ಸಿಂಹರಾಶಿ: ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತಿಲ್ವಾ? ಇಲ್ಲಿದೆ ಪರಿಹಾರ ಮಾರ್ಗ

ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನ ಹಾಗೂ ಗೌರವವನ್ನು ನೀಡಲಾಗುತ್ತದೆ. ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾವುಗಳು ದೇವತೆಗಳೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಂಡಿವೆ. ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ ಅಂಟಿಕೊಳ್ಳುವುದು.

ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು. ದೀರ್ಘ ಸಮಯದ ನಂತರವಾದರೂ ಅಂದುಕೊಂಡ ಶಿಕ್ಷೆಯನ್ನು ನೀಡುವುದು ಎಂದು ನಂಬಲಾಗಿದೆ. ಕಾಳ ಸರ್ಪದೋಷವೆಂದು ನೀವು ಕೇಳಿರಬಹುದು, ಇದು ಮುಖ್ಯವಾಗಿ ಜನ್ಮಕುಂಡಲಿಯಲ್ಲಿನ ರಾಹು- ಕೇತುವಿನ ಸ್ಥಾನದಿಂದಾಗಿ ಕಂಡು ಬರುವ ದೋಷ. ವ್ಯಕ್ತಿ ತನ್ನ ಜನ್ಮ ಕುಂಡಲಿಯ ಆಧಾರದ ಮೇಲೆ ಸರ್ಪ ಅಥವಾ ಕಾಳ ಸರ್ಪ ದೋಷ ಇರುವುದನ್ನು ಕಂಡುಕೊಳ್ಳಬಹುದು. ನಂತರ ಅದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ತಲೆ ದೂರುತ್ತವೆ.

ಯಾರು ತಮ್ಮ ಜಾತಕ ಅಥವಾ ಕುಂಡಲಿಯನ್ನು ಹೊಂದಿರುವುದಿಲ್ಲವೋ ಅವರು ಸಹ ಕೆಲವು ಸೂಚನೆಗಳೊಂದಿಗೆ ಕಾಳ ಸರ್ಪ ದೋಷ ಇರುವುದನ್ನು ಗುರುತಿಸಿಕೊಳ್ಳಬಹುದು. ನಿದ್ರೆಯಲ್ಲಿರುವಾಗ ಹಾವುಗಳ ಕನಸು ಕಾಣುವುದು, ಕನಸಿನಲ್ಲಿ ಮನೆಯು ಸಂಪೂರ್ಣವಾಗಿ ನೀರಿನಿಂದ ಮುಳುಗಿದಂತೆ ಕಾಣುವುದು, ಯಾರೋ ಅಪರಿಚಿತರು ತೊಂದರೆ ಕೊಡುವಂತೆ, ಮನೆಯು ಕಳ್ಳತನಕ್ಕೆ ಒಳಗಾಗಿರುವಂತೆ, ಆಸ್ತಿ ಪಾಸ್ತಿ ನಾಶ ಹೊಂದಿರುವಂತೆ, ಆಪ್ತರು ಸಾವನ್ನು ಕಂಡಂತೆ ಹೀಗೆ ವಿವಿಧ ಬಗೆಯಲ್ಲಿ ಅಹಿತಕರವಾದ ಕನಸುಗಳು ಆಗಾಗ ಕಾಡುತ್ತಲೇ ಇರುತ್ತವೆ ಎಂದಾದರೆ ಅವರ ಜನ್ಮ ಕುಂಡಲಿಯಲ್ಲಿ ಕಾಳ ಸರ್ಪ ತೊಂದರೆ ಇದೆ ಎಂದು ಸುಲಭವಾಗಿ ನಿರ್ಧರಿಸಬಹುದು. ನಾಗ ಮತ್ತು ಕಾಳ ಸರ್ಪ ದೋಷ ಇರುವವರಿಗೆ ಮಾತ್ರ ಇಂತಹ ಕನಸುಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುವುದು.

ನಮ್ಮ ಕುಂಡಲಿಯಲ್ಲಿ ಇರುವ ಕಾಳ ಸರ್ಪ ದೋಷವು ಬದುಕಿನ ನೆಮ್ಮದಿ, ಯಶಸ್ಸು, ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಈ ದೋಷವು ರಾಹು ಮತ್ತು ಕೇತು ಗ್ರಹಗಳಿಂದ ಉಂಟಾಗುವುದು ಎಂದು ಹೇಳಲಾಗುವುದು. ಅಂದರೆ ಕುಂಡಲಿಯಲ್ಲಿ 1, 2, 5, 8ನೇ ಮನೆಯಲ್ಲಿ ರಾಹು-ಕೇತು ಇದ್ದರೆ ಅದನ್ನು ಕಾಳ ಸರ್ಪ ದೋಷ ಎಂದು ಪರಿಗಣಿಸಲಾಗುತ್ತದೆ. 1 ಮತ್ತು 2 ನೇ ಮನೆಯಲ್ಲಿ ರಾಹುಗಳಿದ್ದರೆ ವಿವಾಹ ಯೋಗವು ದೀರ್ಘ ವರ್ಷದ ನಂತರ ಬರುವುದು. 5ನೇ ಮನೆಯಲ್ಲಿ ಇದ್ದರೆ ತಡವಾದ ಸಂತಾನ ಭಾಗ್ಯ, 7ನೇ ಮನೆಯಲ್ಲಿ ಇದ್ದರೆ ಲೈಂಗಿಕ ಅಥವಾ ಸಂಸಾರದಲ್ಲಿ ಸಾಕಷ್ಟು ತೊಂದರೆ ಮತ್ತು ಕಷ್ಟಗಳು ಎದುರಾಗುತ್ತವೆ. 8ನೇ ಮನೆಯಲ್ಲಿ ಇದ್ದರೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಹೇಳಲಾಗುವುದು.

ಸದ್ಯ ಸಿಂಹ ರಾಶಿಯವರಿಗೆ ಕಾಳ ಸರ್ಪ ಯೋಗ ದೋಷ ನಡೆಯುತ್ತಿದ್ದು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಇದರಿಂದ ಆಗುವ ಪರಿಣಾಮದಿಂದ ಪಾರಾಗಬಹುದು. ಈ ಒಂದು ಮಂತ್ರವನ್ನು ಜಪಿಸುವಾಗ ಒಂದು ವಸ್ತುವನ್ನು ಉಪಯೋಗಿಸಿಕೊಂಡು ಮಂತ್ರ ಜಪಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಆ ವಿಶೇಷವಾದ ವಸ್ತುವನ್ನು ಮನೆಯಲ್ಲಿ ಇಟ್ಟು ಈ ಮಂತ್ರವನ್ನು ಜಪಿಸಬೇಕು ಏಕಾಕ್ಷರಿ ನಾರಿಕೇಳ ಎಂಬ ವಿಶೇಷವಾದ ವಸ್ತುವನ್ನು ಇಟ್ಟು ಕಾಳಸರ್ಪ ದೋಷ ನಿವಾರಣೆ ಮಂತ್ರವನ್ನು ಜಪಿಸಬೇಕು ಇದು ತೆಂಗಿನಕಾಯಿ ಆಕಾರದಲ್ಲಿರುತ್ತದೆ. ತೆಂಗಿನಕಾಯಿ ಬಹಳಷ್ಟು ದಪ್ಪವಾಗಿರುತ್ತದೆ ಅಥವಾ ಚಿಕ್ಕದಾಗಿರುತ್ತದೆ.

ತೆಂಗಿನಕಾಯಿ ಮೂರು ಕಣ್ಣನ್ನು ಹೊಂದಿದೆ ಈ ಏಕಾಕ್ಷಿ ನಾರೀಕೇಳ ಒಂದು ಕಣ್ಣನ್ನು ಹೊಂದಿದೆ. ಇದು ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಸಿಗುತ್ತದೆ ಇದಕ್ಕೆ ಶ್ರೀ ಫಲ ಎಂದು ಕೂಡ ಕರೆಯುತ್ತಾರೆ. 3 ಏಕಾಕ್ಷಿ ನಾರಿಕೇಳ ಫಲವನ್ನು ಮನೆಯಲ್ಲಿ ದೇವರಕೋಣೆಯಲ್ಲಿ ಇಟ್ಟು ಅದಕ್ಕೆ ಅರಿಶಿಣ ಹೂ ಗಂಧ ಸಮರ್ಪಿಸಿ ಪೂಜೆ ಸಲ್ಲಿಸಬೇಕು. ಮಂಗಳವಾರದಂದು ಪೂಜೆ ಸಲ್ಲಿಸಿ ಮಂತ್ರವನ್ನು ಜಪಿಸಬೇಕು ಬಹಳಷ್ಟು ಬೇಗ ನಿಮಗೆ ಇರುವ ದೋಷ ನಿವಾರಣೆಯಾಗುತ್ತದೆ. 108 ಬಾರಿ ಈ ಒಂದು ಮಂತ್ರವನ್ನು ಜಪಿಸಬೇಕು. ಒಂದು ಸಾರಿ ಈ ಮಂತ್ರವನ್ನು 108 ಬಾರಿ ಜಪಿಸಿದರೆ ಸಾಕು ನಿಮಗೆ ಇರುವ ಕಾಳಸರ್ಪ ದೋಷ ತಿವ್ರತೆ ಕಡಿಮೆಯಾಗುತ್ತದೆ. ಓಂ ಬ್ರಾಂ ಬ್ರೀಂ ಬ್ರೌಮ್ ಸಹರಾಹಾವೇ ನಮಃ ಕಾಳಸರ್ಪದೋಷ ಇದ್ದವರು ಈ ಮಂತ್ರವನ್ನು 108 ಬಾರಿ ಒಂದು ದಿನ ಜಪಿಸಿದರೆ ಸಾಕು.

ಕುಟುಂಬ ಸದಸ್ಯರೆಲ್ಲರಿಗೂ ಇದರ ಪ್ರಭಾವ ಬೀರುತ್ತದೆ ಕಾಳಸರ್ಪದೋಷ ನಿವಾರಣೆ ಆಗುತ್ತದೆ. ನಂತರ ಮನೆಯಲ್ಲಿ ಇರುವ ಹಿರಿಯರ ಕೈಯಿಂದ ಆ 3 ನಾರಿಕೆಳ ಫಲವನ್ನು ತೆಗೆದುಕೊಂಡು ಸರ್ಪದೋಷ ಇದ್ದವರಿಗೆ ದೃಷ್ಟಿಯನ್ನು ತೆಗೆಯಬೇಕು, ಯಾರು ತುಳಿಯದೇ ಇರುವ ಜಾಗದಲ್ಲಿ ಹಾಕಬೇಕು ಹರಿಯುವ ನೀರಿನಲ್ಲಿ ಬಿಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎಂತಹದೇ ತೀವ್ರವಾದ ಕಾಳಸರ್ಪದೋಷ ಇದ್ದರೂ ಕೂಡಾ ನಿವಾರಣೆಯಾಗುತ್ತದೆ.

ಸಿಂಹ ರಾಶಿಯವರು ನಿಮ್ಮ ಜಾತಕವನ್ನು ಪರಿಶೀಲಿಸಿಕೊಳ್ಳಿ ಜಾತಕದಲ್ಲಿ ಕಾಳ ಸರ್ಪ ದೋಷ ಇದ್ದರೆ ಈ ಒಂದು ವಿಶೇಷವಾದ ವಿಧಾನವನ್ನು ಅನುಸರಿಸುವುದರಿಂದ ನಿಮಗಿರುವ ಕಾಳಸರ್ಪದೋಷವನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಹಾಗೂ ಸೋಮವಾರ ದಿನದಂದು ಶಿವನಿಗೆ ಜೇನುತುಪ್ಪ ಹಾಗೂ ಹಾಲಿನಿಂದ ಅಭಿಷೇಕ ಮಾಡುವುದರಿಂದ ನಿಮಗೆ ಇರುವಂತ ಕಾಳಸರ್ಪ ದೋಷ ಕಡಿಮೆಯಾಗುತ್ತದೆ.

Leave a Comment

error: Content is protected !!