Abhishek ambarish Good News: ಸ್ಯಾಂಡಲ್ ವುಡ್ ಎಂದರೆ ದಿನದಲ್ಲಿ ಒಂದಲ್ಲ ಒಂದು ವಿಚಾರ ಸುದ್ದಿಯಲ್ಲಿ ಇರುತ್ತದೆ. ಅದೇ ರೀತಿ ಸ್ಯಾಂಡಲ್ ವುಡ್’ನಲ್ಲಿ ಬಾರಿ ಸಂಭ್ರಮದ ಸುದ್ದಿಗಳು ಸಾಕಷ್ಟಿವೆ. ಒಂದೆಡೆ ತರುಣ್ ಸುಧೀರ್ ಹಾಗು ಸೋನಾಲ್’ರಿಗೆ ಮದುವೆ ಸಂಭ್ರಮ. ಆಗಸ್ಟ್ 10 ಇಂದು ಇವರಿಬ್ಬರ ಮದುವೆ ನಡೆಯಿತು. ಇನ್ನೊಂದು, ಕಡೆ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ತಾಯಿಯಾಗುವ ಸಂಭ್ರಮದಲ್ಲಿ ಇದ್ದಾರೆ.
ಮನೆಗೆ ಮಗುವನ್ನು ಸ್ವಾಗತಿಸುವ ಖುಷಿಯಲ್ಲಿ ತಂದೆ ಅಭಿಷೇಕ್ ಅಂಬರೀಷ್ ಹಾಗು ಅಜ್ಜಿ ಸುಮಲತಾ ಅಂಬರೀಷ್ ಇದ್ದಾರೆ. ಸ್ಯಾಂಡಲ್ ವುಡ್’ಗೆ ಖುಷಿ ಕೊಡುವಂತ ಈ ತಿಂಗಳು ಹಲವು ಪ್ರಮುಖ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿದೆ.
ಹಾಗೆ, ಈ ವರ್ಷ ಮುಖ್ಯ ಪ್ರಮುಖವಾದಂತಹ ನಟರಿಂದ ಒಳ್ಳೆಯ ಬಹು ನಿರೀಕ್ಷಿತ ಸಿನಿಮಾಗಳು ತೆರೆ ಮೇಲೆ ಬರಲಿವೆ. ಆದರೆ, ಈಗಿನ ವಿಚಾರದಲ್ಲಿ ಅವಿವಾ ಬಿದ್ದಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ರೆಬಲ್ ಸ್ಟಾರ್ ಕುಟುಂಬ ಕಾತರಗೊಂಡಿದ್ದಾರೆ.
ಇದೇ ವಾರ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಲಿದೆ ಎನ್ನುವ ವದಂತಿಗಳನ್ನು ವರದಿಗಳು ತಿಳಿಸಿವೆ. ಈ ವಿಚಾರದ ಕುರಿತಾಗಿ ಅಭಿಷೇಕ್ ಅಂಬರೀಷ್ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ಹೊರ ಬಂದಿಲ್ಲ. ಅಭಿಷೇಕ್ ಸದ್ಯ ಊರಲ್ಲಿ ಇಲ್ಲ. ಕಿಕ್ ಬಾಕ್ಸಿಂಗ್ ಕಲಿಯಲು ಬೇರೆ ದೇಶಕ್ಕೆ ಹೋಗಿದ್ದಾರಂತೆ.
ನಾಳೆ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ. ಈ ವಾರ ಸೀಮಂತ ಕಾರ್ಯಕ್ರಮ ನಡೆಯಲಿದೆ ಅಂತ ವರದಿಗಳು ತಿಳಿಸಿವೆ. ಇದೆ ಜೂನ್ ತಿಂಗಳಲ್ಲಿ ಕನ್ನಡದ ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಇದೇ, ಸಂದರ್ಭದಲ್ಲಿ ತಮ್ಮ ಮಗ ಅಭಿಷೇಕ್ ಮತ್ತು ಸೊಸೆಗೆ ಸುಮಲತಾ ಅಂಬರೀಷ್ ಅವರು ಪ್ರೀತಿಯ ಶುಭಾಶಯ ತಿಳಿಸಿದ್ರು. ನನ್ನ ಪ್ರೀತಿಯ ಮಗ ಹಾಗೂ ಸೊಸೆಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಿಮ್ಮ ಪ್ರೀತಿ ಇನ್ನಷ್ಟು ಉತ್ತಮವಾಗಲಿ, ಇನ್ನಷ್ಟು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ. ನಿಮಗೆ ಪ್ರೀತಿಯ ಅಪ್ಪುಗೆ ಮತ್ತು ಆಶೀರ್ವಾದ ಎಂದು ಶುಭಕೋರಿ ಹಾರೈಸಿದ್ದರು.
ಇದೀಗ ಎರಡು ತಿಂಗಳಲ್ಲಿ ಅಭಿಷೇಕ್ ಮನೆಯಲ್ಲಿ ಸೀಮಂತ ಸಂಭ್ರಮದ ಕಳೆ ತುಂಬಿದೆ. ಕನ್ನಡ ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಅವರು ಜೂನ್ 5, 2023 ಶುಭ ವಿವಾಹವಾಗಿದ್ದರು.
ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಅವರ ವಿವಾಹ ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಭಾರತದ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅದ್ದೂರಿ ವಿವಾಹದಲ್ಲಿ ಭಾಗವಹಿಸಿದ ಗಣ್ಯರಲ್ಲಿ ಒಬ್ಬರು. ಅಭಿಷೇಕ್ ಅಂಬರೀಶ್ ಅಮರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸಿನಿಮಾ ರಂಗದಲ್ಲಿ ಇನ್ನಷ್ಟು ಮತ್ತಷ್ಟು ಒಳ್ಳೆ ಸಿನಿಮಾ ಮೂಲಕ ಮಿಂಚಲಿ ಅಭಿಷೇಕ್ ಅಂಬರೀಷ್ ಎಂದು ತುಂಬು ಮನದಿಂದ ಆರೈಸೋಣ.
Read More:
- Actor Ravindra Mahalakshmi: ಮಲಗಿದ್ರು ಬಿಡಲ್ಲ ಅದನ್ನ ಮಾಡು ಅಂತಾರೆ, ಗಂಡನ ಈ ಅಭ್ಯಾಸಕ್ಕೆ ಸುಸ್ತಾದ ನಟಿ
- Darshan: ನಟ ದರ್ಶನ್ ಜಲಿನಿಂದ ರಿಲೀಸ್ ಆಗ್ತಾರಾ? ಭವಿಷ್ಯ ನುಡಿದ ಕೌಡೇಪಿರ ಲಾಲಸಾಬ
- Darshan: ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡ್ತಾರಾ?
- Chetana Chakravarti: ಭಾರತದ ಗಂಡಸರಿಗೆ ಅದನ್ನ ಹೇಗೆ ಮಾಡಬೇಕು ಅನ್ನೋದೇ ಗೊತ್ತಿಲ್ಲ, ಹಾಗಾಗಿ ನಾನು ಅವರ ಜೊತೆ ಡೇಟ್ ಮಾಡಲ್ಲ ಎಂದ ಮಹಿಳೆ
- Anchor Anusree: ಮದುವೆಗೆ ರೆಡಿಯಾದ ಆಂಕರ್ ಅನುಶ್ರೀ, ಮದುವೆ ಹುಡುಗ ಯಾರು ಗೊತ್ತಾ?