Darshan: ದರ್ಶನ್ ಲ್ಯಾಂಬೋರ್ಗಿನಿ ಕಾರ್ ತಗೋಳ್ಳೋಕೆ ಅಡ್ವಾನ್ಸ್ ಕೊಟ್ಟಿದ್ದು ಯಾರು ಗೊತ್ತಾ? ರಿವೀಲ್ ಆಯ್ತು

By Sandeep Kumar. B

Published on:

Darshan Lamborghini car: ರಾಜ್ಯದಲ್ಲಿ ಸದ್ಯಕ್ಕೆ ದರ್ಶನ್ ಅವರದ್ದೇ ಸುದ್ದಿ, ಹೌದು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ ಲೆ ಪ್ರಕರಣದಲ್ಲಿ ದರ್ಶನ್ ಅವರ ಹೆಸರು ಕೇಳಿಬಂದಿದೆ ಅಷ್ಟೇ ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 19 ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತಗೊಂಡಿದ್ದಾರೆ. ಇದರ ನಡುವೆ ದರ್ಶನ್ ಅವರ ಕುರಿತು ದಿನಕ್ಕೊಂದು ವಿಚಾರ ಹೊರಬೀಳುತ್ತಿದೆ.

ಇದೀಗ ದರ್ಶನ್ ಅವರ ಲ್ಯಾಂಬೋರ್ಗಿನಿ ಕಾರ್ ಕುರಿತು ಮತ್ತೊಂದು ಸುದ್ದಿ ಬಯಲಾಗಿದೆ. ಹೌದು ನಿರ್ಮಾಪಕ ಉಮಾಪತಿ ಗೌಡ ಅವರು ದರ್ಶನ್ ಕುರಿತು ಮತ್ತೊಮ್ಮೆ ಮಾತಾಡಿದ್ದಾರೆ. ಕೆಲ ವರ್ಷಗಳ ಹಿಂದೆ ನಟ ದರ್ಶನ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ರಾಜ್‌ಕುಮಾರ್ ಪುತ್ರ ಪುನೀತ್ ಬಳಿ ನನ್ನಂತೆಯೇ ಕಾರು ಇದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಉಮಾಪತಿ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಲಂಬೋರ್ಗಿನಿ ಕಾರಿಗೆ ಅಡ್ವಾನ್ಸ್ ಕೊಟ್ಟವರು ಯಾರು ಎಂದರು.

Darshan And Umapathi
Darshan And Umapathi

ಕೆಲ ವರ್ಷಗಳ ಹಿಂದೆ ಉಮಾಪತಿ ಶ್ರೀನಿವಾಸಗೌಡ ಹಾಗೂ ನಟ ದರ್ಶನ್ ನಡುವೆ ಜಗಳ ನಡೆದಿತ್ತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ದರ್ಶನ್, ಪುನೀತ್ ರಾಜ್‌ಕುಮಾರ್‌ ಬಳಿಯಿರುವ ಉರ್ಸ್‌ ಕಾರು ನನ್ನ ಬಳಿಯೂ ಇದೆ. ಈ ಕಾರು ಪುನೀತ್ ರಾಜ್‌ಕುಮಾರ್ ಹೊರತುಪಡಿಸಿ, ಕನ್ನಡ ಚಿತ್ರರಂಗದಲ್ಲಿ ಯಾರೂ ಈ ಕಾರು ಹೊಂದಿಲ್ಲ, ಇದು ಅನೇಕರನ್ನು ಕೆರಳಿಸಿತು.

ಲ್ಯಾಂಬೋರ್ಗಿನಿ ಕಾರಿಗೆ ಅಡ್ವಾನ್ಸ್ ಕೊಟ್ಟಿದ್ದು ಯಾರು?
ಸದ್ಯ ನಟ ದರ್ಶನ್ ಬಗ್ಗೆ ಮಾತಾಡಿದ ನಿರ್ಮಾಪಕ ಉಮಾಪತಿ, ದುಡ್ಡು ಕಳೆದುಕೊಂಡ್ರು ನಾನು ಮಾರ್ಯಾದೆ ಕಳೆದುಕೊಳ್ಳೋದಿಲ್ಲ. ಹಣಕ್ಕಾಗಿ ಸಂಬಂಧವನ್ನು ಕಳೆದುಕೊಳ್ಳುವ ವ್ಯಕ್ತಿ ಅಲ್ಲ ಎಂದ್ರು. ಲ್ಯಾಂಬೋರ್ಗಿನಿ ಕಾರು, ಕಾರು ಅಂತರಲ್ಲ ಆ ಕಾರಿಗೆ ಅಡ್ವಾನ್ಸ್​ ಕೊಟ್ಟಿದ್ದು ನಾನು, ಅವರ ದುಡ್ಡೆ ಕೊಟ್ಟಿದ್ದೇನೆ, ನಾನೇನು ಫ್ರೀಯಾಗಿ ಕೊಟ್ಟಿಲ್ಲ. ಕೆಲಸ ಮಾಡಿಸಿಕೊಂಡು ಹಣ ಕೊಟ್ಟಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ. ಅದೇನೇ ಇರಲಿ ದರ್ಶನ್ ಅವರ ಈ ಪ್ರಕರಣದಿಂದ ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Read More:

Sandeep Kumar. B

Leave a Comment