ಕನ್ನಡದ ಖ್ಯಾತ ನಟಿ ರಂಭಾ ಗೆ ಕಾರು ಅಪಘಾತ! ರಂಭಾ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಚಿತ್ರರಂಗ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ತಮಿಳು ಹಾಗೂ ತೆಲುಗುನಲ್ಲಿ ನಟಿ ರಂಭಾ ಅವರು ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅತ್ಯಂತ ಹೆಚ್ಚು ಬಹುಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದವರು ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಗ್ಲಾಮರಸ್ ಪಾತ್ರಗಳ ಮೂಲಕ ಎಲ್ಲರ ಮನ ಗೆದ್ದವರು ನಟಿ ರಂಭ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಇನ್ನು ನಟಿ ರಂಭಾ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹಾಗೂ ನಿರ್ದೇಶನದ ಸಿನಿಮಾಗಳಲ್ಲಿ. ಆದರೆ ಈಗ ಅವರ ಕುರಿತಂತೆ ಕೇಳಿ ಬರುತ್ತಿರುವ ಲೇಟೆಸ್ಟ್ ಸುದ್ದಿಗಳು ನಿಜಕ್ಕೂ ಕೂಡ ಅವರ ಅಭಿಮಾನಿಗಳಿಗೆ ದುಃಖವನ್ನು ಹಾಗೂ ಕಣ್ಣೀರನ್ನು ತರಿಸುವಂತಹ ಸುದ್ದಿಯಾಗಿದೆ. ನಟಿ ರಂಭಾ ಅವರು ಮದುವೆಯಾಗಿ ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಈಗ ದೂರದ ದೇಶವಾಗಿರುವ ಕೆನಡಾದಲ್ಲಿ ನೆಲೆಸಿದ್ದಾರೆ.

ಕೆನಡಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಈಗ ಅಪಘಾ’ತಕ್ಕೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ತಮ್ಮ ಪತಿ ಹಾಗೂ ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರ ಜೊತೆಗೆ ಕೆನಡಾದ ಟೊರೆಂಟೊದಲ್ಲಿ ರಂಭಾ ಅವರು ಸಿನಿಮಾ ರಂಗವನ್ನು ತೊರೆದು ಈಗ ಜೀವಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಈಗ ಹೀಗೆ ನಡೆದಿರುವುದು ನಿಜಕ್ಕೂ ಕೂಡ ಎಲ್ಲರ ಚಿಂತೆಗೆ ಕಾರಣವಾಗಿದೆ. ಶಾಲೆ ಮುಗಿಸಿಕೊಂಡು ಮಕ್ಕಳನ್ನು ಮನೆಗೆ ಕರೆತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂಬುದಾಗಿ ತಿಳಿದು ಬಂದಿದ್ದು ರಂಭಾ ಅವರು ಚಲಾಯಿಸುತ್ತಿದ್ದ ಕಾರಿನ ಬಲ ಭಾಗಕ್ಕೆ ಮತ್ತೊಂದು ಕಾರುಡಿಕ್ಕಿ ಹೊಡೆದಿದೆ ಎಂಬುದಾಗಿ ತಿಳಿದು ಬಂದಿದೆ.

ಕಾರಿನಲ್ಲಿದ್ದ ರಂಭಾ ಸೇರಿದಂತೆ ಉಳಿದವರು ಎಲ್ಲರೂ ಕೂಡ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ ಆದರೆ ಅವರ ಕಿರಿಯ ಮಗಳಾಗಿರುವ ಸಾಷಾಳಿಗೆ ಮಾತ್ರ ಕೊಂಚಮಟ್ಟಿಗೆ ಗಂಭೀರ ಪರಿಸ್ಥಿತಿ ಇದೆ ಎಂಬುದಾಗಿ ತಿಳಿದು ಬಂದಿದ್ದು ಇದರ ಕುರಿತಂತೆ ಸ್ವತಹ ರಂಭಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರಂತೆ. ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂಬುದಾಗಿ ತಿಳಿದು ಬಂದಿದ್ದು ಆದಷ್ಟು ಬೇಗ ಆ ಚಿಕ್ಕ ಹುಡುಗಿ ಗುಣಮುಖವಾಗಿ ಆಸ್ಪತ್ರೆಯಿಂದ ಹೊರಬರಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!