡತಿ ಹಾಗೂ ಮಗನೊಂದಿಗೆ ಕ್ವಾಲಿಟಿ ಸಮಯವನ್ನು ಕಳೆದಿದ್ದು, ಕಾರ್ನಲ್ಲಿ ನಲ್ಲಿ ಪ್ರಯಾಣಿಸಬೇಕಾದರೆ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಅಕ್ಷತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದನ್ನು ಕಂಡಂತಹ ನೆಟ್ಟಿಗರು ಕಲಿಯುಗದ ರಾಮ ಸೀತೆ, ಕ್ಯೂಟ್ ಕಪಲ್ಸ್, ಬಹಳ ಮುದ್ದಾಗಿ ಕಾಣುತ್ತಿದ್ದೀರಾ, ನಿಮ್ಮ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ ತಾಕದೆ ಇರಲಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ವಿನಯ್ ಗೌಡ ಕುಟುಂಬವನ್ನು ಕೊಂಡಾಡುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!