Chandan Shetty: ಲವ್ ಬೇರೆ ಸಂಸಾರವೇ ಬೇರೆ, ಒಂದೇ ರೂಮ್ ನಲ್ಲಿ ಸಂಸಾರ ಮಾಡಿದಾಗಲೇ ಎಲ್ಲ ಗೊತ್ತಾಗುತ್ತೆ!

By Sandeep Kumar. B

Published on:

Chandan Shetty and Niveditha Gowda

Chandan Shetty talk after Divorce: ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಜನರಿಗೆ ಹೆಚ್ಚಾಗಿ ಗೊತ್ತಾಗಿದ್ದು ಬಿಗ್ ಬಾಸ್ ಎನ್ನುವ ಕನ್ನಡ ರಿಯಾಲಿಟಿ ಷೋ ಮೂಲಕ, ಇಬ್ಬರು ಸ್ಪರ್ಧಿಗಳು ಈ ವೇದಿಕೆಯಲ್ಲಿ ಪರಿಚಯವಾಗಿ ಹಾಗೆಯೆ ಪ್ರೀತಿಸಲು ಶುರು ಮಾಡಿದ್ದೂ, ಅಲ್ಲಿಂದ ತಮ್ಮ ಹೊಸ ಜೀವನ ಶುರು ಆಗುತ್ತದೆ.

Chandan Shetty talk after Divorce

ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ ಉತ್ತಮ ದಂಪತಿಗಳು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಕೆಲವರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದರು. ಎಲ್ಲವು ಚನ್ನಾಗಿಯೇ ಇತ್ತು, ಆದ್ರೆ ನೆನ್ನೆ ಮೊನ್ನೆ ಜೊತೆಯಲ್ಲೇ ಇದು ಅವಾರ್ಡ್ ಪಂಕ್ಷನ್ ಕಾಣಿಸಿಕೊಂಡಿದ್ದ ಜೋಡಿ ಇದ್ದಕ್ಕಿದಂತೆ ಮಾರನೇ ದಿನ ಡೈವೋರ್ಸ್ ಸುದ್ದಿಯಲ್ಲಿ ಕಂಡುಬರುತ್ತಾರೆ. ಆದ್ರೆ ಜನಗಳು ಹೊರಗಿನಿಂದ ನೋಡುವುದೇ ಬೇರೆ ಅವರ ವಯಕ್ತಿಕ ಜೀವನದಲ್ಲಿ ಆಗೋದೇ ಬೇರೆ ಹಾಗಾಗಿ ಅವರ ಲೈಫ್ ವಿಚಾರ ಅವರಿಗೆ ಗೊತ್ತಿರುತ್ತೆ.

ಚಂದನ್ ಶೆಟ್ಟಿ ಸಂದರ್ಶನ ಒಂದರಲ್ಲಿ ತಮ್ಮ ಜೀವನದ ಬಗ್ಗೆ ಮುಕತವಾಗಿ ಮಾತಾಡಿದ್ದಾರೆ. ಜೀವನ ನಾವು ಅಂದುಕೊಂಡ ರೀತಿಯಲ್ಲಿ ನಡೆಯಲ್ಲ ಲೈಫ್ ಅನ್ನೋದು ಒಂದು ಸಮುದ್ರ ರೀತಿಯಲ್ಲಿ ಅದರಲ್ಲಿ ಸುನಾಮಿಗಳು ಬರುತ್ತೆ, ಚಿಕ್ಕದಾಗಿ ಅಲೆಗಳು ಏಳುತ್ತೆ, ದೊಡ್ಡ ಅಲೆಗಳು ಏಳುತ್ತೆ ಕೆಲವೊಮ್ಮೆ ಸಮುದ್ರ ಪ್ರಶಾಂತವಾಗಿರುತ್ತೆ ಎಂಬುದಾಗಿ ಉದಾಹರಣೆ ಕೊಟ್ಟು ಲೈಫ್ ಬಗ್ಗೆ ಹೇಳುತ್ತಾರೆ. ನಮ್ಮ ಜೀವನ ಕೂಡ ಹಾಗೆಯೆ. ಆದ್ರೆ ನನ್ನ ಲೈಫ್ ಹಾಗೆ ಆಗುತ್ತೆ ಅಂದುಕೊಂಡಿರಲಿಲ್ಲ. ನಾನು ಎಲ್ಲರಂತೆ ಸುಂದರವಾದ ಹುಡುಗಿಯನ್ನು ಮದುವೆಯಾಗಬೇಕು ಅಂದುಕೊಂಡು ಮದುವೆಯಾದೆ.

ಲವ್ ಬೇರೆ ಸಂಸಾರವೇ ಬೇರೆ, ಒಂದೇ ರೂಮ್ ನಲ್ಲಿ ಸಂಸಾರ ಮಾಡಿದಾಗಲೇ ಎಲ್ಲ ಗೊತ್ತಾಗುತ್ತೆ ಎಂಬುದಾಗಿ ಹೇಳಿದ್ದಾರೆ ಅಷ್ಟೇ ಅಲ್ಲದೆ, ನಾನು ಮತ್ತೆ ಹಳೆ ಚಂದನ್ ಶೆಟ್ಟಿ ಆಗಬೇಕು. ಹಳೆ ಚಂದನ್ ಶೆಟ್ಟಿ ಆಗುವ ಕನಸು ಇದೀಗ ಚಿಗುರುತ್ತಿದೆ ಎಂಬುದಾಗಿ ತನ್ನ ಮನದಾಳದ ಮಾತನ್ನು ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ.

Read More:

Sandeep Kumar. B

Leave a Comment