Chanakya: ಹೆಂಡತಿಯ ಜೊತೆಗೆ ಅಪ್ಪಿತಪ್ಪಿಯು ಈ ವಿಚಾರಗಳನ್ನು ಹಂಚಿಕೊಳ್ಳಬೇಡಿ!

Wife Secret ಆಚಾರ್ಯ ಚಾಣಕ್ಯರ ಪ್ರಕಾರ ಕೆಲವೊಂದು ಅಂಶಗಳನ್ನು ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿ ಇಬ್ಬರೂ ಅನುಸರಿಸಿದರೆ ಮಾತ್ರ ಆ ಸಂಸಾರ ಎನ್ನುವಂತಹ ನಾಲ್ಕು ಚಕ್ರಗಳ ವಾಹನ ಸರಿಯಾದ ದಾರಿಯಲ್ಲಿ ಸಾಗುತ್ತದೆ ಎಂಬುದಾಗಿ ಹೇಳಿರುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಹೆಂಡತಿಯ ಬಳಿ ಗಂಡ(Husband) ಕೆಲವೊಂದು ವಿಚಾರಗಳನ್ನು ಹೇಳಿಕೊಳ್ಳಲೇಬಾರದು ಎನ್ನುವುದಾಗಿ ಹೇಳಿದ್ದಾರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಒಂದು ವೇಳೆ ಹೊರಗಡೆ ಎಲ್ಲಾದರೂ ನಿಮಗೆ ಅವಮಾನವಾಗಿದ್ದರೆ ಯಾರ ಬಳಿಯೂ ಅದರಲ್ಲಿ ವಿಶೇಷವಾಗಿ ಹೆಂಡತಿ ಬಳಿ ಹೇಳಲೇಬೇಡಿ. ಒಂದು ವೇಳೆ ನಿಮ್ಮಿಬ್ಬರ ಜಗಳದಲ್ಲಿ ಅವರು ಈ ವಿಚಾರವನ್ನು ಎತ್ತಿ ನಿಮಗೆ ಕೀಳಾಗಿ ನೋಡಬಹುದು ಹೀಗಾಗಿ ಇದು ನಿಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಮೂಡುವಂತೆ ಮಾಡಬಹುದಾಗಿದೆ. ಹಾಗೂ ಇದು ದಾಂಪತ್ಯ(Marriage Life) ಜೀವನಕ್ಕೆ ಒಳ್ಳೆಯದಲ್ಲ.

ದಾನ ಧರ್ಮ(Helping Poor) ಮಾಡುವ ಗುಣ ಒಳ್ಳೆಯದು ಹಾಗೂ ಇದರಿಂದ ಪುಣ್ಯ ಪ್ರಾಪ್ತಿ ಕೂಡ ಆಗುತ್ತದೆ ಆದರೆ ಇದನ್ನು ಊರು ತುಂಬಾ ಹೇಳಿಕೊಂಡು ಬರಬೇಡಿ ಅದರಲ್ಲಿಯ ವಿಶೇಷವಾಗಿ ಹೆಂಡತಿಯ ಬಳಿ ಹೇಳಲೇಬೇಡಿ. ಯಾಕೆಂದರೆ ದಾನ ಧರ್ಮಗಳನ್ನು ಮಾಡುವುದು ಹೆಂಡತಿಗೆ ತಿಳಿದರೆ ಅದರ ಕುರಿತಂತೆ ಕೀಳಾಗಿ ಮಾತನಾಡುವ ಪರಿಶ್ರಮವನ್ನು ಕೆಲವರು ಬಳಸಿಕೊಳ್ಳಬಹುದು. ಅದರಲ್ಲಿಯೂ ಪ್ರಮುಖವಾಗಿ ನೀವು ಎಷ್ಟು ಸಂಪಾದನೆ ಮಾಡುತ್ತೀರಿ ಎನ್ನುವ ಸತ್ಯವನ್ನು ಪತ್ನಿಯರಿಗೆ ಹೇಳಬಾರದು ಇದು ಕೂಡ ಸಾಕಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಒಂದು ವೇಳೆ ನೀವು ಎಷ್ಟು ದುಡಿಯುತ್ತೀರಿ ಎಂಬುದನ್ನು ತಿಳಿದರೆ, ಒಂದು ವೇಳೆ ಅದು ದೊಡ್ಡ ಪ್ರಮಾಣದಲ್ಲಿ ಇದ್ದರೆ ಆ ಹಣದಲ್ಲಿ ದುಂದು ವೆಚ್ಚ ಖರ್ಚು ಮಾಡಲು ನಿಮ್ಮ ಹೆಂಡತಿ ಪ್ರಾರಂಭಿಸುತ್ತಾಳೆ. ಒಂದು ವೇಳೆ ನೀವು ದುಡಿಯುವ ಹಣ ಕಡಿಮೆಯಾಗಿದ್ದರೆ ನಿಮ್ಮ ಖರ್ಚು ಹೆಚ್ಚು ಗಳಿಗೆ ಕಡಿವಾಣ ಹಾಕಲು ನಿಮ್ಮ ಹೆಂಡತಿ ಪ್ರಾರಂಭಿಸುತ್ತಾಳೆ ಎಂಬುದಾಗಿ ಚಾಣಕ್ಯರು(Chanakya) ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಈ ಮೇಲೆ ತಿಳಿಸಿರುವಂತಹ ಕೆಲವೊಂದು ವಿಚಾರಗಳನ್ನು ಅಪ್ಪಿ ತಪ್ಪಿಯು ನಿಮ್ಮ ಹೆಂಡತಿಯರ ಬಳಿ ಹೇಳುವುದಕ್ಕೆ ಹೋಗಬೇಡಿ.

Leave a Comment

error: Content is protected !!