Prajwal Revanna :ಹಾಸನ ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಒಂದೆಡೆ ಪ್ರಜ್ವಲ್ ತಂದೆ ಹೆಚ್.ಡಿ.ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಆದರೆ ಪ್ರಜ್ವಲ್ ಮಾತ್ರ ಪತ್ತೆಯಾಗಿಲ್ಲ.ಪ್ರಜ್ವಲ್ ಜರ್ಮನಿಗೆ ಹಾರಿದ್ದರು ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲೂ ಇಲ್ಲ ಎನ್ನುವಂತಾಗಿದೆ. ಈ ಸಂಬಂಧ ಎಸ್ಐಟಿ ಇಂಟರ್ಪೋಲ್ನ್ನು ಸಂಪರ್ಕಿಸಿದೆ. ಈ ಹಿಂದೆ ಲುಕ್ಔಟ್ ನೋಟಿಸ್ ನೀಡಿದ್ದ ಎಸ್ಐಟಿ, ನಂತರ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೆ, ಪ್ರಜ್ವಲ್ ( Prajwal Revanna ) ಎಲ್ಲಿದ್ದಾನೆ ಎಂಬುದು ಪತ್ತೆಯಾಗಿಲ್ಲ.
ಎರಡನೇ ಬಾರಿಗೆ ಲೋಕಸಭೆ ಅಖಾಡಕ್ಕಿಳಿದಿರುವ 34 ವರ್ಷದ ಪ್ರಜ್ವಲ್ ರೇವಣ್ಣ ಒಟ್ಟು 40.84 ಕೋಟಿ ರೂ ಆಸ್ತಿ ಹೊಂದಿದ್ದಾರೆ. 5.44 ಕೋಟಿ ಮೌಲ್ಯದ ಪಿತ್ರಾರ್ಜಿತ ಆಸ್ತಿ ಮತ್ತು 35.40 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಇದಲ್ಲದೆ, ಪ್ರಜ್ವಲ್ ಬಳಿ 20 ಎಕರೆ ಕೃಷಿ ಭೂಮಿ, 3 ಕೃಷಿಯೇತರ ಭೂಮಿ, 2 ವಾಣಿಜ್ಯ ಆಸ್ತಿ, 500,000 ರೂ ಮೌಲ್ಯದ ಟ್ರ್ಯಾಕ್ಟರ್, ರೂ 23.25 ಲಕ್ಷ ಮೌಲ್ಯದ 31 ಹಸುಗಳು ಮತ್ತು ರೂ 2.40 ಲಕ್ಷ ಮೌಲ್ಯದ 4 ಹೋರಿಗಳನ್ನು ಹೊಂದಿದ್ದಾರೆ.ಅಜ್ಜಿ ಚನ್ನಮ್ಮ ದೇವೇಗೌಡರಿಗೆ 23 ಲಕ್ಷ ರೂಪಾಯಿ ಮತ್ತು ಸೋದರ ಸೂರಜ್ ರೇವಣ್ಣಗೆ 1.56 ಕೋಟಿ ರೂಪಾಯಿ ಸಾಲ ನೀಡಿದ್ದಾರೆ.