Nivedita Chandan Divorce :ರಾಪರ್ ಚಂದನ್ ಮತ್ತು ನಿವೇದಿತಾ ಗೌಡ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ಇವರಿಬ್ಬರ ವಿಚ್ಛೇದನದ (ನಿವೇದಿತಾ ಚಂದನ್ ವಿಚ್ಛೇದನ) ಸುದ್ದಿ ಇದೀಗ ಎಲ್ಲಾ ಪ್ರಮುಖ ಮಾಧ್ಯಮಗಳಲ್ಲಿ ಹರಡಿದ್ದು, ಈ ಜೋಡಿಯ ಅಭಿಮಾನಿಗಳಿಗೆ ಭಾರೀ ಆಘಾತವನ್ನುಂಟುಮಾಡಿದೆ ಮತ್ತು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.
Nivedita Chandan Divorce
ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಂದು ವಿಚ್ಛೇದನ ಪಡೆಯಲಿದ್ದಾರೆ. ಬಿಗ್ ಬಾಸ್ ಕನ್ನಡ (ಬಿಗ್ ಬಾಸ್ ಕನ್ನಡ 5) ಐದನೇ ಸೀಸನ್ ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಪ್ರವೇಶಿಸಿದರು. ಅವರ ನಡುವೆ ಸ್ನೇಹ ಪ್ರಾರಂಭವಾಯಿತು. ಈ ಗೆಳೆತನ ಪ್ರೀತಿಯಾಗಿ ಅರಳಿದ್ದು, ಯುವ ದಸರಾ ವೇದಿಕೆಯಲ್ಲಿ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ್ದರು.
ಇದಾದ ನಂತರ ಇವರಿಬ್ಬರು ದಾಂಪತ್ಯ ಜೀವನ ಆರಂಭಿಸಿದ್ದರು . ಮದುವೆಯ ನಂತರ, ದಂಪತಿಗಳು ಫೂಟೊ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಅನೇಕ ಟ್ರೋಲ್‌ಗಳನ್ನು ಎದುರಿಸಿದರು. ಚಂದನ್ ಶೆಟ್ಟಿ ಸ್ಯಾಂಡಲ್ ವುಡ್ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿ ಖ್ಯಾತಿ ಪಡೆದರೆ, ನೆವೇದಿತಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಇವೆರಡರ ನಡುವೆ ವ್ಯತ್ಯಾಸವಿರಬಹುದು ಎನ್ನಲಾಗಿದೆ. ವೃತ್ತಿಪರ ಕಾರಣಗಳಿಂದ ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇಂದು ಶಾಂತಿನಗರದ ನ್ಯಾಯಾಲಯದಲ್ಲಿ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
Read More
Radhika Kumaraswamy: ಕನ್ನಡ ಚಿತ್ರರಂಗದ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ, ಇವರ ಅಸ್ತಿ ಕೇಳಿ ನಟಿಮಣಿಯರು ಶಾಕ್