Rishika singh: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದ ರಿಷಿಕಾ ಸಿಂಗ್ ಇದ್ದಕಿದ್ದಂತೆ ಸಿನಿಮಾದಿಂದ ಕಣ್ಮರೆ ಆಗಿದ್ಯಾಕೆ?

By Sandeep Kumar. B

Published on:

Rishika Sing

Rishika singh accident: ರಿಷಿಕಾ ಸಿಂಗ್ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದರು ಆದರೆ ನಂತರ ಅವರು ಚಿತ್ರರಂಗದಲ್ಲಿ ಬಹಳ ವರ್ಷಗಳ ಕಾಲ ಕಾಣಿಸಿಕೊಂಡಿರಲಿಲ್ಲ. ರಿಷಿಕಾ ಸಿಂಗ್ (Rishika singh) ಕನ್ನಡದ ಖ್ಯಾತ ನಟ ಆದಿತ್ಯ ಮತ್ತು ನಿರ್ದೇಶಕ ಹಾಗೂ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ. ಕನ್ನಡದ ರಿಯಾಲಿಟಿ ಷೋ ಆದಂತ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ರಿಷಿಕಾ ಸಿಂಗ್ ಎಲ್ಲಿಯೂ ಕಾಣಿಸಲಿಲ್ಲ.

ನಟಿ ರಿಷಿಕಾ ಸಿಂಗ್ ಕಳ್ಳ ಮಳ್ಳ ಸುಳ್ಳ, ಕಂಠೀರವ ಕಠಾರಿವೀರ ಸುರಸುಂದರಾಂಗಿ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನೂ ಕೂಡ ನೆನಪಿನಲ್ಲಿದ್ದಾರೆ. ಇದೀಗ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಪರಿಸ್ಥಿತಿ ನೋಡಿ ಮತ್ತೆ ಅಳು ಬರುವುದರಲ್ಲಿ ಸಂಶಯವಿಲ್ಲ.

Rishika singh accident Incident

Rishika Sing Accident incident
Rishika Sing Accident incident

ಹೌದು, ಎರಡು ವರ್ಷಗಳ ಹಿಂದೆ ನಟಿ ರಿಷಿಕಾ ಸಿಂಗ್ ಅವರ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದ ನಂತರ ಬೆನ್ನು ಮತ್ತು ಕಾಲುಗಳ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು. ರಿಷಿಕಾ ಸಿಂಗ್ ನಿಲ್ಲಲೂ, ನಡೆಯಲೂ ಆಗದ ಸ್ಥಿತಿ ತಲುಪಿದ್ದರು. ಮತ್ತೆ ಇವರಿಗೆ ಸ್ವಂತ ಕಾಲಿನ ಮೇಲೆ ನಿಲ್ಲುವ ಶಕ್ತಿ ಬರುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿ ಬೆಡ್ ಮೇಲೆ ಮಲಗಿದ್ದ ರಿಷಿಕಾ ಸಿಂಗ್ ಸ್ಥಿತಿ ಚಿಂತಾಜನಕವಾಗಿತ್ತು

ಬಳಿಕ ವೈದ್ಯರ ಚಿಕಿತ್ಸೆಯಿಂದಾಗಿ ವ್ಹೀಲ್ ಚೇರ್ ಬಳಸುತ್ತಿದ್ದ ರಿಷಿಕಾ ಸಿಂಗ್ ಈಗ ಕೋಲುಗಳ ಸಹಾಯದಿಂದ ನಡೆಯಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ನಗುನಗುತ್ತಾ ಇದ್ದ ನಟಿ ರಿಷಿಕಾ ಸಿಂಗ್ ಮತ್ತೆ ಅದೇ ಖುಷಿಗೆ ಮತ್ತೊಮ್ಮೆ ಮರಳಲಿ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಶುಭ ಹಾರೈಸುವ ಮೂಲಕ ಹಾರೈಸೋಣ.

ಇತರೆ ವಿಷಯಗಳು:

Sandeep Kumar. B

Leave a Comment