Vijayalakshmi Darshan: ನಟ ದರ್ಶನ್ ಗಾಗಿ ಶಕ್ತಿ ದೇವತೆ ಬಂಡೆ ಮಹಾಕಾಳಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ

By Sandeep Kumar. B

Published on:

Vijaya Lakshmi Darshan

Vijayalakshmi Darshan Visit Sree Bande Mahakali temple: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕ್ರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan) ಸ್ನೇಹಿತೆ ಪವಿತ್ರ ಗೌಡ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು ಹಾಗು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪತ್ನಿ ವಿಜಯ ಲಕ್ಷ್ಮಿ (Vijayalakshmi) ಹಾಗೂ ಸಹೋದರ ದಿನಕರ್ ಬೆಲ್ ಗಾಗಿ ವಕೀಲರನ್ನು ಭೇಟಿಯಾಗಿದ್ದರು.

ಇದೀಗ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಎಲ್ಲ ಆರೋಪಗಳಿಂದ ಮುಕತರಾಗಿ ಅಡಸು ಬೇಗ ಹೊರಗಡೆ ಬರಲಿ ಎಂಬುದಾಗಿ ನಿನ್ನೆ ಶಕ್ತಿ ದೇವತೆಯ ಮೊರೆ ಹೋಗಿದ್ದರು. ಶಕ್ತಿ ದೇವತೆ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಇನ್ನು ವಿಶೇಷ ಏನು ಅಂದ್ರೆ ಬಂಧನಕ್ಕೆ ಎರಡು ದಿನಗಳ ಮೊದಲು, ನಟ ದರ್ಶನ್ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದರು. ನಂತರ ದೃಷ್ಟಿ ತೆಗೆಸಿ ತಡೆ ಒಡೆಸಿ ಹೋಗಿದ್ರು. ದ್ರಷ್ಟಿ ಪೂಜೆ ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಗೊಂದಲ, ಗೊಂದಲ ಉಂಟಾಗಿದ್ದರಿಂದ ಅವರ ಮನೆಯಲ್ಲೂ ದೃಷ್ಟಿ ಪೂಜೆ ನೆರವೇರಿಸಿ, ಶಕ್ತಿ ದೇವಿಯನ್ನು ಪೂಜಿಸುವ ಪೂಜಾರಿಯಿಂದ ತಡೆ ಒಡೆಸಿದ್ರು. ಪೂಜೆ ಬಳಿಕ ಒಂದಷ್ಟು ದಿನ ಹೊರಗಡೆ ಎಲ್ಲಾದರೂ ಹೋಗಿ ಬನ್ನಿ ಎಂದು ನಟ ದರ್ಶನ್​ಗೆ ಪೂಜಾರಿ ಸಲಹೆ ಕೂಡ ಕೊಟ್ಟಿದ್ದರಂತೆ

Read More:

Sandeep Kumar. B

Leave a Comment