ಅಪ್ಪು ತರಾನೇ ಮಾದರಿಯಾದ ದ್ವಾರಕೀಶ್

ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸ್ಯಾಂಡಲ್ ವುಡ್ ನ ಪ್ರೀತಿಯ ಕುಳ್ಳ ಡಾಕ್ಟರ್ ದ್ವಾರಕೀಶ್ ತಮ್ಮ 81 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ಕೊಂಡಿಯೊಂದು ಕಳಚಿದೆ. ದ್ವಾರಕೀಶ್ ಅವರು ಸಾವಿನಲ್ಲಿ ಸಾರ್ಥಕ ಮೆರೆದಿದ್ದಾರೆ ಹಾಗಾದರೆ ಸಾರ್ಥಕತೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ

ದ್ವಾರಕೀಶ್ ಅವರು ವಿಧಿವಶರಾಗಿದ್ದು ಅವರ ಕುಟುಂಬದವರು ಹೇಳಿದಂತೆ ರಾತ್ರಿ ದ್ವಾರಕೀಶ್ ಅವರು ಅತಿಸಾರ ಲೂಸ್ ಮೋಷನ್ ಇಂದ ಬಳಲುತ್ತಿದ್ದರು ನಿದ್ದೆ ಮಾಡಿರಲಿಲ್ಲ ಬೆಳಗ್ಗೆ ಕಾಫಿ ಕುಡಿದು 2 ಗಂಟೆ ಮಲಗುತ್ತೇನೆ ಎಂದು ಹೋದವರು ಎದ್ದಿಲ್ಲ. ಒಂದು ಕಾಲದಲ್ಲಿ ದ್ವಾರಕೀಶ್ ಅವರು ಬಹುಬೇಡಿಕೆಯ ನಟರಾಗಿದ್ದರು, ಹಾಸ್ಯದ ಮೂಲಕ ದ್ವಾರಕೀಶ್ ಅವರು ಚಿತ್ರರಂಗದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಇವರ ಮೊದಲ ಹೆಸರು ಬಂಗ್ಲೆ ಶ್ಯಾಮರಾವ್ ದ್ವಾರಕನಾಥ್ ಇವರಿಗೆ ದ್ವಾರಕೀಶ್ ಎಂದು ಹೆಸರು ಕೊಟ್ಟಿದ್ದು ಸಿ ವಿ ಶಿವಶಂಕರ್ ಇವರು ಸಿನಿಮಾ ನಿರ್ದೇಶಕರು. ದ್ವಾರಕೀಶ್ ಅವರು ಮೈಸೂರಿನ ಹುಣಸೂರಿನಲ್ಲಿ ಜನಿಸಿದರು, ಇವರ ತಂದೆ ಶಮಾ ರಾವ್ ಲಾಯರ್ ಹಾಗೂ ತಾಯಿ ಜಯಮ್ಮ ಗೃಹಿಣಿ, ಇವರು ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡುತ್ತಾರೆ.

ದ್ವಾರಕೀಶ್ ಅವರು ಆರ್ ಎಸ್ ಎಸ್ ನ ಸದಸ್ಯರಾಗಿದ್ದರು. ದ್ವಾರಕೀಶ್ ಅವರು ಚಿಕ್ಕ ವಯಸ್ಸಿನಲ್ಲಿ ನಾಟಕಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ದ್ವಾರಕೀಶ್ ಅವರು ಮಾವ ಹುಣಸೂರು ಕೃಷ್ಣಮೂರ್ತಿ ಅವರ ನಿರ್ಮಾಣದಲ್ಲಿ ವೀರ ಸಂಕಲ್ಪ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ, ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ದ್ವಾರಕೀಶ್ ಅವರು ಸತ್ಯ ಹರಿಶ್ಚಂದ್ರ, ಶ್ರೀ ಕನ್ನಿಕಾ ಪರಮೇಶ್ವರಿ ಸಿನಿಮಾದಲ್ಲಿ ನಟಿಸಿದರು ನೋಡಲು ಕುಳ್ಳನಾಗಿದ್ದು ತುಂಟನಾಗಿ ಜನರ ಮನಸನ್ನು ಗೆದ್ದರು.

ದ್ವಾರಕೀಶ್ ಅವರಿಗೆ ರಾಜಕುಮಾರ್ ಅವರ ಜೊತೆ ನಟಿಸಬೇಕು ಎಂದು ಆಸೆಯನ್ನು ಹೊಂದಿದ್ದರು ಸತ್ಯ ಹರಿಶ್ಚಂದ್ರ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು ಮೇಯರ್ ಮುತ್ತಣ್ಣ ಎಂಬ ಸಿನಿಮಾದಲ್ಲಿ ರಾಜಕುಮಾರ್ ಅವರ ಜೊತೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಬಂಗಾರದ ಮನುಷ್ಯ, ಭಕ್ತಕುಂಬಾರ, ನಂದಗೋಕುಲ, ಜೇಡರ ಬಲೆ, ಬಹದ್ದೂರ್ ಗಂಡು, ದೂರದ ಬೆಟ್ಟ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದರು.

ನಂತರ ವಿಷ್ಣುವರ್ಧನ್ ಅವರ ಜೊತೆ ಕಳ್ಳ ಕುಳ್ಳ ಸಿನಿಮಾದಲ್ಲಿ ನಟಿಸಿ ಜನಪ್ರಿಯವಾಯಿತು ನಂತರ ಕಿಟ್ಟು ಪುಟ್ಟು ಎಂಬ ಸಿನಿಮಾದಲ್ಲಿಯೂ ವಿಷ್ಣು ಸರ್ ಜೊತೆ ನಟಿಸಿದರು, ಸಿಂಗಪೂರ್ ನಲ್ಲಿ ರಾಜಕುಳ್ಳ ಸಿನಿಮಾದಲ್ಲಿಯೂ ವಿಷ್ಣುವರ್ಧನ್ ಜೊತೆ ದ್ವಾರಕೀಶ್ ಅವರು ನಟಿಸಿದರು. ದ್ವಾರಕೀಶ್ ಅವರು ಕಿಲಾಡಿಗಳು ಸಿನಿಮಾದಲ್ಲಿ ನಟಿಸಿದರು ಹಾಗೂ ಈ ಸಿನಿಮಾವನ್ನು ಇವರೆ ನಿರ್ದೇಶನ ಮಾಡಿದರು. ಆಪ್ತಮಿತ್ರ ಸಿನಿಮಾದಲ್ಲಿ ದ್ವಾರಕೀಶ್ ಅವರು ನಟಿಸಿದರು ಹೀಗೆ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್ ಅವರು ನಟಿಸಿದರು. ದ್ವಾರಕೀಶ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ದ್ವಾರಕೀಶ್ ಅವರು ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.

ನಟ ದ್ವಾರಕೀಶ್ ಅವರು ತಮ್ಮ ಸಾವಿನ ನಂತರ ನೇತ್ರದಾನ ಮಾಡಿದ್ದಾರೆ, ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರಂತೆ ದ್ವಾರಕೀಶ್ ಅವರು ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ. ದ್ವಾರಕೀಶ್ ಅವರು ನಾರಾಯಣ ಹೃದಯಾಲಯಕ್ಕೆ ನೇತ್ರದಾನ ಮಾಡಿದ್ದಾರೆ. ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

Leave a Comment

error: Content is protected !!