Sachin Tendulkar: ಪತ್ನಿ ಹಾಗೂ ಮಗಳೊಂದಿಗೆ ಕಾಶ್ಮೀರದ ಹಿಮಪಾತವನ್ನು ಆನಂದಿಸಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್

ಸ್ನೇಹಿತರೆ, ಪ್ರತಿಯೊಬ್ಬರು ಆರಾಧಿಸುವಂತಹ ಕ್ರಿಕೆಟ್ ಕ್ರೀಡೆಯ ಕ್ರೇಜ್ ಅನ್ನು ಯುವಕರಲ್ಲಿ ಹೆಚ್ಚಿಸುತ್ತಾ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುತ್ತಿರುವಂತಹ ಸಚಿನ್ ತೆಂಡೂಲ್ಕರ್(Sachin Tendulkar) ಅವರು ತಮ್ಮ ಕಾರ್ಯದಿಂದ ನಿವೃತ್ತಿಯನ್ನು ಪಡೆದ ನಂತರ ಕುಟುಂಬದೊಂದಿಗೆ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿದ್ದು ಆಗಾಗ ಕುಟುಂಬದ ಜೊತೆಗೆ ಪ್ರವಾಸಕ್ಕೆ ತೆರಳುತ್ತಾ ಅಲ್ಲಿನ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇರುತ್ತಾರೆ.

ಅದರಂತೆ ಸಚಿನ್ ನೆನ್ನೆ ಹೆಂಡತಿ ಅಂಜಲಿ ಹಾಗೂ ಮಗಳು ಸಾರ ತೆಂಡೂಲ್ಕರ್(Sara Tendulkar) ಜೊತೆಗೆ ಹಿಮಪಾತವನ್ನು ಆನಂದಿಸಲು ಕಾಶ್ಮೀರಕ್ಕೆ ತೆರಳಿದ್ದು, ಆ ಸಮಯದಲ್ಲಿ ಕೆಲ ಸುಂದರ ಚಿತ್ರಣಗಳನ್ನು ಚಿತ್ರಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಸದ್ಯ ಈ ಫೋಟೋಗಳು ಭಾರಿ ವೈರಲಾಗುತ್ತಿದ್ದು ತನ್ನ ನೆಚ್ಚಿನ ಕ್ರಿಕೆಟ್ ಆಟಗಾರರ ಕುಟುಂಬವನ್ನು ಕಂಡಂತಹ ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೌದು ಸ್ನೇಹಿತರೆ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಇದೇ ಮೊದಲ ಬಾರಿಗೆ ಹಿಮ ಪಾತವನ್ನು ಕಂಡು ಅದನ್ನು ಆನಂದಿಸಿದ್ದು, ಮೊದಲ ಫೋಟೋದಲ್ಲಿ ಕುರ್ಚಿಯೊಂದರ ಮೇಲೆ ತಮ್ಮ ಮುದ್ದಾದ ನಾಯಿಮರಿಯೊಂದಿಗೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಗಳು ಸಾರ ತೆಂಡುಲ್ಕರ್ ಅವರನ್ನು ಅಪ್ಪಿ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇನ್ನುಳಿದ ಫೋಟೋಗಳಲ್ಲಿ ಸಚಿನ್ ತೆಂಡೂಲ್ಕರ್ ಅವರು ಹಿಮವನ್ನು ಆನಂದಿಸುತ್ತ ಅದರೊಂದಿಗೆ ಆಟವಾಡುತ್ತಿರುವಂತಹ ಚಿತ್ರಣಗಳನ್ನು ನೋಡಬಹುದಾಗಿದೆ. ಈ ಸುಂದರ ಫೋಟೋಗಳನ್ನು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಗಳಲ್ಲಿ ಸಚಿನ್ ತೆಂಡೂಲ್ಕರ್(Sachin Tendulkar) ಹಂಚಿಕೊಂಡು “ಪಹಲ್ಗಾಮ್ನಲ್ಲಿ ನನ್ನ ಮೊದಲ ಹಿಮದ ಅನುಭವ” ಎಂಬ ಶೀರ್ಷಿಕೆ ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಕ್ರಿಕೆಟ್ ನಿವೃತ್ತಿಯ ಬಳಿಕ ಸಾಕಷ್ಟು ಯುವ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡುವುದರ ಜೊತೆಗೆ ತಮ್ಮ ಇಬ್ಬರೂ ಮಕ್ಕಳ ವೃತ್ತಿ ಜೀವನದ ಕುರಿತು ಸಚಿನ್ ಗಮನಹರಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!