Mahindra: ಸೋತು ಸುಣ್ಣವಾಗಿದ್ದ ಆನಂದ್ ಮಹೇಂದ್ರ ಭಾರತದ ದೇವರ ಮಗನಾಗಿದ್ದು ಹೇಗೆ? ನಿಜಕ್ಕೂ ಗ್ರೇಟ್ ಸಕ್ಸಸ್

By Sandeep Kumar. B

Published on:

Mahendra Success Story

Anand mahindra success story: ಅಕ್ಟೋಬರ್ 1945 ರಲ್ಲಿ, ಸಹೋದರರಾದ ಜಗದೀಶ್ ಚಂದ್ರ ಮಹೇಂದ್ರ ಮತ್ತು ಕೈಲಾಶ್ ಚಂದ್ರ ಮಹೇಂದ್ರ ಅವರು ಮೊಹಮ್ಮದ್ ಎನ್ನುವರ ಜೊತೆ ಸೇರಿ ಮಹೇಂದ್ರ (mahindra) ಮತ್ತು ಮೊಹಮ್ಮದ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಇದು ಇದು ಸ್ಟೀಲ್ ಟ್ರೇನಿಂಗ್ ಘಟಕವಾಗಿತ್ತು. ಸ್ವಾತಂತ್ರ್ಯದ ನಂತರ, ಅವರು ಮಹೇಂದ್ರ ಮತ್ತು ಮಹೇಂದ್ರ ಎಂಬ ಕಂಪನಿಯನ್ನು ಸ್ಥಾಪಿಸಿದರು. ಮಹೇಂದ್ರ ಅಂದ್ರೆ ಇಂದಿಗೂ ಈ ನಾಡಿನ ಹೊಲ ಗದ್ದೆಗಳಲ್ಲಿ ಓಡಾಡಿದ ಶಕ್ತಿಶಾಲಿ ಮಹೇಂದ್ರ ಟ್ರ್ಯಾಕ್ಟರ್ ಗಳು (mahindra Tractor) ನೆನಪಾಗುತ್ತವೆ.

ಈ ಸಹೋದರರಿಬ್ಬರು ವಿದೇಶಕ್ಕೆ ಹೋದಾಗ ಅಲ್ಲಿನ ಜೀಪ್ ಮಾದರಿ ನೋಡಿ, ನಮ್ಮ ದೇಶದ ರಸ್ತೆಗಳಲ್ಲಿ ಓಡಾಡಲು ಇಂಥದ್ದೇ ಕಾರು ಬೇಕು ಎಂಬಂತೆ ಮಹೇಂದ್ರ ಜೀಪುಗಳನ್ನು ನಿರ್ಮಿಸುತ್ತಾರೆ. ಅಗಿಲ್ಲಿ ನಮ್ಮ ಭಾರತದಲ್ಲಿ ಪೊಲೀಸರಲ್ಲಿ ಮಾತ್ರ ಹೆಚ್ಚಾಗಿ ಮಹೇಂದ್ರ ಜೀಪ್ ಬಳಸುತ್ತಿದ್ದರು. ಇವತ್ತು ಈ ಸಂಸ್ಥೆಯ ರೂವಾರಿ ಈ ಸಹೋದರ ಮೊಮ್ಮಗನಾದ ಆನಂದ್ ಮಹೇಂದ್ರ.

Mahindra Success Story

ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ MBA ಮುಗಿಸಿದ ನಂತರ, ಅವರು ಹಳ್ಳಿಗೆ ಮರಳಿದರು ಮತ್ತು ಅವರ ತಂದೆ ಮತ್ತು ಅಜ್ಜನಂತೆ ವ್ಯಾಪಾರಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಮಹೀಂದ್ರಾ ಕಂಪನಿಯು ಅಮೆರಿಕಾದ ಕಂಪನಿಯೊಂದಿಗೆ ಜಂಟಿ ಉದ್ಯಮವಾಗಿದ್ದು, ಟ್ರಾಕ್ಟರ್‌ಗಳು ಮತ್ತು ಕೃಷಿ ಉಪಕರಣಗಳನ್ನು ದೇಶೀಯವಾಗಿ ತಯಾರಿಸಿತು. ಮಹೀಂದ್ರಾ ಟ್ರಾಕ್ಟರುಗಳು ದೇಶೀಯವಾಗಿ ಸೀಮಿತವಾಗಿರದೆ ವಿದೇಶಗಳಲ್ಲಿಯೂ ಪ್ರಸಿದ್ಧವಾಗಿವೆ. ಆನಂದ್ ಮಹೇಂದ್ರ ಅವರು ತಮ್ಮ ಕಂಪನಿಯಲ್ಲಿ ಪೂರ್ಣಾವಧಿ ಉದ್ಯೋಗಿಯಾಗಿ ಕೆಲಸ ಮಾಡಿದರು, ಆದರೆ ಕ್ರಮೇಣ ಮೇಲಕ್ಕೆ ಏರಿದರು ಮತ್ತು 2012 ರಲ್ಲಿ ಕಂಪನಿಯಿಂದ ಡಾಕ್ಟರೇಟ್ ಪಡೆದರು. ಈ ಅವಧಿಯಲ್ಲಿ, ಮಹೀಂದ್ರಾ ಕಂಪನಿಯು ವಿದೇಶಿ ಕಂಪನಿ ಫೋರ್ಡ್‌ನೊಂದಿಗೆ ಕಾರುಗಳ ಉತ್ಪಾದನೆಯಲ್ಲಿ ಸಹಕರಿಸಿತು. ಇದು ಮಹೀಂದ್ರ ಎಕ್ಸ್ ಕಾರ್ಡ್ ಆಗಿದೆ.

ಆದರೆ ಈ ಕಾರನ್ನು ದೇಶದಲ್ಲಿ ಯಾರು ಒಪ್ಪಿಕೊಳ್ಳಲೇ ಇಲ್ಲ ಮಹೇಂದ್ರ ಅವರು ದೊಡ್ಡ ವೈಫಲ್ಯವನ್ನು ಎದುರಿಸಿದರು. ಈ ವೈಫಲ್ಯದ ನಂತರ ಎದೆಕುಂದದ ಆನಂದ್ ಮಹೇಂದ್ರ ಅವರು ತಮ್ಮದೇ ಯೋಚನೆಯಲ್ಲಿ ತಮ್ಮದೇ ಕಂಪೆನಿಯಿಂದ ಒಂದು ಹೊಸ ಕಾರ್ ಅನ್ನ ಉತ್ಪಾದಿಸಿದರು. ಅದುವೇ ಬುಲೆರೋ XUV. ಬುಲೆರೋ ಭಾರತದಲ್ಲಿ ಅತ್ಯಂತ ಯಶಸ್ವಿಯಾಯಿತು. ಆಗಿನ ಕಾಲದಲ್ಲಿ ಮಾರಾಟವಾಗುತ್ತಿದ್ದ ಟಾಪ್ ನಂಬರ್ ಒನ್ ಕಾರು ಬುಲೆರೋ ಆಗಿತ್ತು.

Mahindra Cars
Mahindra Cars

ಆದಾಗ್ಯೂ, ಮಾರುತಿಯಂತಹ ಕಂಪನಿಗಳ ಪ್ರಬಲ ಪೈಪೋಟಿ ಮಹೇಂದ್ರಗೆ ಭಾರೀ ನಷ್ಟವನ್ನು ಉಂಟುಮಾಡಿತು. ಆದರೆ ಆನಂದ ಮಹೇಂದ್ರ ಮಹೇಂದ್ರ ಕಂಪನಿ ಎಷ್ಟೇ ನಷ್ಟವಾದರೂ ಸ್ಕಾರ್ಪಿಯೋ ಎನ್ನುವ ರಫ್ ಅಂಡ್ ಟಫ್ ಗಾಡಿಯನ್ನ ಬಿಡುಗಡೆ ಮಾಡ್ತು. ಮಹಿಂದ್ರಾ ಇವರಿಗೆ ಅನುಭವಿಸಿದ ಎಲ್ಲಾ ನಷ್ಟಗಳನ್ನ ಸ್ಕಾರ್ಪಿಯೋ ತುಂಬಿಕೊಟ್ಟಿದ್ದು.

ಹಂತ ಹಂತವಾಗಿ ಮೇಲೇರುತ್ತಿರುವ ಆನಂದ್ ಮಹೇಂದ್ರ, ಟ್ರ್ಯಾಕ್ಟರ್, ಜೀಪ್ ಮಾತ್ರವಲ್ಲದೆ ಹಣಕಾಸು, ಕೃಷಿ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದಂತಹ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟರು. ಒಟ್ಟಿನಲ್ಲಿ ಆನಂದ್ ಮಹೇಂದ್ರ ಅವರ ಶ್ರಮ ಛಲ ಮಹೇಂದ್ರ ಈ ಮಟ್ಟಕ್ಕೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಮಾತ್ರವಲ್ಲದೆ ಹಲವಾರು ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.

Read More:

Sandeep Kumar. B

Leave a Comment