ಜೀವನದಲ್ಲಿ ಈ ವಿಷಯ ಗೊತ್ತಿದ್ರೆ ಚನ್ನಾಗಿ ಸಂಪಾದಿಸಿ ಹಣ ಉಳಿಸುತ್ತೀರಾ

ಜೀವನದಲ್ಲಿ ಹಣ ಯಾವ ರೀತಿ ಪ್ರಯೋಜನ ಹಾಗೂ ಹಣದ ಉಳಿತಾಯದ ಬಗ್ಗೆ ಹಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರಪಂಚದ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಒಮ್ಮೆ ಮಗಳ ಜೊತೆ ಒಂದು ರೆಸ್ಟೋರೆಂಟ್ ಗೆ ಹೋಗುತ್ತಾರೆ ಊಟದ ನಂತರ ಬಿಲ್ ಗೇಟ್ಸ್ ವೇಟರ್ ಗೆ ಒಂದು ಡಾಲರ್ ಟಿಪ್ಪನ್ನು ಕೊಡುತ್ತಾರೆ ಅದನ್ನು ನೋಡಿದ ಮಗಳು ಅದೇ ವೇಟರ್ ಗೆ 100 ಡಾಲರ್ ಟಿಪ್ಪ ಕೊಟ್ಟು ತಂದೆಯ ಹತ್ತಿರ ನಮ್ಮ ಬಳಿ ಇಷ್ಟು ಹಣವಿದ್ದರೂ ವೇಟರ್ ಗೆ ಒಂದು ಡಾಲರ್ ಟಿಪ್ಪ್ ಏಕೆ ಕೊಟ್ಟಿರಿ ಎಂದು ಕೇಳುತ್ತಾಳೆ ಆಗ ಬಿಲ್ ಗೇಟ್ಸ್ ನಿನ್ನ ತಂದೆ ಧನವಂತರು ಆದರೆ ನನ್ನ ತಂದೆ ಬಡವರು ನಾನು ನಡೆದು ಬಂದ ದಾರಿಯನ್ನು ಹೇಗೆ ಮರೆಯಲು ಸಾಧ್ಯ ಎನ್ನುತ್ತಾರೆ. ನಾವು ಸಂಪಾದಿಸಿದ ಹಣವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಆಲೋಚಿಸಿದರೆ ಧನವಂತರಾಗಲು ರೆಡಿ ಆಗಿದ್ದೇವೆ ಎಂದರ್ಥ. ನಮ್ಮ ಬಳಿ ಹಣ ಇಲ್ಲ ಎಂದರೆ ಮನೆಯಲ್ಲಿ, ಸಮಾಜದಲ್ಲಿ ಬೆಲೆ ಇರುವುದಿಲ್ಲ ಹಣವಿದ್ದವನಿಗೆ ಸಿಗುವ ಮರ್ಯಾದೆ ಹಣವಿಲ್ಲದವನಿಗೆ ಸಿಗುವುದಿಲ್ಲ. ಈ ದಿನ ಪ್ರಪಂಚವೆಲ್ಲ ಹಣ ಎಂಬ ಮಾಯೆಯಿಂದ ನಡೆಯುತ್ತಿದೆ. ಧನವಂತರಾಗಲು ಕೆಲವು ಅಂಶಗಳು ತಿಳಿದಿರಬೇಕು. ಸಮಾಜದಲ್ಲಿ ಹಣ್ಣಕ್ಕಿರುವ ಬೆಲೆ, ಹಣ ನಿಮಗೆ ಯಾವ ರೀತಿ ಉಪಯೋಗವಾಗುತ್ತದೆ ಎಂಬುದನ್ನು ತಿಳಿಯಬೇಕು. ಹಣವಿಲ್ಲದವರು ಯಾವ ರೀತಿ ಕಷ್ಟ ಪಡುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಸಂಪಾದಿಸಿದ ಹಣವನ್ನು ಉಳಿತಾಯ ಮಾಡಬೇಕು ಅದು ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಹಣವನ್ನು ಅತಿಯಾಗಿ ಖರ್ಚು ಮಾಡಿದರೆ ಆಪತ್ಕಾಲದಲ್ಲಿ ಸಾಲ ಮಾಡಿ ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಪ್ರಪಂಚದ ದೊಡ್ಡ ಧನವಂತರಲ್ಲಿ ಒಬ್ಬರಾದ ವಾರನ್ ಬಫೇಟ್ ಅವರು ಆದಾಯವನ್ನು ಉಳಿತಾಯ ಮಾಡದೆ ಕೆಲಸಕ್ಕೆ ಬಾರದ ವಸ್ತುಗಳನ್ನು ಖರೀದಿಸಿದರೆ ಒಂದಲ್ಲ ಒಂದು ದಿನ ಅವುಗಳನ್ನು ಮಾರಿ ಜೀವನ ಮಾಡಬೇಕಾಗುತ್ತದೆ ಆದ್ದರಿಂದ ಆದಾಯವನ್ನು ಖರ್ಚುಮಾಡದೆ ಉಳಿಸಿ ಯಾವುದಾದರೊಂದು ರೀತಿಯಲ್ಲಿ ಇನವೆಸ್ಟ್ ಮಾಡಿ ಇನವೆಸ್ಟ್ ಮಾಡದೆ ಹಣವನ್ನು ಉಳಿಸಿದರೆ ಅದು ಒಂದಲ್ಲಾ ಒಂದು ರೀತಿಯಲ್ಲಿ ನಷ್ಟವನ್ನು ತರುತ್ತದೆ ಇದಕ್ಕೆ ಕಾರಣ ಹಣದುಬ್ಬರ ಉದಾಹರಣೆಗೆ ಇವತ್ತು ಮಾರ್ಕೆಟ್ ನಲ್ಲಿ ಒಂದು ವಸ್ತು ನೂರು ರೂಪಾಯಿಗೆ ಸಿಗುತ್ತದೆ ಆದರೆ ಮುಂದಿನ ವರ್ಷಕ್ಕೆ ಅದರ ಬೆಲೆ ಹೆಚ್ಚಾಗುತ್ತದೆ. ಆದ್ದರಿಂದ ಹಣವನ್ನು ಉಳಿಸುವುದರ ಜೊತೆಗೆ ಇನವೆಸ್ಟ್ ಮಾಡುವುದನ್ನು ಕಲಿಯಬೇಕು ಎಂದು ಹೇಳುತ್ತಾರೆ. ನಿಮ್ಮ ಆದಾಯದ ಬಗ್ಗೆ ಯಾರ ಬಳಿಯೂ ಹೇಳಬಾರದು ಇದರಿಂದ ನೀವು ನಂಬಿದವರೆ ಮೋಸ ಮಾಡಬಹುದು. ಆಪತ್ಕಾಲದಲ್ಲಿ ಬಿಟ್ಟರೆ ಬಂಧುಗಳಿಗೆ, ಆಪ್ತರಿಗೆ ಸಾಲ ಕೊಡಬಾರದು ಕೊಟ್ಟರೆ ನಿಮ್ಮ ಹಣ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಅಲ್ಲದೆ ಸಂಬಂಧವು ಹಾಳಾಗುತ್ತದೆ.

ಒಂದು ಊರಿನಲ್ಲಿ ಒಬ್ಬ ರೈತನಿದ್ದ ಅವನ ಬಳಿ ಒಂದು ಎಕರೆ ಭೂಮಿಯಿತ್ತು ಆ ಭೂಮಿ ಮಳೆನೀರಿನಿಂದ ತುಂಬಿಹೋಗುತ್ತಿತ್ತು ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದ ಆದ್ರೆ ಬೆಳೆಯೆಲ್ಲ ಮಳೆ ನೀರಿನಿಂದ ಕೊಚ್ಚಿಹೋಗುತ್ತಿತ್ತು. ಆಗ ರೈತ ದೇವರ ಬಳಿ ನನ್ನ ಮೇಲೆ ಏಕೆ ಧ್ವೇಷ ಸಾಧಿಸುತ್ತಿರುವೆ ಎಲ್ಲರ ಭೂಮಿಯಲ್ಲಿ ಬೆಳೆ ಬರುತ್ತದೆ ಆದರೆ ನನ್ನ ಭೂಮಿಯಲ್ಲಿ ಬೆಳೆಯಿಲ್ಲ ಎಂದು ತನ್ನ ನೋವನ್ನು ಹೇಳುತ್ತಿರುತ್ತಾನೆ ಆಗ ಅಲ್ಲಿ ಹೋಗುತ್ತಿದ್ದ ಸಾಧು ರೈತನಿಗೆ ದೇವರಿಗೇಕೆ ಬೈಯ್ಯುತ್ತಿರುವೆ ದೇವರಿಗೆ ಎಲ್ಲರಿಗಿಂತ ನಿನ್ನ ಮೇಲೆ ಪ್ರೀತಿ ಜಾಸ್ತಿ ಎಂದು ಹೇಳುತ್ತಾನೆ. ಆಗ ರೈತ ದೇವರನ್ನು ನಂಬಿದರೆ ಕಷ್ಟ ತಪ್ಪಿದ್ದಲ್ಲ ತಿನ್ನಲು ಅನ್ನವಿಲ್ಲದೆ ಅದೆಷ್ಟೋ ದಿನ ಉಪವಾಸ ಇದ್ದೀನಿ ಹೀಗಿರುವಾಗ ಎಂತಹ ಪ್ರೀತಿ ಎಂದು ಕೇಳುತ್ತಾನೆ ಆಗ ಸಾಧು ನಿನ್ನ ಬಲ ನಿನಗೆ ಗೊತ್ತಿಲ್ಲ, ದೇವರು ನಿನ್ನನ್ನು ಕಾಪಾಡುತ್ತಿರುವುದು ನಿನಗೆ ಗೊತ್ತಾಗುತ್ತಿಲ್ಲ ಜೀವನದಲ್ಲಿ ಮೇಲೆ ಬರಬೇಕು ಎಂದರೆ ನಿನ್ನ ಬಲಹೀನತೆಯನ್ನು ನೋಡಿ ಅಲ್ಲೆ ನಿಂತು ಹೋಗಬಾರದು. ನಿನ್ನ ಬಲದ ಬಗ್ಗೆ ಯೋಚಿಸು, ಬೇರೆಯವರ ಅಭಿವೃದ್ಧಿಯನ್ನು ನೋಡಿ ಅಸೂಯೆ ಪಡಬೇಡ ಭೂಮಿಯಲ್ಲಿ ಯಾವಾಗಲೂ ನೀರಿರುತ್ತದೆ ಮೀನು ಸಾಕಾಣಿಕೆ ಮಾಡು ಒಂದು ವರ್ಷದ ನಂತರ ಧನವಂತನಾಗುವೆ. ಒಂದು ಸಮಸ್ಯೆಯ ಪರಿಹಾರಕ್ಕಾಗಿ ಹಲವು ರೀತಿಯಲ್ಲಿ ಯೋಚಿಸಬೇಕು ಹಲವು ಮಾರ್ಗದಲ್ಲಿ ಪ್ರಯತ್ನಿಸಬೇಕು ಆಗ ಯಾವುದಾದರೂ ಒಂದು ರೀತಿಯಲ್ಲಿ ಗೆಲ್ಲುತ್ತೀಯ ಎಂದು ಹೇಳಿ ಅಲ್ಲಿಂದ ಹೊರಟುಹೋಗುತ್ತಾರೆ. ರೈತನು ಸಾಧು ಹೇಳಿದಂತೆ ಮೀನು ಸಾಕಾಣಿಕೆ ಮಾಡಿ ಧನವಂತನಾಗುತ್ತಾನೆ. ಇದರಿಂದ ನಮಗೆ ಪರಿಸ್ಥಿತಿ ಎದುರಾದಾಗ ಅನಾನುಕೂಲ ಪರಿಸ್ಥಿತಿಯನ್ನು ಅನುಕೂಲ ಪರಿಸ್ಥಿತಿಯಾಗಿ ಬದಲಿಸಿ ಮುಂದೆ ಸಾಗಬೇಕು ಎಂದು ತಿಳಿಯುತ್ತದೆ. ಸಮಸ್ಯೆಯಿಂದ ಹೊರಬರುವ ಬಗ್ಗೆ ಯೋಚಿಸಿದಾಗ ಧನವಂತರಾಗುವ ಗೋಲ್ ತಲುಪಲು ಸಾಧ್ಯ. ಯಾರು ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೋ ಅವರು ಗೆಲ್ಲುತ್ತಾರೆ. ಆಪತ್ಕಾಲದಲ್ಲಿ ಹಣದಿಂದ ಪಾರಾಗಬಹುದು ಇದಕ್ಕಾಗಿ ಹಣ ಮುಖ್ಯವಾಗಿದೆ.

Leave a Comment

error: Content is protected !!