Pavitra Gowda: ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರು, ವೈದ್ಯರು ಹೇಳಿದ್ದೇನು?

By Sandeep Kumar. B

Published on:

Pavitra Gowda

Pavitra Gowda admitted in Hospital: ಪವಿತ್ರ ಗೌಡ (Pavitra Gowda) ಹಾಗೂ ನಟ ದರ್ಶನ್ (Darshan) ಅವರು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ ಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ ಈ ನಡುವೆ ಪೊಲೀಸ್ ಕಸ್ಟಡಿ ಯಲ್ಲಿರುವ ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು, ಸದ್ಯ ಪವಿತ್ರ ಗೌಡ ಅವರ ಅರೋಗ್ಯ ಸ್ಥಿತಿ ಹೇಗಿದೆ ವೈದ್ಯರು ಏನ್ ಹೇಳಿದ್ದಾರೆ ಅನ್ನೋದನ್ನ ಮುಂದೆ ನೋಡಿ

Pavitra Gowda admitted in Hospital

ಲೋ ಬಿಪಿ ಪರಿಣಾಮ ಪವಿತ್ರ ಗೌಡ ಇಂದು ಕುಸಿದು ಬಿದ್ದಿದ್ದಾರೆ ಎಂದು ಡಾ. ಸವಿತಾ ತಿಳಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು. ನಾನು ಪೊಲೀಸ್ ಠಾಣೆಗೆ ಹೋಗಿ ಎಲ್ಲರನ್ನೂ ಪರೀಕ್ಷಿಸಿದೆ.

ಆದ್ರೆ ಪವಿತ್ರ ಗೌಡ ಬೆಳಗ್ಗಿನಿಂದ ತಿಂಡಿ, ಮಧ್ಯಾಹ್ನದ ಊಟವನ್ನೇ ಮಾಡಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆಸಿ ಚಿಕಿತ್ಸೆ ಕೊಟ್ಟಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಈಗ ಅವರ ಆರೋಗ್ಯ ಸುಧಾರಿಸಿದೆ. ಉಳಿದ ಆರೋಪಿಗಳು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಚಿಕಿತ್ಸೆ ನೀಡಿದ ಬಳಿಕ ಪೊಲೀಸರು ಪವಿತ್ರಾ ಗೌಡ ಅವರನ್ನು ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ದರು.

Read More:

Sandeep Kumar. B

Leave a Comment