Kaatera: ಕೊನೆಗೂ ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್ ನೀಡಿದ ಕಾಟೇರ. ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್.

Kaatera ಕೆಲವು ದಿನಗಳ ಹಿಂದೆ ಹೋದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರಬಹುದು ತಮ್ಮ ಸ್ನೇಹಿತ ಬಳಗದ ರಾಜಕೀಯ ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಹಲವಾರು ಪ್ರದೇಶಗಳಲ್ಲಿ ಪಕ್ಷದ ಎಲ್ಲೆಯನ್ನು ಮೀರಿ ಬೆಂಬಲವನ್ನು ಸೂಚಿಸುತ್ತಿದ್ದರು. ಈಗ ಕೊನೆಗೂ ಚುನಾವಣೆ ಮುಗಿದಿದ್ದು ಡಿ ಬಾಸ್(Dboss) ಕೂಡ ವಿಶ್ರಾಂತಿಯಲ್ಲಿದ್ದರು.

ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಾಟೇರ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಮೊದಲ ಹಂತದ ಚಿತ್ರೀಕರಣವನ್ನು ಕೂಡ ಚಿತ್ರತಂಡ ಪೂರೈಸಿತ್ತು. ವಿರಾಮದಲ್ಲಿದ್ದ ದರ್ಶನ್ ರವರು ಈಗ ಮತ್ತೆ ಕೆಲಸಕ್ಕೆ ಹಾಜರಾಗಿದ್ದು ಕಾಟೇರ ಸಿನಿಮಾದ ಕಾರ್ಯಗಳು ಮತ್ತೆ ಶುರುವಾಗಿದೆ.

ಮಾಹಿತಿಗಳ ಪ್ರಕಾರ ಕಾಟೇರ(Kaatera) ಚಿತ್ರತಂಡ ಮೂರು ದಿನಗಳ ಹಿಂದಷ್ಟೇ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಗೆ ಹಾಜರಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಇದೇ ದಿನ ಅಲ್ಲಿಗೆ ಬಂದು ಈಗಾಗಲೇ ಎರಡನೇ ಹಂತದ ಚಿತ್ರೀಕರಣವನ್ನು ಕೂಡ ಪ್ರಾರಂಭಿಸಿದ್ದಾರೆ. ಅಭಿಮಾನಿಗಳಿಗೂ ಕೂಡ ಇದು ಸಂತೋಷ ತರುವಂತಹ ಸುದ್ದಿಯಾಗಿದೆ.

ಸದ್ಯಕ್ಕೆ ಡಿ ಬಾಸ್ ನಟನೆಯ ಕಾಟೇರ ಸಿನಿಮಾ ಇಲ್ಲ ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕಾಟಿರ ಸಿನಿಮಾದ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment