Rama Navami: ನಿಮ್ಮ ಮಗನಿಗೆ ಈ ಹೆಸರು ಇಟ್ಟರೆ ರಾಮನಂತೆ ಪ್ರಪಂಚದಲ್ಲಿ ಬೆಳಗುತ್ತಾನೆ. ತಪ್ಪದೇ ಈ ಹೆಸರನ್ನು ಇಡಿ.

Names For Babies ಮೊದಲಿಗೆ ಪ್ರತಿಯೊಬ್ಬರಿಗೂ ಕೂಡ ರಾಮನವಮಿ ಹಬ್ಬದ ಶುಭಾಶಯಗಳು. ಇತ್ತೀಚಿನ ದಿನಗಳಲ್ಲಿ ಹುಟ್ಟುವಂತಹ ಮಕ್ಕಳಿಗೆ ದೇವರ ಹೆಸರನ್ನು ಇಡೋದು ದಿನೇ ದಿನೇ ಕಡಿಮೆಯಾಗುತ್ತಿದೆ. ಪ್ರಪಂಚ ಎಷ್ಟೇ ಆಧುನಿಕತೆಯಿಂದ ಕೂಡಿದರೂ ಕೂಡ ನಮ್ಮ ಸಂಪ್ರದಾಯವನ್ನು ನಾವು ಮರೆಯಬಾರದು. ಇಂದಿನ ಲೇಖನಿಯಲ್ಲಿ ಹುಟ್ಟುವಂತಹ ಗಂಡು ಮಕ್ಕಳಿಗೆ ಭಗವಾನ್ ಶ್ರೀ ರಾಮನ(Bhagavan Sri Ram) ಹೆಸರಿಗೆ ಸಂಬಂಧಪಟ್ಟ ಹೆಸರನ್ನು ಇಡುವುದರಿಂದ ಆತ ರಾಮನಂತೆ ಇಡೀ ಪ್ರಪಂಚದಲ್ಲಿ ಬೆಳಗುತ್ತಾನೆ ಎನ್ನುವ ಕುರಿತಂತೆ ತಿಳಿಯಲು ಹೊರಟಿದ್ದೇವೆ. ಹಾಗಿದ್ದರೆ ಆ ಹೆಸರುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಅವಿರಾಜ: ಶ್ರೀರಾಮನಿಗೆ(Sri Ram) ಹಲವಾರು ಹೆಸರುಗಳನ್ನು ಇಡಲಾಗಿದ್ದು ಅವುಗಳಲ್ಲಿ ಇದು ಕೂಡ ಒಂದಾಗಿದೆ. ಕರೆಯಲು ಕೂಡ ಚೆನ್ನಾಗಿರುವ ಈ ಹೆಸರಿನ ಅರ್ಥ ಸೂರ್ಯನನ್ನು ಬೆಳಗುವವನು ಎಂದು ಆಗಿದೆ. ಒಂದು ವೇಳೆ ನಿಮ್ಮ ಮಗನಿಗೆ ರಾಮನ ಹೆಸರನ್ನು ಇಡಲು ಪ್ರಯತ್ನಿಸಿದರೆ ಇದೊಂದು ಒಳ್ಳೆಯ ಆಯ್ಕೆಯಾಗಿದೆ. ವಿರಾಜ: ಶ್ರೀರಾಮ ಸೂರ್ಯವಂಶದ ಕುಡಿಯಾಗಿರುವ ಕಾರಣದಿಂದಾಗಿ ಆತನಿಗೆ ವಿರಾಜ ಎನ್ನುವ ಹೆಸರನ್ನು ಕೂಡ ಇಡಲಾಗಿದ್ದು ಇದನ್ನು ಕೂಡ ನಿಮ್ಮ ಮಗನಿಗೆ ಹೆಸರಿನ ರೂಪದಲ್ಲಿ ಇಡಬಹುದಾಗಿದೆ.

ಶಾಶ್ವತ್; ಈ ಹೆಸರನ್ನು ಕೂಡ ಈಗಾಗಲೇ ಕೇಳಿರುತ್ತೀರಿ ಆದರೆ ಇದು ರಾಮನಿಗೆ ಸಂಬಂಧಪಟ್ಟಂತಹ ಹೆಸರು ಎನ್ನುವುದು ನಿಮಗೆ ತಿಳಿಯದಿರಬಹುದು. ಈ ಹೆಸರನ್ನು ಕೂಡ ಜನರು ಇಷ್ಟಪಡುತ್ತಾರೆ. ಮಾನ್ವಿಕ್; ಈ ಹೆಸರು ಕೂಡ ಭಗವಾನ್ ರಾಮನಿಗೆ ಸಂಬಂಧಪಟ್ಟದ್ದಾಗಿದ್ದು ಮತ್ತು ದಯೆ ಹಾಗೂ ದೇವರಲ್ಲಿ ನಂಬಿಕೆ ಇಡುವವನು ಎನ್ನುವುದಾಗಿ ಇದರ ಅರ್ಥವಾಗಿವೆ. ಈ ಹೆಸರನ್ನು ಕೂಡ ನೀವು ನಿಮ್ಮ ಮಗುವಿಗೆ ಇಡುವುದರಿಂದ ಆತನಿಗೆ ರಾಮನ ಗುಣಗಳು ಜನ್ಮತಹ ಬರೋದಕ್ಕೆ ಪ್ರಾರಂಭವಾಗುತ್ತದೆ.

ಅಥರ್ವ(Atharva); ನಾಲ್ಕು ವೇದಗಳಲ್ಲಿ ಒಂದಾಗಿರುವಂತಹ ಅಥರ್ವ ವೇದದ ಉಲ್ಲೇಖವನ್ನು ತೆಗೆದುಕೊಂಡು ಈ ಹೆಸರನ್ನು ನೀವು ಇಡಬಹುದು ಮಾತ್ರವಲ್ಲದೆ ಇದು ರಾಮನ ಹಲವಾರು ಹೆಸರುಗಳಲ್ಲಿ ಒಂದು ಕೂಡ ಆಗಿದೆ. ಅದ್ವೈತ; ಇದು ಕೂಡ ರಾಮನ ಹೆಸರುಗಳಲ್ಲಿ ಒಂದಾಗಿದ್ದು ಇದರ ಅರ್ಥ ವಿಶಿಷ್ಟವಾದವನ್ನು ಅಥವಾ ಬೇರೆಯವರಿಗಿಂತ ವಿಭಿನ್ನವಾದವನ್ನು ಎನ್ನುವುದಾಗಿದೆ. ಇವುಗಳಲ್ಲಿ ಯಾವ ಹೆಸರಿಟ್ಟರೂ ಕೂಡ ರಾಮನ ಅರ್ಥವನ್ನು ಸೂಚಿಸುತ್ತದೆ ಹಾಗೂ ಆತನ ಗುಣಗಳನ್ನೇ ಮೈಗೂಡಿಸುವ ಆಶೀರ್ವಾದವನ್ನು ನೀಡುತ್ತದೆ.

Leave a Comment

error: Content is protected !!