ಕನಸಿನಲ್ಲಿ ಯಾವ ದೇವರು ಬಂದರೆ ಏನು ಸಂದೇಶ ಗೊತ್ತೇ

ಕನಸು ಯಾರಿಗೆ ಬೀಳುವುದಿಲ್ಲ ಹೇಳಿ ಕನಸು ಕಾಣದ ಮನುಷ್ಯನಿಲ್ಲ ಕೆಲವೊಮ್ಮೆ ನಾವು ಇಷ್ಟಪಟ್ಟಿದ್ದು ನಿಜ ಜೀವನದಲ್ಲಿ ಸಿಗುವುದಿಲ್ಲ ಹಾಗಾಗಿ ಕನಸಲ್ಲಾದರೂ ಕಂಡು ಖುಷಿ ಪಟ್ಟಿರುತ್ತೀವಿ ಕನಸುಗಳಿಗೆ ಇಂತಹದ್ದೇ ಎಂಬ ಚೌಕಟ್ಟಿಲ್ಲ ಇದೆ ಕನಸು ಬೀಳಬೇಕು ಎಂಬ ಷರತ್ತು ಇಲ್ಲ ಪ್ರತಿತೊಬ್ಬರಿಗೂ ಒಂದಲ್ಲ ಒಂದುಸಾರಿಯಾದರು ದೇವರು ಅಥವಾ ದೇವತೆಗಳನ್ನ ಕನಸಲ್ಲಿ ಕಂಡೆ ಕಂಡಿರುತ್ತೀವಿ

ಆದರೆ ಕನಸಲ್ಲಿ ದೇವರು ಸುಮ್ಮನೆ ಬರುವುದಿಲ್ಲ ಇದಕ್ಕೂ ಕೂಡ ಕಾರಣವಿರುತ್ತೆ ಸ್ವಪ್ನ ಶಾಸ್ತ್ರದ ಪ್ರಕಾರ ಇವುಗಳಬಗ್ಗೆ ಏನು ವಿವರಣೆಗಳಿವೆ ಎಂದು ನೋಡುವುದಾದರೆ ಕನಸಲ್ಲಿ ದೇವರು ಬರುವುದು ಅದೃಷ್ಟವೋ ದುರಾದೃಷ್ಟವೋ ಯಾವ್ಯಾವ ದೇವರು ಕನಸಲ್ಲಿ ಬಂದರೆ ಏನೆಲ್ಲಾ ಅರ್ಥ ಇದೆ ಎಂಬುದು ಕೆಲವರಿಗೆ ತಿಳಿದಿಲ್ಲ

ಸ್ವಪ್ನ ಶಾಸ್ತ್ರದ ಪ್ರಕಾರ ನೋಡುವುದಾದರೆ ಪ್ರತಿ ಕನಸಿಗೂ ನಾನರ್ಥವಿದೆ ಪ್ರತಿ ಕನಸಿಗೂ ಕೂಡ ಕನಸುಗಳೇ ವರ್ತಮಾನ ಭವಿಷ್ಯತ್ ಮುನ್ಸೂಚಕ ಆಗಿರುತ್ತದೆ ರಾತ್ರಿ ಬೀಳುವ ಕನಸುಗಳು ಬೆಳಿಗ್ಗೆಯವರೆಗೆ ನೆನಪಿರುತ್ತವೆ ಹಾಗೆ ಕೆಲವೊಂದು ಕನಸುಗಳು ನಿದ್ದೆಯಲ್ಲಿಯೇ ಮರೆತುಹೋಗುತ್ತವೆ ಕನಸು ಕಾಣೋದಕ್ಕೆ ಕಾಸು ಕೊಡಬೇಕಿಲ್ಲ ಆದರೆ ಕನಸಲ್ಲಿ ಕೂಡ ನಾನಾ ಅರ್ಥಗಳಿವೆ

ಮೊದಲನೇದಾಗಿ ದುರ್ಗಾದೇವಿಯು ಕನಸಿನಲ್ಲಿ ಬಂದರೆ ಸ್ವಪ್ನ ಶಾಸ್ತ್ರದ ಪ್ರಕಾರ ತುಂಬಾ ಒಳ್ಳೆಯದು ಅದರಲ್ಲೂ ದುರ್ಗಾದೇವಿಯು ಕೆಂಪು ಬಟ್ಟೆಯಲ್ಲಿ ನಗುತ್ತಿರುವಂತೆ ಕಂಡರಂತೆಯೂ ಮುಗಿತು ನಿಮ್ಮ ಜೀವನದಲ್ಲಿ ಮುಂದೆ ಪವಾಡಗಳೇ ನಡೆಯುತ್ತವೆ ಎಂಬ ನಂಬಿಕೆ ಇದೆ ನೀವು ಮುಟ್ಟಿದ್ದೆಲ್ಲ ಹೊನ್ನು ಅಂದುಕೊಂಡಿದ್ದೆಲ್ಲ ಈಡೇರಲಿದೆ ಪ್ರತಿ ಕ್ಷೇತ್ರದಲ್ಲಿ ಸಕ್ಸಸ್ ನಿಮ್ಮನ್ನ ಹಿಂಬಾಲಿಸಲಿದೆ ಕಾಯಿಲೆ ಇಂದ ಏನಾದರು ಬಳಲುತ್ತಿದ್ದರೆ ನೀವು ಶೀಘ್ರದಲ್ಲಿ ಗುಣಮುಖರಾಗುತ್ತೀರಿ ಎಂದು ಅರ್ಥ

ಎರಡನೆಯದು ಶಿವಲಿಂಗ ದೇವರ ದೇವಾ ಎನಿಸಿಕೊಂಡಿರುವ ಲಿಂಗಸ್ವರೂಪಿ ಶಿವನನ್ನ ಕನಸಲ್ಲಿ ಬಂದರೆ ಅದೃಷ್ಟವೇ ಸರಿ ಜಗಜ್ಯೋತಿ ಸ್ವರೂಪ ಶಿವಲಿಂಗ ಎಲ್ಲರ ಕನಸಲ್ಲಿ ಬರುವುದಿಲ್ಲ ಒಂದು ವೇಳೆ ನಿಮ್ಮ ಕನಸಲ್ಲಿ ಬಂದರೆ ನಿಮ್ಮ ಬದುಕು ಬದಲಾಯಿತು ಎಂದೇ ಅರ್ಥ ನಿಮ್ಮ ಶತ್ರುಗಳ ಮುಂದೆ ದಿಗ್ವಿಜಯ ಸಾಧಿಸಲಿದ್ದೀರಿ ಎಂದು ಈ ಶಿವಲಿಂಗ ಸೂಚಿಸುತ್ತಂತೆ

ಇನ್ನು ಶ್ರೀಕೃಷ್ಣನನ್ನು ಕನಸಲ್ಲಿ ಕಾಣುವುದು ಅಭಿವೃದ್ಧಿಯ ಸಂಕೇತ ಶ್ರೀಕೃಷ್ಣ ನಸುನಕ್ಕು ನಿಮ್ಮತ್ತ ನೋಡಿದ್ದೇ ಆದ್ದಲ್ಲಿ ರಾಜಯೋಗ ಬಂದಂತೆಯೇ ಹಾಗೆಯೆ ಭಗವಾನ್ ಶ್ರೀರಾಮ ಕನಸಲ್ಲಿ ಬಂದರೆ ದೊಡ್ಡಮಟ್ಟದ ಸಾಧನೆ ನಿಮ್ಮದಾಗಲಿದೆ ಎಂದು ಇದು ಅರ್ಥೈಯ್ಸುತ್ತೆ ನೀವು ಯಾವುದಾದರು ತೊಂದರೆಯಲ್ಲಿ ಸಿಲುಕಿದ್ದರೆ ಆರ್ಥಿಕ ಸಮಸ್ಯೆ ಇಂದ ಏನಾದರು ಬಳಲುತ್ತಿದ್ದರೆ ಶೀಘ್ರದಲ್ಲಿ ಮುಕ್ತಿ ಸಿಗಲಿದೆ ಎಂಬುದನ್ನ ಸೂಚಿಸುತ್ತದೆ

ಗಣೇಶನನ್ನು ಸಂಕಷ್ಟಹರ ಎನ್ನುತ್ತೇವೆ ವಿನಾಯಕ ಎಡ್ಡಾಲ್ಕಿ ಸಮಸ್ಯೆಗಳಿಗೆ ಜಾಗವಿಲ್ಲ ಹೀಗಾಗಿ ಕನಸಲ್ಲಿ ಗಣೇಶನನ್ನ ಕಂಡಿದ್ದೆ ಆದಲ್ಲಿ ನಿಮ್ಮ ಸಸ್ಯೆಗಳಿಗೆ ಅಂದಿನಿಂದಲೇ ಮುಕ್ತಿ ಸಿಗಲಿದೆ ಎಂಬುದನ್ನ ಗಣೇಶ ಸೂಚಿಸುತ್ತಾನಂತೆ ಅರ್ಧಕ್ಕೆ ನಿಂತಿರುವ ಕೆಲಸಗಳು ಮತ್ತೆ ಆರಂಭವಾಗಲಿದ್ದು ಶಿಘ್ರದಲ್ಲಿ ಶುಭಕಾರ್ಯಗಳು ನಡೆಯಲಿದೆ ಎಂದರ್ಥ

ಬ್ರಹಾಂಡದ ಸೃಷ್ಟಿಕರ್ತ ಶ್ರೀವಿಷ್ಣುವನ್ನ ಕನಸಿನಲ್ಲಿ ಕಾಣುವುದೇ ಪುಣ್ಯ ವೈಕುಂಠವಾಸ ಯಾರ ಕನಸಿನಲ್ಲಿ ಬರುತ್ತಾನೋ ಅವರಿಗಿಂತ ಪುಣ್ಯಶಾಲಿಗಳು ಇನ್ನೊಬ್ಬರಿಲ್ಲ ದೇವಾನು ದೇವತೆಗಳು ಕಡು ರೂಪದಲ್ಲಿ ಕಂಡರೆ ಮುಂದೆ ನಿಮಗೆ ತೊಂದರೆ ಬರುವ ಸಕುನ ಇಲ್ಲವೇ ಯಾವುದಾದರು ಹರಕೆ ತೀರಿಸಿಲ್ಲ ಎಂಬುವ ಸನ್ಹೆಯು ಆಗಿರುತ್ತಂತೆ ಇದು ಕನಸಲ್ಲಿ ದೇವರುಗಳು ಬರುವ ಸೂಚನೆಗಳು

Leave a Comment

error: Content is protected !!