Druva Sarja: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟ ದ್ರುವ ಸರ್ಜಾ

By Sandeep Kumar. B

Published on:

Druva Sarja Martin

Druva Sarja KD and Martin Film Updates: ಧ್ರುವ ಸರ್ಜಾ ಅಭಿನಯದ ಎರಡು ಬಹು ನಿರೀಕ್ಷಿತ ಚಿತ್ರಗಳು ಈ ವರ್ಷ ತೆರೆಗೆ ಬರುವುದು ಖಚಿತ. APಅರ್ಜುನ್ ನಿರ್ದೇಶನದ ಮಾರ್ಟಿನ್ (Martin) ಚಿತ್ರ ಅಕ್ಟೋಬರ್ 11 ರಂದು ಥಿಯೇಟರ್‌ಗೆ ಬರಲಿದೆ. ನಿರ್ದೇಶಕ ಪ್ರೇಮ್ ಕ್ರಿಸ್‌ಮಸ್ ದಿನದಂದು ‘ಕೆಡಿ‘ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ.

ಉದಯ್‌ ಮೆಹ್ತಾ ನಿರ್ಮಾಣದ ಜೊತೆಗೆ, ಅರ್ಜುನ್‌ ಸರ್ಜಾ ಚಿತ್ರಕಥೆ ಬರೆದಿರುವ ‘ಮಾರ್ಟಿನ್‌’ ಸೆಟ್ಟೇರಿ ಎರಡು ವರ್ಷಗಳ ಮೇಲಾಗಿತ್ತು. ‘ನನಗೆ ಮತ್ತು ಧ್ರುವ ಸರ್ಜಾ (Druva Sarja) ಅವರಿಗೆ ಹೋದಲೆಲ್ಲ ‘ಮಾರ್ಟಿನ್‌’ ಏಕೆ ತಡ ಎಂದು ಕೇಳುತ್ತಿದ್ದರು. ಚಿತ್ರದ ವ್ಯಾಪ್ತಿ ದೊಡ್ಡದಿದೆ. ಸಿನಿಮಾದಲ್ಲಿ ಎರಡು ಗಂಟೆಗಳಷ್ಟು ಗ್ರಾಫಿಕ್ಸ್‌ ಇದೆ. ಹೀಗಾಗಿ ಚಿತ್ರ ತಡವಾಯ್ತು. ಅ.11ಕ್ಕೆ ಖಚಿತವಾಗಿ ತೆರೆಗೆ ಬರುತ್ತೇವೆ.ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ ಪ್ರಚಾರಕ್ಕೆ ಸಮಯ ಬೇಕು.

ಒಟ್ಟಾರೆಯಾಗಿ ಈ ವರ್ಷ ಕೊನೆ ಅಷ್ಟರಲ್ಲಿ ದ್ರುವ ಸರ್ಜಾ ಅಭಿಮಾನಿಗಳಿಗೆ ಬಾಡೂಟ ಸಿಗೋದಂತು ಗ್ಯಾರಂಟಿ ಎಂಬುದಾಗಿ ತಿಳಿಸಲಾಗಿದೆ. ಬಹು ನಿರೀಕ್ಷಿತ ಸಿನಿಮಾ ಆಗಿರುವಂತ KD ಹಾಗೂ ಮಾರ್ಟಿನ್ ಎರಡು ಕೂಡ ಈ ವರ್ಷದಲ್ಲೇ ಬಿಡುಗಡೆಯಾಗಲಿದೆ.

Druva Sarja KD Film
Druva Sarja KD Film

Read More:

Sandeep Kumar. B

Leave a Comment