ಶರೀರಕ್ಕೆ ಬಲ ನೀಡುವ ರಾಗಿ ದೋಸೆ ಮಾಡುವ ಸರಳ ವಿಧಾನ, ಒಮ್ಮೆ ಟ್ರೈ ಮಾಡಿ

ದೇಹಕ್ಕೆ ಹತ್ತಾರು ಲಾಭಗಳನ್ನು ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ರಾಗಿ, ಮನುಷ್ಯನಿಗೆ ಅಗತ್ಯವಾಗಿ ಬೇಕಾಗುತ್ತದೆ. ರಾಗಿಯನ್ನು ಬಳಸಿ ಹಲವು ಆಹಾರಗಳನ್ನ ತಯಾರಿಸಬಹುದಾಗಿದೆ. ಅವುಗಳಲ್ಲಿ ಈ ರಾಗಿ ದೋಸೆ ಕೂಡ ಒಂದು ಇದನ್ನು ಅತಿ ಸುಲಭವಾಗಿ ತಯಾರಿಸಬಹುದು ಹಾಗೂ ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಬನ್ನಿ ರಾಗಿ ದೋಸೆ ಮಾಡೋದು ಹೇಗೆ ಅನ್ನೋದನ್ನ ತಿಳಿಯೋಣ.

ರಾಗಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು: ರಾಗಿ ಹಿಟ್ಟು ಒಂದು ಬಟ್ಟಲು, ತೆಂಗಿನ ತುರಿ ಅರ್ಧ ಬಟ್ಟಲು, ಮೊಸರು ಅರ್ಧ ಬಟ್ಟಲು, ನೀರು ಅಗತ್ಯಕ್ಕೆ ಅನುಸಾರವಾಗಿ, ಉಪ್ಪು ರುಚಿಗೆ ತಕ್ಕಷ್ಟು,ಎಣ್ಣೆ ಅಗತ್ಯಕ್ಕೆ ಅನುಸಾರವಾಗಿ. ಇವುಗಳ ಆದರದ ಮೇಲೆ ನಿಮಗೆ ಎಷ್ಟು ಬೇಕು ಅಷ್ಟು ತಯಾರಿಸಬಹುದಾಗಿದೆ.

ಇನ್ನು ರಾಗಿ ದೋಸೆ ಮಾಡುವ ವಿಧಾನ ಹೇಗೆ ಅನ್ನೋದನ್ನ ತಿಳಿಯುವುದಾದರೆ, ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ತೆಂಗಿನತುರಿ, ಮೊಸರು ಮೇಲೆ ತಿಳಿಸಿದ ಪದಾರ್ಥಗಳನ್ನು ಹಾಕಿ ದೋಸೆ ಹಿಟ್ಟಿನಂತೆ ಕಲಸಿಕೊಂಡು, ನಂತರ ಒಂದು ಒಲೆಯ ಮೇಲೆ ತವ ಹಿಟ್ಟು, ನಂತರ ಮೇಲೆ ತಿಳಿಸಿದ ಹಾಗೆ ರೆಡಿ ಮಾಡಿಕೊಂಡ ರಾಗಿ ಹಿಟ್ಟನ್ನು ತವದ ಮೇಲೆ ಹಾಕಿ ಎರಡು ಸೈಡ್ ಕೆಂಪಗೆ ಸುಡಬೇಕು. ಹೀಗೆ ಮಾಡಿದರೆ ನೀವು ತಿನ್ನಲು ಬಯಸುವ ರಾಗಿ ದೋಸೆ ಸಿದ್ಧವಿರುತ್ತದೆ.

Leave a Comment

error: Content is protected !!