Puneeth Rajkumar: ಅಪ್ಪು ತನ್ನ ಮಕ್ಕಳಿಗೋಸ್ಕರ ಬಿಟ್ಟುಹೋದ ಅಸ್ತಿ ಎಷ್ಟು ಗೊತ್ತಾ

By Sandeep Kumar. B

Published on:

Puneeth Rajkumar

Puneeth Rajkumar Property: ಪುನೀತ್ ರಾಜಕುಮಾರ್ ಕನ್ನಡಿಗರ ಪಾಲಿನ ಆರಾಧ್ಯದೈವ ಆಗಿದ್ದಾರೆ, ಇನ್ನು ಪುನೀತ್ ರಾಜಕುಮಾರ್ ಅವರು ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಅಪ್ಪು ನಮ್ಮನ್ನ ಬಿಟ್ಟು ಅಗಲಿದರು ಅಭಿಮಾನಿಗಳು ಪಾಲಿಗೆ ಅವ್ರು ಯಾವತ್ತೂ ಬಿಟ್ಟೋಗೋಕೆ ಸಾಧ್ಯನೇ ಇಲ್ಲ ಅಷ್ಟರ ಮಟ್ಟಿಗೆ ಅಭಿಮಾನಿದೇವರುಗಳ ಬಳಗವನ್ನು ಪುನೀತ್ ರಾಜಕುಮಾರ್ (Puneeth Rajkumar) ಹೊಂದಿದ್ದಾರೆ.

ಅಪ್ಪು ಅಗಲಿದ ಕ್ಷಣವೇ ಇಡೀ ದೇಶವೇ ನಿಶಬ್ದದಂತಾಗಿತ್ತು ಅಪಾರ ಅಭಿಮಾನಿಗಳು ಕಣ್ಣೀರು ಹಾಕಿದರೂ ಅಭಿಮಾನಿ ದೇವರುಗಳ ಪ್ರೀತಿ ಇವತ್ತಿಗೂ ಕಡಿಮೆಯಾಗಿಲ್ಲ. ಬನ್ನಿ ಅದೇ ಪುನೀತ್ ಅವರು ತನ್ನ ಹೆಂಡತಿ ಮಕ್ಕಳಿಗಾಗಿ ಎಷ್ಟು ಅಸ್ತಿ ಬಿಟ್ಟೋಗಿದ್ದರೆ ಅನ್ನೋವ ಚಿಕ್ಕ ಮಾಹಿತಿಯನ್ನು ತಿಳಿಯೋಣ.

ಬದುಕಿರುವಾಗಲೇ ನಮ್ಮ ಪ್ರೀತಿಯ ಅಪ್ಪು ದುಡಿದ ಅರ್ಧದಷ್ಟು ಹಣವನ್ನು ಸಾಮಾಜಿಕ ಅಗತ್ಯಗಳಿಗೆ ಖರ್ಚು ಮಾಡುತ್ತಿದ್ದರು. ವೃದ್ಧಾಶ್ರಮ, ಅನಾಥಾಶ್ರಮ, ಹೆಣ್ಣು ಮಕ್ಕಳ ಉದ್ಯೋಗ, ಗೋಶಾಲೆಗಳಿಗೆ ಸಾಕಷ್ಟು ದೇಣಿಗೆ ನೀಡಿದರು. ಇದಲ್ಲದೆ, ಅವರು 1,800 ಹೆಣ್ಣುಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವ ಜೊತೆಗೆ ಅನೇಕ ನಿಸ್ವಾರ್ಥ ಸೇವೆಗಳನ್ನು ನೀಡಿದರು, ಜೊತೆಗೆ ಅವರ ಹೆಂಡತಿ ಮತ್ತು ಮಕ್ಕಳಿಗಾಗಿ ಸ್ವಲ್ಪ ಆಸ್ತಿಯನ್ನು ಸೃಷ್ಟಿಸಿದರು.

Puneeth Rajkumar Family
Puneeth Rajkumar Family

ಮೂಲಗಳ ಪ್ರಕಾರ: ಬೆಂಗಳೂರಿನ ಸದಾಶಿವನಗರದಲ್ಲಿ ಅಪ್ಪು ಬೃಹತ್ ಮನೆ ಕಟ್ಟಿದ್ದಾರೆ. ನಟ ಡಾ. ರಾಜ್‌ಕುಮಾರ್ ಅವರು ತಮ್ಮ ಹುಟ್ಟೂರಾದ ಗಾಜಿನೂರಿನಲ್ಲೊಂದು ಬಂಗಲೆ ನಿರ್ಮಿಸಿದ್ದರು. ಇದಲ್ಲದೆ, ಅವರು ತಮ್ಮ ಪತ್ನಿ ಅಶ್ವಿನಿಯೊಂದಿಗೆ ಎರಡು ಲಂಬೋರ್ಗಿನಿ ಕಾರುಗಳು, ವೋಲ್ವೋ ಮತ್ತು ಫಾರ್ಚುನರ್, ಹಲವಾರು ಕೋಟಿ ಮೌಲ್ಯದ ಸೈಕಲ್‌ಗಳು, 1 ಕೆಜಿ ಚಿನ್ನವನ್ನು ಖರೀದಿಸಿದರು ಮತ್ತು ಒಟ್ಟು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಅಪು ಅವರು ತಮ್ಮ 100 ಕೋಟಿ ಆಸ್ತಿಯ ಜೊತೆಗೆ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಮತ್ತು ಪ್ರೀತಿಯನ್ನು ಗಳಿಸಿದ್ದಾರೆ. ಇಷ್ಟೆಲ್ಲ ಗುಣಗಳನ್ನು ಹೊಂದಿರುವ ದೊಡ್ಮನೆ ನಗುವಿನ ರಾಜಕುಮಾರನನ್ನು ಕಳೆದುಕೊಂಡು ಅನಾಥವಾಗಿದೆ ಅಷ್ಟೇ ಅಲ್ಲ ಕೋಟಿಗಟ್ಟಲೆ ಅಭಿಮಾನಿಬಳಗವನ್ನು ಪುನೀತ್ ರಾಜಕುಮಾರ್ ಹೊಂದಿದ್ದಾರೆ.

Read More:

Sandeep Kumar. B

Leave a Comment