Lakshmi Pooja: ಶುಕ್ರವಾರದಂದು ಲಕ್ಷ್ಮಿ ದೇವಿಗೆ ಇಷ್ಟವಾಗುವಂತಹ ಈ ಕೆಲಸಗಳನ್ನು ಮಾಡಿ ಧನವಂತರಾಗಿ.

Lakshmi Pooja ಶ್ರಾವಣ ಮಾಸ ಈಗಾಗಲೇ ಆರಂಭವಾಗಿದ್ದು ಇದು ಮಹಾದೇವನಿಗೆ ಮೀಸಲಾಗಿರುವಂತಹ ತಿಂಗಳಾಗಿದೆ ಎಂಬುದಾಗಿ ಪುರಾಣ ಶಾಸ್ತ್ರಗಳು ಹಾಗೂ ಗ್ರಂಥಗಳು ಹೇಳುತ್ತವೆ. ಆದರೆ ಈ ಸಂದರ್ಭದಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡುವುದರಿಂದಲೂ ಕೂಡ ಪುಣ್ಯ ಸಂಪಾದನೆ ಹಾಗೂ ಸಂಪತ್ತಿನ ಸಂಪಾದನೆ ಆಗಲಿದೆ. ಹೀಗಾಗಿ ಲಕ್ಷ್ಮಿ ದೇವಿಗೆ ಇಷ್ಟ ಆಗುವಂತಹ ಕೆಲವು ಕೆಲಸಗಳನ್ನು ಮಾಡಿದರೆ ಕೂಡ ಆಕೆ ಪ್ರಸನ್ನಳಾಗುತ್ತಾಳೆ.

ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿಗೆ ಇಷ್ಟ ಆಗುವಂತಹ ಕೆಲಸಗಳನ್ನು ಮಾಡಿದರೆ ಕೂಡ ಅದು ಪೂಜೆಗೆ ಸಮಾನವಾಗಿರುತ್ತದೆ. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮೊದಲಿಗೆ ಹೇಳುವುದು ಕೂಡ ಅವುಗಳಲ್ಲಿ ಒಂದಾಗಿದ್ದು ಈ ಸಂದರ್ಭದಲ್ಲಿ ಎದ್ದರೆ ಸರಿಯಾದ ಸಮಯಕ್ಕೆ ಇದ್ದಂತೆ ಅರ್ಥವಾಗುತ್ತದೆ ಇದು ಕೂಡ ಲಕ್ಷ್ಮೀದೇವಿಗೆ ಇಷ್ಟ ಆಗಿರುವಂತಹ ಕೆಲಸಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರತಿದಿನ ಆದಷ್ಟು ಬೇಗ ಎದ್ದೇಳುವುದು ಒಳ್ಳೆಯ ಅಭ್ಯಾಸವಾಗಿದ್ದು ಇದನ್ನು ರೂಡಿಸಿಕೊಳ್ಳುವುದು ಉತ್ತಮವಾಗಿದೆ.

ಬೆಳಗ್ಗೆ ಎದ್ದ ತಕ್ಷಣವೇ ಸ್ನಾನ ಮಾಡಿ ಶುಚಿಯಾಗುವುದು ಕೂಡ ಉತ್ತಮ ಅಭ್ಯಾಸವಾಗಿದ್ದು ಈ ಸಂದರ್ಭದಲ್ಲಿ ನೀವು ಸ್ನಾನ ಮಾಡಿ ಶುಚಿಯಾದ ನಂತರ ಮನೆಯಲ್ಲಿರುವಂತಹ ದೇವರು ಕೋಣೆಯಲ್ಲಿ ಪೂಜೆ ಮಾಡುವುದು ಅಥವಾ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬರುವುದು ಕೂಡ ಉತ್ತಮ ಅಭ್ಯಾಸವಾಗಿದೆ. ಅದರಲ್ಲೂ ವಿಶೇಷವಾಗಿ ಶುಕ್ರವಾರದ ದಿನದಂದು ಲಕ್ಷ್ಮೀದೇವಿಯ ಪೂಜೆ ಮಾಡುವುದು ನಿಮಗೆ ಇನ್ನಷ್ಟು ಯಶಸ್ಸನ್ನು ತಂದು ಕೊಡಲಿದೆ.

ಇದಾದ ನಂತರ ಗೋವುಗಳಿಗೆ ಮೇವುಗಳನ್ನು ಮತ್ತು ಅವುಗಳು ತಿನ್ನುವಂತಹ ಆಹಾರವನ್ನು ಅರ್ಪಿಸುವುದು ನಿಮಗೆ ಇನ್ನಷ್ಟು ಪುಣ್ಯ ಪ್ರಾಪ್ತಿಯನ್ನು ಮಾಡುತ್ತದೆ. ಕಷ್ಟದಲ್ಲಿರುವವರಿಗೆ ಅವರಿಗೆ ಬೇಕಾಗುವಂತಹ ಸಹಾಯವನ್ನು ಮಾಡುವುದು ಕೂಡ ನಿಮ್ಮ ಪುಣ್ಯ ಪ್ರಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಒಳ್ಳೆಯ ಫಲವನ್ನು ಸಿಗುವಂತೆ ಮಾಡುತ್ತದೆ ಹೀಗಾಗಿ ಈ ಮೇಲೆ ಹೇಳಿರುವಂತಹ ಕೆಲಸಗಳನ್ನು ತಪ್ಪದೆ ಮಾಡಿ.

Leave a Comment

error: Content is protected !!