Kumbha Rashi: ಮೇ ತಿಂಗಳಲ್ಲಿ ಕುಂಭ ರಾಶಿಯವರ ಭವಿಷ್ಯ ಹೇಗಿರಲಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Astrology ಮೇ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ(Kumbha Rashi) 60% ಒಳ್ಳೆಯ ಹಾಗೂ 40 ಪ್ರತಿಶತ ಕೆಟ್ಟ ಫಲಗಳು ಕಂಡುಬರುತ್ತದೆ. ಸಾಕಷ್ಟು ಸಮಯಗಳಿಂದ ವಿವಾಹಕ್ಕಾಗಿ(Marriage) ಕಾಯುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಇನ್ನು ಆರ್ಥಿಕ ವಿಚಾರದಲ್ಲಿ ಮೇ ತಿಂಗಳು ಕುಂಭ ರಾಶಿಯವರಿಗೆ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಾರ್ಧ ಅಂದರೆ ಮೊದಲ 15 ದಿನಗಳು ಹಣದ ವಿಚಾರದಲ್ಲಿ ಕುಂಭ ರಾಶಿಯವರು ಒಳ್ಳೆಯ ಫಲವನ್ನು ಪಡೆಯುತ್ತಾರೆ ಆದರೆ ನಂತರದ 15 ದಿನಗಳಲ್ಲಿ ಸ್ವಲ್ಪಮಟ್ಟಿಗೆ ಕಷ್ಟ ಪಡಬೇಕಾಗುತ್ತದೆ ಈ ಕಾರಣಕ್ಕಾಗಿ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಿ. ಸಂಬಳ ತಡವಾಗಿ ಬರುವುದು ಹಾಗೂ ಬರಬೇಕಾಗಿರುವಂತಹ ಹಲವಾರು ಅಣ್ಣ ನಿಮ್ಮ ಕೈ ಸೇರದೆ ಇರುವರಿಗೂ ಕೂಡ ಇದಕ್ಕೆ ಒಂದು ಸೇರಿಕೊಂಡಂತಹ ಕಷ್ಟಕರ ಪರಿಸ್ಥಿತಿ ಆಗಬಹುದಾಗಿದೆ.

ಯಾವುದೇ ಕಾರಣಕ್ಕೂ ಕೂಡ ದೊಡ್ಡ ಮಟ್ಟದ ಇನ್ವೆಸ್ಟ್ಮೆಂಟ್ ಮಾಡಲು ಹೋಗಬೇಡಿ ಯಾಕೆಂದರೆ ಯೋಚನೆ ಮಾಡದೆ ನೀವು ಯಾವುದೇ ಆಸ್ತಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಂತರ ದೊಡ್ಡಮಟ್ಟದ ಹಣವನ್ನು ಕಳೆದುಕೊಳ್ಳಬೇಕಾಗಿ ಬರಬಹುದು ಹೀಗಾಗಿ ಈ ರೀತಿ ಯೋಚನೆ ಮಾಡದೆ ಹಾಗೂ ತಜ್ಞರ ಸಲಹೆ ಪಡೆಯದೇ ಈ ಕೆಲಸಕ್ಕೆ ಕೈ ಹಾಕಬೇಡಿ.

ಸಾಕಷ್ಟು ಸಮಯಗಳಿಂದ ನಡೆಯದೇ ಇರುವಂತಹ ಶುಭಕಾರ್ಯಗಳು ನಿಮ್ಮ ಮನೆಯಲ್ಲಿ ನಡೆಯಲಿದ್ದು ದೇವರ ಆಶೀರ್ವಾದಕ್ಕೆ ಪಾತ್ರರಾಗಲಿದ್ದೀರಿ. ಹೀಗಾಗಿ ಎಷ್ಟೇ ಕಷ್ಟ ಬಂದರೂ ಕೂಡ ಅದರ ಕೊನೆ ಎನ್ನುವುದು ನಿಮಗೆ ಸುಖಮಯವಾಗಿರುತ್ತದೆ ಹೀಗಾಗಿ ಭಗವಂತ ಮಹಾದೇವನ ಪೂಜೆಯನ್ನು ಮಾತ್ರ ಮಾಡುವುದನ್ನು ಬಿಡಬೇಡಿ. ಖಂಡಿತವಾಗಿ ಮೇ ತಿಂಗಳು ನಿಮಗೆ ಒಳ್ಳೆಯ ಲಾಭವನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!