Darshan thoogudeepa: ದರ್ಶನ್ ತಲೆ ವಿಗ್ ತಗೆಸಿದ ಪೊಲೀಸರು, ತಲೆಯಲ್ಲಿ ಕೂದಲೇ ಇಲ್ಲ

By Sandeep Kumar. B

Published on:

Darshan Hair wig

Darshan thoogudeepa Hair Wig: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan) ಸೇರಿದಂತೆ 17 ಜನರನ್ನು ಬಂಧಿಸಿದ್ದು ಪ್ರಕರಣ ದಿನಕ್ಕೊಂದು ಮಾಹಿತಿಯನ್ನು ಹುಡುಕುತ್ತಿದೆ, ಈ ನಿಟ್ಟಿನಲ್ಲಿ ಆರೋಪಿಗಳನ್ನು ಪೊಲೀಸರು ವ್ಯದ್ಯಕೀಯ ಪರೀಕ್ಷೆ ಹಾಗು ಸ್ಥಳ ಮಹಜರು ಮಾಡಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲದೆ ಆರೋಪಿಗಳ ವಿರುದ್ಧ ತನಿಖೆಯು ವಿವಿಧ ರೀತಿಯಲ್ಲಿ ಮುಂದುವರೆದಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಆರೋಪಿಗಳಿಗೆ ನಡೆಸಲಾಗುತ್ತದೆ. ಇದೀಗ ಎಲ್ಲಾ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಗ್ಯ ತಪಾಸಣೆಗಾಗಿ ನಟ ದರ್ಶನ್ ಧರಿಸಿದ್ದ ವಿಗ್ ಅನ್ನು ಪೊಲೀಸರು ತೆಗೆದಿದ್ದಾರೆ ಎನ್ನಲಾಗಿದೆ. ದರ್ಶನ್ ವಿಗ್ ತೆಗೆದ ವಿಚಾರ, ತಲೆ ಕೂದಲಿನ ಬಗ್ಗೆ ಯಾವಾಗ ಗೊತ್ತಾಗುತ್ತೆ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ದರ್ಶನ್ ಅವರ ಕೂದಲಿನ ಸ್ಯಾಂಪಲ್ ತೆಗೆದುಕೊಳ್ಳಲು ಪೊಲೀಸರು ವಿಗ್ ತೆಗೆದಿದ್ದಾರೆ ಎನ್ನಲಾಗಿದೆ.

Darshan thoogudeepa Hair Wig

ದರ್ಶನ್ ಅವರ ವಿಗ್ ತೆಗೆದ ಪೊಲೀಸರು ಹೌದು ಕಳೆದ ಒಂಬತ್ತು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ. ಅದರಂತೆ ಆರೋಪಿ ಎ-1 ಪವಿತ್ರ ಗೌಡ, ಎ-2 ಆರೋಪಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪೊಲೀಸರು ಇತರ ಶಂಕಿತರಂತೆ ಕೂದಲಿನ ಮಾದರಿಗಳನ್ನು ಸಂಗ್ರಹಿಸಲು ದರ್ಶನ್ ಅವರ ವಿಗ್ ಅನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್ ಅವರ ರಕ್ತ ಮತ್ತು ಕೂದಲಿನ ಮಾದರಿಗಳನ್ನು ಪಡೆದುಕೊಂಡು ಡಿಎನ್‌ಎ ಪರೀಕ್ಷೆ ಆರಂಭಿಸಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದರೂ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಯಾವ ರೀತಿ ಬೆಳವಣಿಗೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Read More:

Sandeep Kumar. B

Leave a Comment