Ashika Ranganath: ನಟಿ ಆಶಿಕಾ ರಂಗನಾಥ್ ಅವರ ಜಿಮ್ ವರ್ಕ್ ಔಟ್ ನೋಡಿ ಫಿದಾ ಆದ ಅಭಿಮಾನಿಗಳು

By Sandeep Kumar. B

Updated on:

Ashika Ranganath

Ashika Ranganath: ಕನ್ನಡ ಚಿತ್ರರಂಗದ ಅನೇಕ ನಟಿಯರು ತಮ್ಮ ಅಭಿನಯಡಾ ಮೂಲಕ ತಮ್ಮನ ತಾವು ಗುರುತಿಸಿಕೊಂಡಿದ್ದಾರೆ. ಅಂತಹ ನಟಿಯಾರ ಸಾಲಿನಲ್ಲಿ ಆಶಿಕಾ ರಂಗನಾಥ್ (Ashika Ranganath) ಕೂಡ ಒಬ್ಬರು ನೋಡಲು ಸಕತ್ ಸುಂದರವಾಗಿರುವ ನಟಿ ಆಶಿಕಾ ರಂಗನಾಥ್ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತನ್ನದೆಯಾದ ಶ್ರಮ ಹಾಗೂ ಆಸಕ್ತಿಯಿಂದ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ಈ ನಟಿ ಜಿಮ್ ನಲ್ಲಿ ಕೂಡ ಸಾಕಷ್ಟು ವರ್ಕ್ ಔಟ್ ಮಾಡಿ ತನ್ನ ದೇಹವನ್ನು ಸುಂದರಗೊಳಿಸಿದ್ದಾರೆ.

Ashika Ranganath

ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಗುರುತಿಸಿಕೊಂಡಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾವಂತ ನಟಿ. 2001 ರಿಂದ ಚಿತ್ರರಂಗದಲ್ಲಿರುವ ಇವರು ಕ್ರೇಜಿ ಬಾಯ್ ಚಿತ್ರದ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. 1375 ಆಗಸ್ಟ್ 14 ರಂದು ಹಾಸನದಲ್ಲಿ ಜನಿಸಿದರು. ತಂದೆ ರಂಗನಾಥ್ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿದ್ದು, ತಾಯಿ ಸುಧಾ ಗೃಹಿಣಿಯಾಗಿದ್ದಾರೆ. ಅವರ ಅಕ್ಕ ಅನುಷಾ ಪ್ರಸಿದ್ಧ ಕಿರುತೆರೆ ನಟಿ. ತುಮಕೂರಿನಲ್ಲಿ ಬೆಳೆದ ಅವರು ಪಿಯುಸಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು.

ಕೋರಮಂಗಲದ ಜ್ಯೋತಿನಿವಾಸ ಪಿಯುಸಿ ಮುಗಿಸಿ. ಎಂಇಎಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪೂರೈಸಿದರು. ಇವರು ವಿವಿಧ ನೃತ್ಯ ಪ್ರಕಾರಗಳಲ್ಲಿ ಅನುಭವವನ್ನು ಹೊಂದಿದ್ದಾರೆ ಮತ್ತು ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2014 ರಲ್ಲಿ, ಇವರು “ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್” ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಎರಡನೇ ಸ್ಥಾನ ಪಡೆದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ಕ್ರೇಜಿಬಾಯ್ ಮೂಲಕ ಚಂದನವನಕ್ಕೆ ಪರಿಚಯಿಸಿದರು. ನಂತರ ಚಿತ್ರರಂಗಕ್ಕೆ ಕಾಲಿಟ್ಟ ಇವರು ಮಾಸ್ ಲೀಡರ್, ಮುಗುಳುನಗೆ, ರಾಜು ಕನ್ನಡ ಮೀಡಿಯಂ ಚಿತ್ರಗಳಲ್ಲಿ ನಟಿಸಿದ್ದರು.

Ashika Ranganath
Ashika Ranganath

2018 ರಲ್ಲಿ, ಶರಣ್ ಮತ್ತು ಆಶಿಕಾ ಅಭಿನಯದ ರಾಂಬೋ 2 ಅಭೂತಪೂರ್ವ ಯಶಸ್ಸನ್ನು ಗಳಿಸಿತು. ಈ ಚಿತ್ರದ ಚುಟುಚುಟು ಹಾಡು ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಹಾಡುಗಳಲ್ಲಿ ಒಂದಾಗಿದೆ. ಅದಲ್ಲದೆ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಅವರು ಪ್ರತಿದಿನ ಜಿಮ್‌ನಲ್ಲಿ ತರಬೇತಿ ವರ್ಕ್ ಔಟ್ ಮಾಡುತ್ತಾರೆ.. ಆದ್ದರಿಂದಲೇ ಇವರು ಒಳ್ಳೆಯ ಪರ್ಸನಾಲಿಟಿ ಹೊಂದಿದ್ದಾರೆ.

Read More

Sandeep Kumar. B

Leave a Comment