Gouri Khan: ಪಠಾಣ್ ಸಿನಿಮಾದ ಗೆಲುವಿನ ಬೆನ್ನಲ್ಲೇ ಶಾರುಖ್ ಖಾನ್ ಪತ್ನಿಯ ಮೇಲೆ ದೂರು ದಾಖಲು! ಯಾಕೆ ಗೊತ್ತಾ?

Shah Rukh Khan ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(SRK) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಎಲ್ಲರೂ ಕೂಡ ಅವರ ಅಭಿಮಾನಿಗಳು. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಶಾರುಖ್ ಖಾನ್ ಅವರ ಹೆಸರು ಕೂಡ ಮೊದಲನೇ ಸಾಲಿನಲ್ಲಿ ಕೇಳಿ ಬರುತ್ತದೆ. ಸಾಕಷ್ಟು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಈಗ ಪಠಾಣ್(pathaan) ಸಿನಿಮಾದ ಮೂಲಕ ಗೆಲುವನ್ನು ದಾಖಲಿಸಿದ್ದಾರೆ.

ನಿಜಕ್ಕೂ ಇದೊಂದು ಅವರಿಗೆ ಬೇಕಾಗಿದ್ದ ಗೆಲುವಾಗಿತ್ತು. ಪಠಾಣ್ ಸಿನಿಮಾದ ಮೂಲಕ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪೈಕಿಯಲ್ಲಿ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಸಿನಿಮಾದ ಗೆಲುವಿನ ಬೆನ್ನಲ್ಲೇ ಈಗ ಅವರ ಪತ್ನಿ ಆಗಿರುವ ಗೌರಿ ಖಾನ್(Gouri Khan) ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಒಂದು ದಾಖಲಾಗಿದೆ ಎನ್ನುವ ಶಾ’ ಕಿಂಗ್ ವಿಚಾರ ಹೊರ ಬಂದಿದೆ.

ಶಾರುಖ್ ಖಾನ್ ಅವರ ಪತ್ನಿ ಎಂದು ಹೇಳುವುದಕ್ಕಿಂತ ಹೆಚ್ಚಿಗೆ ಇಂಟೀರಿಯರ್ ಡಿಸೈನರ್ ಆಗಿ ಗೌರಿ ಖಾನ್(Gouri Khan) ಅವರು ಸಾಕಷ್ಟು ಜನಪ್ರಿಯತೆ ಹಾಗೂ ಗುರುತನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ. ಸಾಕಷ್ಟು ಐಷಾರಾಮಿ ಮನೆಗಳಿಗೆ ತಾವೇ ಡಿಸೈನಿಂಗ್ ಮಾಡಿ ಅದು ಚೆನ್ನಾಗಿ ಕಾಣುವಂತೆ ಮಾಡಿದ್ದಾರೆ. ಇನ್ನು ಈಗ ಗೌರಿ ಖಾನ್ ಅವರ ವಿರುದ್ಧ ಒಬ್ಬ ವ್ಯಕ್ತಿ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದು ಗಂಭೀರವಾದ ಪ್ರಕರಣವನ್ನು ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೌರಿ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅಪಾರ್ಟ್ಮೆಂಟ್ನಲ್ಲಿ ಅವರನ್ನು ನಂಬಿ ಜಶ್ವಂತ ಶಾ(Jashwanth Shah) ಎನ್ನುವ ವ್ಯಕ್ತಿ ಫ್ಲಾಟ್ ಅನ್ನು ಖರೀದಿಸಲು ಹಣವನ್ನು ನೀಡಿದರಂತೆ. ಆದರೆ ಈಗ ಫ್ಲ್ಯಾಟ್ ಅನ್ನು ಕೂಡ ಬೇರೆಯವರಿಗೆ ನೀಡಿದ್ದು ಹಾಗೂ ಹಣವನ್ನು ಕೂಡ ಹಿಂದಿರುಗಿಸುತ್ತಿಲ್ಲ ಎನ್ನುವುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!