Tanisha Kuppanda: ವರ್ತೂರು ಸಂತೋಷ್ ಹಾಗೂ ತನಿಷಾ ಮದುವೆ ವಿಷ್ಯ ಬಿಚ್ಚಿಟ್ಟ, ತನಿಷಾ ಕುಪ್ಪಂಡ

By Sandeep Kumar. B

Updated on:

tanisha and Vartur Santhosh

Tanisha Kuppanda And Varthur Santhosh: ತನಿಷಾ ಹಾಗೂ ವರ್ತುರ್ ಸಂತೋಷ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಸುದ್ದಿ ವೈರಲ್ ಆಗುತ್ತಿರುತ್ತದೆ, ಬಿಗ್ ಬಾಸ್ 10 ಸೀಸನ್ ನಲ್ಲಿ ವರ್ತೂರ್ (Tanisha Kuppanda) ಹಾಗೂ ತನಿಷಾ ಜೋಡಿ ನೋಡಿ ಬಹಳಷ್ಟು ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಕಾಮೆಂಟ್ ಮಾಡುತ್ತಿದ್ದರು ಹಾಗೂ ಇನ್ನು ಕೆಲವರು ನೀವು ಮದುವೆಯಾಗಿ ಚೆನ್ನಾಗಿರತ್ತೆ ಎಂದು ಹಾರೈಸುತ್ತಿದ್ದರು.

ತನಿಷಾ ಎಲ್ಲೇ ಹೋಗಲಿ ಬರಲಿ, ಮಾಧ್ಯಮದವರ ಪ್ರಶೆ ನಿಮ್ಮ ಮತ್ತು ವರ್ತೂರ್ (Varthur Santhosh) ಅವರ ಮದುವೆ ಯಾವಾಗ ಎಂಬುದಾಗಿ ಕೇಳುತ್ತಿದ್ದರು, ಆದ್ರೆ ಇದೀಗ ಮಾಧ್ಯಮದವರ ಮುಂದೆ ಮಾತನಾಡಿ ನಾವಿಬ್ಬರು ಒಳ್ಳೆಯ ಸ್ನೇಹಿತರು, ಮದುವೆ ಆಗುವ ಮನಸ್ಥಿತಿ ನಮ್ಮಲ್ಲಿ ಇಲ್ಲ ಮುಂದೆ ಕೂಡ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿ ಇರುತೀವಿ ಎಂಬುದಾಗಿ ಹೇಳಿದ್ದಾರೆ.

Tanisha Kuppanda And Varthur Santhosh

ಅಷ್ಟೇ ಅಲ್ಲ ತನಿಷಾ ಅವರ ತಾಯಿ ಕೂಡ ವರ್ತೂರ್ ಸಂತೋಷ್ ಅವರನ್ನು ಮದುವೆ ಆಗ್ತೀಯಾ ಎಂಬುದಾಗಿ ಕೇಳಿದ್ದರಂತೆ ಆದ್ರೆ ನಾವು ಒಳ್ಳೆಯ ಫ್ರೆಂಡ್ ಆ ರೀತಿ ಏನು ಇಲ್ಲ ಎಂಬುದಾಗಿ ತನ್ನ ತಾಯಿಯವರಿಗೆ ಹೇಳಿದ್ರಂತೆ. ಅದೇನೇ ಇರಲಿ ನಿಮ್ಮ ಸ್ನೇಹ ಹೀಗೆ ಸದಾ ಇರಲಿ ಎಂಬುದಾಗಿ ಮತ್ತಷ್ಟು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

Tanisha Marriage Update
Tanisha Marriage Update

Read more

Sandeep Kumar. B

Leave a Comment