Sadhu Kokila: ಹಾಸ್ಯ ನಟ ಸಾಧುಕೋಕಿಲ ಒಂದು ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಯಪ್ಪಾ ಅಷ್ಟೊಂದ

By Sandeep Kumar. B

Updated on:

Sadhu Kokila Comedy Actor

Sadhu Kokila Salary Per Movie: ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಹಾಸ್ಯ ನಟ ಅಂದ್ರೆ ಅದುವೇ ಸಾಧುಕೋಕಿಲ, ಹೌದು ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವಂತ ಬಹುಬೇಡಿಕೆಯ ಹಾಸ್ಯ ನಟರಾಗಿದ್ದಾರೆ. ಸಾಧುಕೋಕಿಲ (Sadhu Kokila) ಅವರು ಬರಿ ಕಾಮಿಡಿ ಆಕ್ಟರ್ ಅಷ್ಟೇ ಅಲ್ಲ ಡೈರೆಕ್ಟರ್ ಹಾಗೂ ಸಂಗೀತ ನಿರ್ದೇಶಕರು ಆಗಿದ್ದಾರೆ.

ಸಾಧು ಕೋಕಿಲ ಅಲಿಯಾಸ್ ಸಾಧು ಮಹಾರಾಜ್ ಮಾರ್ಚ್ 24, 1966 ರಂದು ನಟೇಶ್ ಮತ್ತು ಮಂಗಳಾ ದಂಪತಿಗೆ ಜನಿಸಿದರು. ಅವರ ತಂದೆ ಪೊಲೀಸ್ ಇಲಾಖೆಯಲ್ಲಿ ಪಿಟೀಲು ವಾದಕರಾಗಿದ್ದರು. ಅವರ ತಾಯಿ ಮತ್ತು ಸಹೋದರಿ ಹಿನ್ನೆಲೆ ಗಾಯಕರು. ಅವರ ಅಣ್ಣ ರಾಜೇಂದ್ರ ಕೂಡ ನಟರಾಗಿದ್ದರು

Sadhu Kokila Salary Per Movie

ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಜೋಸೆಫ್ (Saint Joseph) ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಅವರ ಆರಂಭಿಕ ವೃತ್ತಿಜೀವನದಲ್ಲಿ ಅವರು ಚಲನಚಿತ್ರೋದ್ಯಮದಲ್ಲಿ ಸಂಗೀತ ನಿರ್ದೇಶಕ, ಕೀಬೋರ್ಡ್ ವಾದಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡರು. ಇದಲ್ಲದೆ, ಅವರು ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ.

ಅವರು 1992 ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು ಮತ್ತು ಮೊದಲ ಕನ್ನಡ ಚಿತ್ರ ‘ಶ್’. ಹಲವು ಚಿತ್ರಗಳ ಸಂಗೀತ ನಿರ್ದೇಶನ ಮಾಡಿರುವ ಸಾಧು ಕನ್ನಡ ಚಿತ್ರರಂಗದ ಅತ್ಯಂತ ವೇಗದ ಕೀಬೋರ್ಡ್ ಪ್ಲೇಯರ್ ಎಂಬುದಾಗಿ ಕನ್ನಡದಲ್ಲಿ ಪ್ರಸಿದ್ದಿ ಪಡೆದರು

Sadhu Kokila Salary
Sadhu Kokila Salary

ಇನ್ನೂ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ಇವರಿಗೆ, ಕೋಕಿಲ ಎನ್ನುವ ಹೆಸರನ್ನು ಉಪೇಂದ್ರ ಅವರು ಇಟ್ಟಿದ್ದಾರೆ. 1993 ರಲ್ಲಿ ಇವರು ಸಲೀನ ಎನ್ನುವರನ್ನು ವಿವಾಹವಾದರು. ಮುಖ್ಯವಾಗಿ ಇವರು ಇದೀಗ ಒಂದು ಚಿತ್ರದಲ್ಲಿ ತಮ್ಮ ಕೆಲಸ ನಿರ್ವಹಿಸಲು 1 ದಿನಕ್ಕೆ 1 ರಿಂದ 2 ಲಕ್ಷ ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ವರ್ಷದಲ್ಲಿ 130 ರಿಂದ 150 ದಿನ ಕೆಲಸ ಇರುತ್ತೆ ಎಂಬುದಾಗಿ ಮುಳಗ ಪ್ರಕಾರ ತಿಳಿಯಲಾಗಿದೆ

Read More

Sandeep Kumar. B

Leave a Comment