ಮದುವೆಯಾಗದೇ ಗ್ರಹಿಣಿ ಆಗಿದ್ದರೂ ಕೂಡ ಮಗು ಬೇಕೇ ಬೇಕು ಎಂದ ಕನ್ನಡದ ಖ್ಯಾತ ನಟಿ. ಹೇಳಿಕೆ ಕೇಳಿ ಬೆಚ್ಚಿಬಿದ್ದ ಅಭಿಮಾನಿಗಳು!

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳು ಅದರಲ್ಲೂ ವಿಶೇಷವಾಗಿ ಹೊಸ ಹೊಸ ನಾಯಕ ನಟಿಯರ ಪರಿಚಯ ಆಗಿದೆ ಎಂದರು ತಪ್ಪಾಗಲಾರದು. ಕೆಲವರು ನಮ್ಮ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನು ಕೆಲವರು ಹೇಳೋ ಹೆಸರಲ್ಲಿದಂತೆ ಮಾಯವಾಗಿ ಹೋಗಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಇಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವುದು ಕೂಡ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ನಟಿ ಒಬ್ಬರ ಕುರಿತಂತೆ.

ಹೌದು ಮಿತ್ರರೇ ನಟಿ ಭಾವನವರ ಕುರಿತಂತೆ ನಾವು ಇಂದು ನಾವು ಮಾತನಾಡಲು ಹೊರಟಿರುವುದು. ಒಂದು ಕಾಲದಲ್ಲಿ ಯಾವುದೇ ಪಾತ್ರಗಳನ್ನು ನೀಡಿದರು ಕೂಡ ಅದಕ್ಕೆ ತಕ್ಕದಾದ ನ್ಯಾಯವನ್ನು ಒದಗಿಸುವಂತಹ ನಟನೆಯನ್ನು ನಟಿ ಭಾವನ ಅವರು ಮಾಡುವ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇಂದು ಕೊಂಚಮಟ್ಟಿಗೆ ಚಿತ್ರರಂಗದಿಂದ ವಿರಾಮವನ್ನು ತೆಗೆದುಕೊಂಡು ತಮ್ಮ ಜೀವನದಲ್ಲಿ ಸಕ್ರಿಯರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇತ್ತೀಚಿಗಷ್ಟೇ youtube ಚಾನೆಲ್ ಒಂದರ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿರುವ ಭಾವನ ಅವರು ಒಂದು ವಿಚಿತ್ರ ಹೇಳಿಕೇನು ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡುತ್ತಿದ್ದಾರೆ. ಹೌದು ಮಿತ್ರರೇ, ನಾನು ಮದುವೆ ಆಗುವುದಿಲ್ಲ ಆದರೆ ನನಗೆ ಮಗು ಬೇಕೇ ಬೇಕು ಎಂಬುದಾಗಿ ಹೇಳಿಕೆ ನೀಡುವ ಮೂಲಕ ಯೂಟ್ಯೂಬ್ ವೀಕ್ಷಕರ ಆಶ್ಚರ್ಯಕ್ಕೆ ನಟಿ ಭಾವನಾ ಅವರು ಕಾರಣರಾಗಿದ್ದಾರೆ.

ಹೌದು ಈ ಪ್ರಶ್ನೆಯನ್ನು ನಾನು ಆಧುನಿಕ ಮಹಿಳೆಯರ ಬಳಿ ಕೇಳಿದಾಗ ಅಥವಾ ಆಧುನಿಕ ಆಲೋಚನೆಯನ್ನು ಹೊಂದಿರುವವರನ್ನು ಕೇಳಿದಾಗ ನೀನು ಹೇಗೆ ಸಮಾಜವನ್ನು ಎದುರಿಸುತ್ತಿಯಾ ಎಂಬುದಾಗಿ ನನ್ನನ್ನು ಕೇಳುತ್ತಾರೆ. ಆದರೆ ಅದೇ ವಿಚಾರವನ್ನು ನಾನು ಸಾಂಸ್ಕೃತಿಕ ಆಚರಣೆಯನ್ನು ಆಚರಿಸಿಕೊಂಡು ಹಾಗೂ ಸಾಂಪ್ರದಾಯಕವಾಗಿ ಜೀವನವನ್ನು ನಡೆಸುತ್ತಿರುವವರ ಬಳಿ ಕೇಳಿದಾಗ ಭಾವನ ಇದನ್ನು ನೀನು ಮಾಡಬೇಕು ಎಂಬುದಾಗಿ ನನಗೆ ಪ್ರೋತ್ಸಾಹ ನೀಡುತ್ತಾರೆ. ಸಮಾಜದಲ್ಲಿ ವಿವಿಧ ಬಗೆಯ ಆಲೋಚನೆ ಹೊಂದಿರುವವರು ಇದ್ದಾರೆ ಆದರೆ ಅವರು ನಮಗೆ ಕಾಣುವ ಹಾಗೆ ಇರುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂಬುದನ್ನು ಈ ವಿಚಾರದ ಉದಾಹರಣೆಯಾಗಿ ನೀಡುವ ಮೂಲಕ ಭಾವನಾ ರವರು ಸಮರ್ಥಿಸಿಕೊಳ್ಳುತ್ತಾರೆ.

Leave a Comment