ಕುಡಿದು ಮಂಟಪಕ್ಕೆ ಬಂದ ವರ; ಮಧುಮಗಳಿಗೆ ಹಾರ ಹಾಕುವ ಬದಲು ಯಾರಿಗೆ ಹಾರ ಹಾಕಿಬಿಟ್ಟ ನೋಡಿ!

ಮದುವೆ ಅನ್ನೋದು ಎಲ್ಲರಿಗೂ ಒಂದು ಕನಸು. ಅದರಲ್ಲೂ ಗಂಡು ಹಾಗೂ ಹೆಣ್ಣಿನ ಮನೆಯವರು ಸಂಭ್ರಮದಿಂದ ತಮ್ಮ ಮಕ್ಕಳ ಮದುವೆಯನ್ನ ಮಾಡುತ್ತಾರೆ. ಮದುವೆ ಅಂದ್ರೆ ಅದು ಕೇವಲ ಗಂಡು-ಹೆಣ್ಣಿನ ನಡುವಿನ ಬಾಂಧವ್ಯ ಮಾತ್ರವಲ್ಲ. ಮದುವೆ ಅನ್ನೋದು ಎರಡು ಕುಟುಂಬಗಳನ್ನು ಬೆಸೆಯುವಂತ ಬಂಧ. ಹಾಗಾಗಿ ಮದುವೆಯಲ್ಲಿ ಯಾವುದೇ ಲೋಪದೋಷಗಳು ಆಗದ ಹಾಗೆ ಎಚ್ಚರವಹಿಸುತ್ತಾರೆ. ಆದರೆ ಮದುವೆ ವಿಷಯದಲ್ಲಿ ಎಲ್ಲರ ಹಣೆಬರಹ ನೆಟ್ಟಗೆ ಇರುವುದಿಲ್ಲ ಬಿಡಿ. ಇಲ್ಲೊಬ್ಬ ಮಹಾಪುರುಷ ಎಂಥ ಅವತಾರದಲ್ಲಿ ಹಸೆಮಣೆಗೆ ಬಂದಿದ್ದ ಗೊತ್ತಾ!!

ಇದು ಬಿಹಾರದ ಮದುವೆ ಮನೆಯೊಂದರಲ್ಲಿ ನಡೆದ ಘಟನೆ. ಹಸೆಮಣೆಯಲ್ಲಿ ಕುಳಿತುಕೊಂಡು ಮದುವೆಯಾಗುವ ಹುಡುಗಿಗೆ ತಾಳಿ ಕಟ್ಟುಬೇಕಾದ ಹುಡುಗ ಹಸೆಮಣೆಗೆ ಬರುವುದಕ್ಕೂ ಮೊದಲೇ ಕಂಠಪೂರ್ತಿ ಕುಡಿದು ತೂರಾಡುತ್ತಾ ಮದುವೆ ಮಂಟಪಕ್ಕೆ ಬಂದಿದ್ದಾನೆ. ಆತನಲ್ಲಿ ನಿಲ್ಲಲೂ ಶಕ್ತಿ ಇರಲಿಲ್ಲ. ತಾನು ಎಲ್ಲಿದ್ದೇನೆ ಎನ್ನುವ ಅರಿವು ಅವನಿಗಿರಲಿಲ್ಲ. ಮದುಮಗನ ವೇಷದಲ್ಲಿಯೆ ಇದ್ದ ವರ ಮಾತ್ರ ಸಿಕ್ಕಾಪಟ್ಟೆ ಕುಡಿದು ಬಂದಿದ್ದ. ಅತೀಯಾಗಿ ಕುಡಿದಿದ್ದ ಅವನನ್ನು ಇನ್ನೊಬ್ಬ ವ್ಯಕ್ತಿ ಸಂಭಾಳಿಸಲು ಕಷ್ಟಪಡುತ್ತಿದ್ದ. ಅಂತೂ ಹೇಗೋ ಮದುವೆ ಮುಗಿಸಿದರೆ ಆಯಿತು ಎಂದು ಬಹುಶಃ ಮನೆಯವರೂ ತೀರ್ಮಾನಿಸಬೇಕು. ಹಾಗಾಗಿ ಕುಡಿದು ಟೈಟ್ ಆಗಿದ್ದರೂ ಕೂಡ ಹುಡುಗಿ ಆತನಿಗೆ ಹಾರ ಹಾಕಿದ್ದಾಳೆ.

ಈಗ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ ಕೈಯಲ್ಲಿ ಇರುವುದು ಹಾರವೋ, ಹಾವೋ ಅಥವಾ ಅದನ್ನ ಯಾರಿಗೆ ಹಾಕಬೇಕು ಎನ್ನುವ ಕಲ್ಪನೆಯೂ ಕುಡುದು ಬಂದಿದ್ದ ಆ ಮನುಷ್ಯನಿಗೆ ಇರಲಿಲ್ಲ. ವಿಪರ್ಯಾಸವೆಂದರೆ ತನ್ನ ಮದುವೆ ಎನ್ನುವುದೇ ಆತನಿಗೆ ಗೊತ್ತಿತ್ತೊ ಇಲ್ವೋ ಎನ್ನುವಷ್ಟರ ಮಟ್ಟಿಗೆ ಆತ ಸ್ತೀಮಿತ ಕಳೆದುಕೊಂಡಿದ್ದ!. ಮದುವೆಯಲ್ಲಿ ನೆರೆದಿದ್ದವರು ಹುಡುಗನಿಗೆ ಹಾರವನ್ನು ವಧುವಿಗೆ ಹಾಕುವಂತೆ ಹೇಳಿದ್ದಾರೆ. ಇದೇ ಸಮಯದಲ್ಲಿ ವಧು ವರರಿಗೆ ಆರತಿ ಮಾಡಲು ವಧುವಿನ ಸಹೋದರಿ ಹಸೆಮಣೆ ಬಳಿ ಬಂದಿದ್ದಾಳೆ. ಕುಡಿದು ತೂರಾಡುತ್ತಿದ್ದ ಆತನಿಗೆ ಯಾರಿಗೆ ಹಾರ ಹಾಕಬೇಕು ಎಂಬುದೂ ಗೊತ್ತಾಗಲಿಲ್ಲ. ಕೈಲಿದ್ದ ಹಾರವನ್ನು ವಧುವಿಗೆ ಸಹೋದರಿಗೆ ಹಾಕಿದ್ದಾನೆ.

ವಧುವಿನ ಸಹೋದರಿ ಕುಡಿದು ಬಂದಿದ್ದಕ್ಕೆ ಭಾವನಾಗುವವನಿಗೆ ಚೆನ್ನಾಗಿ ಬೈದು ಹಾರ ತೆಗೆಯುವಂತೆ ಹೇಳಿದ್ದಾಳೆ. ಆತನಿಗೆ ಅದ್ಯಾವುದರ ಅರಿವು ಇಲ್ಲದೆ ತುರಾಡುತ್ತಲೆ ಇದ್ದ. ಕೊನೆಗೆ ಆಕೆ ಹಾಕಿದ ಹಾರವನ್ನು ತೆಗೆಯುವಂತೆ ಹೇಳಿ ವರನನ್ನು ಚೆನ್ನಾಗಿ ಥಳಿಸಿದ್ದಾಳೆ. ನಿಲ್ಲಲೂ ಆಗದ ಅವನನ್ನು ಹಿಡಿದುಕೊಂಡಿದ್ದವನೂ ಕೂಡ ಯಾರಿಗೆ ಹಾರ ಹಾಕಬೇಕು ಅನ್ನೋದು ಗೊತ್ತಾಗಲ್ವಾ ಅಂತ ವರನಿಗೆ ಬೈದಿದ್ದಾನೆ. ಆದರೆ ಯಾರು ಎಷ್ಟೇ ಹೇಳಿದರೂ ಕೂಡಿದ ಮತ್ತಿನಲ್ಲಿದ್ದ ವರನಿಗೆ ಮಾತ್ರ ತನ್ನ ಸುತ್ತ ಏನು ನಡೆಯುತ್ತಿದೆ ಎನ್ನುವುದೇ ಅರಿವಿರಲಿಲ್ಲ. ಸದ್ಯ ಈ ಮದುವೆ ವಿಡಿಯೊ ಮಾತ್ರ ಸಕ್ಕತ್ ವೈರಲ್ ಆಗಿದ್ದು ನೆಟ್ಟಿಗರು ಹಲವು ಕಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.

error: Content is protected !!