ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ ಗೊತ್ತಾ. ಇಲ್ಲಿದೆ ನೋಡಿ ಯಾರಿಗೂ ತಿಳಿಯದ ರಹಸ್ಯ.

Reincarnation ನಮ್ಮ ಪುನರ್ಜನ್ಮದ ಕುರಿತಂತೆ ತಿಳಿಯುವಂತಹ ಕುತೂಹಲ ಕೇವಲ ನಮ್ಮಲ್ಲಿ ಮಾತ್ರವಲ್ಲದೆ ವಿಜ್ಞಾನಿಗಳಲ್ಲಿ(Scientist) ಕೂಡ ಇದ್ದು ಅದರ ಕುರಿತಂತೆ ಸಾಕಷ್ಟು ಸಂಶೋಧನೆ ಹಾಗೂ ರಿಸರ್ಚ್ ಗಳನ್ನು ನಡೆಸಲಾಗಿದೆ. ಅವುಗಳಲ್ಲಿ ತಿಳಿದು ಬಂದಿರುವ ಪ್ರಕಾರ ಕೆಲವೊಂದು ವಿಚಾರಗಳು ನಮ್ಮನ್ನು ಆಶ್ಚರ್ಯಪಡಿಸುತ್ತವೆ. ಅದೇನೆಂದರೆ ನಮ್ಮ ಆತ್ಮ(Spirit) ಕೇವಲ ಏಳು ಜನ್ಮಗಳನ್ನು ಪಡೆಯಲು ಮಾತ್ರ ಜನ್ಮವನ್ನು ಪಡೆದಿಲ್ಲ ಅದಕ್ಕಿಂತ ಹೆಚ್ಚಿನ ಜೀವನವನ್ನು ನಡೆಸುವ ಸಾಧ್ಯತೆ ಇದೆ ಹಾಗೂ ಪ್ರತಿಯೊಂದು ಜನ್ಮದಲ್ಲಿ ನಾವು ಹೊಂದಿರುವಂತಹ ಗುಣಗಳನ್ನು ಪ್ರತಿ ಜನ್ಮದಲ್ಲಿ ಸ್ವಲ್ಪ ಅಂಶವಾದರೂ ಕೂಡ ಹೊಂದಿರುತ್ತೇವೆ ಎಂಬುದಾಗಿ ಸಾಬೀತಾಗಿದೆ.

ಇನ್ನು ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದೀರಿ ಎನ್ನುವ ಕುರಿತಂತೆ ಕೆಲವೊಂದು ವಿಚಾರಗಳು ನಮಗೆ ಆಗಾಗ ನೆನಪಾಗಿ ಬರುತ್ತವೆ ಅದೇನಂದರೆ ಕೆಲವೊಂದು ಪರಿಸ್ಥಿತಿಯಲ್ಲಿ ನೀವು ಇದ್ದಾಗ ಇದು ಹಿಂದೊಮ್ಮೆ ಆಗಿತ್ತು ಎನ್ನುವ ನೆನಪು ಬರುವುದು ಹಿಂದಿನ ಜನ್ಮದ ಲಕ್ಷಣವಾಗಿದೆ. ಕೆಲವೊಮ್ಮೆ ಕನಸಿನಲ್ಲಿ ಕೂಡ ಎಲ್ಲೋ ನೋಡಿದ ಹಾಗೆ ಅನುಭವವನ್ನು ನೀಡುವಂತಹ ಘಟನೆಗಳು ನೆನಪಾಗುವುದು ಕೂಡ ಹಿಂದಿನ ಜನ್ಮದ(Reincarnation) ನೆನಪು ಆಗುವುದು ಎಂಬುದಾಗಿ ಭಾವಿಸಲಾಗಿದೆ.

ಕೆಲವೊಂದು ಸ್ಥಳಗಳು ನೀವು ನೋಡಿರದಿದ್ದರೂ ಕೂಡ ಪದೇಪದೇ ನಿಮ್ಮ ಕನಸಿನಲ್ಲಿ ಬರುತ್ತವೆ ಎಂದರೆ ಅದು ಖಂಡಿತವಾಗಿ ಹಿಂದಿನ ಜನ್ಮದ ಕನಸಾಗಿರುತ್ತದೆ(Reincarnation Dream) ಇವುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದರೂ ಕೂಡ ಆಗಾಗ ನಿಮ್ಮ ಕನಸಿನಲ್ಲಿ ಇವುಗಳು ಬಂದು ಹೋಗುತ್ತವೆ. ಕೆಲವೊಂದು ವ್ಯಕ್ತಿಗಳನ್ನು ನೀವು ಭೇಟಿ ಆಗದಿದ್ದರೂ ಕೂಡ ಅವರನ್ನು ನೋಡಿದಾಗ ಎಲ್ಲೋ ಅವರನ್ನು ನಾವು ಭೇಟಿಯಾಗಿದ್ದೇವೆ ಎನ್ನುವ ಅನುಭವಕ್ಕೆ ಬರುವುದು ಕೂಡ ಇದರ ಗುಣ ಲಕ್ಷಣವಾಗಿದೆ.

ಕೆಲವೊಂದು ಭಾಷೆಗಳನ್ನು ಕೂಡ ನೀವು ಅದರ ಕುರಿತಂತೆ ಸಮಗ್ರವಾಗಿ ಅರಿಯದಿದ್ದರೂ ಕೂಡ ಅವುಗಳನ್ನು ಕಲಿಯಲು ಹೆಚ್ಚು ಸಮಯವನ್ನು ನೀವು ತೆಗೆದುಕೊಳ್ಳುವುದಿಲ್ಲ ಇದು ಕೂಡ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಆ ಭಾಷೆಯನ್ನು(Language) ಕಲಿತಿದ್ದೀರಿ ಎನ್ನುವ ಗುಣಸೂಚಕವಾಗಿದೆ. ಇದೇ ರೀತಿಯ ಹಲವಾರು ಅಂಶಗಳು ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ದೀರಿ ಎನ್ನುವ ಕೆಲವೊಂದು ಲಕ್ಷಣಗಳನ್ನು ಆಗಾಗ ನಿಮಗೆ ಅರಿವಾಗದಂತೆ ಅರಿವಾಗುವ ಅನುಭವವನ್ನು ನೀಡುತ್ತದೆ.

Leave a Comment

error: Content is protected !!