ಕರ್ನಾಟಕದ ಸಿಂಗಂ ಅಣ್ಣಾಮಲೈ ಕನ್ನಡ ಸಿನಿಮಾದಲ್ಲಿ ನಟಿಸೋಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ

ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಸಂಚಲನವನ್ನೇ ಮೂಡಿಸಿದ್ದ, ಕರ್ನಾಟಕದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಾಗ ಸಾಕಷ್ಟು ಜನ ನೊಂದುಕೊಂಡಿದ್ದರು. ಹೀಗೆ ರಾಜೀನಾಮೆ ಕೊಡಬೇಡಿ ಎಂದು ಹೇಳಿಕೊಂಡಿದ್ದರು. ಆದರೆ ಕಾರಣಂತರಗಳಿಂದ ಅಣ್ಣಮಲೈ ರಾಜೀನಾಮೆ ಕೊಟ್ಟು ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ.

ಕನ್ನಡ ನಾಡಿನ ಸಿಂಗಂ ಎಂದೇ ಅಣ್ಣಾಮಲೈ ಅವರನ್ನು ಕರೆಯಲಾಗುತ್ತಿತ್ತು. ಅವರ ಸ್ಪೂರ್ತಿದಾಯಕ ಭಾಷಣಗಳು ಜನರನ್ನು ಇನ್ನಷ್ಟು ಇಂಪ್ರೆಸ್ ಮಾಡಿತ್ತು. ಇದೀಗ ಜನರ ಮನಸ್ಸನ್ನು ಮತ್ತೊಮ್ಮೆ ಗೆಲಲ್ಲು ಬೆಳ್ಳಿತೆರೆ ಮೂಲಕ ಬರುತ್ತಿದ್ದಾರೆ ಅಣ್ಣಾಮಲೈ. ಹೌದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಸದ್ದಿಲ್ಲದೇ ಸಿನಿಮಾ ಒಂದರಲ್ಲಿ ಅಭಿನಯಿಸಿದ್ದಾರೆ. ಅದುವೇ ಕನ್ನಡದ ’ಅರಬ್ಬೀ’ ಸಿನಿಮಾ. ಇದು ಒಬ್ಬ ಮಹಾನ್ ಸಾಧಕನ ಜೀವನ ಚರಿತ್ರೆಯನ್ನು ಆಧರಿಸಿ ನಿರ್ಮಾಣ ಮಾಡಲಾದ ಸಿನಿಮಾ.

ಅರಬ್ಬಿ ಸಿನಿಮಾ ಕನ್ನಡದಲ್ಲಿ ಮೂಡಿಬರಲಿದೆ. ಇದರ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವವರು, ರಾಜಕುಮಾರ್. ಇವರು ಕಳೆದ 16 ವರ್ಷಗಳಿಂದ ಸಿನಿಮಾದಲ್ಲಿ ಹಲವಾರು ನಿರ್ಡೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದು ಈಗ ಅರಬ್ಬೀ ಸಿನಿಮಾ ನಿರ್ದೇಶನ ಮಾಡುವುದರ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈಗಾಗಲೇ ಲಾಕ್ ಡೌನ್ ಸಮಯದಲ್ಲಿಯೂ ಈ ಚಿತ್ರದ ಅರ್ಧ ಭಾಗ ಚಿತ್ರಿಕರಣ ಮಾಡಿ ಮುಗಿಸಲಾಗಿದೆ.

ಇನ್ನು ಈ ಚಿತ್ರದ ಬಗ್ಗೆ ಹೇಳುವುದಾದರೆ, ಅರಬ್ಬಿ ಚಿತ್ರ ಸಾಧಕನೊಬ್ಬನ ಕುರಿತಾದ ಚಿತ್ರ. ಎರಡೂ ಕೈಗಳಿಲ್ಲದೇ ಇದ್ದರೂ, ಈಜುವುದರಲ್ಲಿ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದ ಈಜುಗಾರ ಎನಿಸಿಕೊಂಡಿರುವ ಕೆ. ಎಸ್. ವಿಶ್ವಾಸ್ ಅವರ ಜೀವನದ ಕಥೆಯೇ ಅರಬ್ಬಿ ಸಿನಿಮಾ. ಇದರಲ್ಲಿ ಸ್ವತಃ ಕೆ.ಎಸ್ ವಿಶ್ವಾಸ್ ಅವರೇ ಅಭಿನಯಿಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ವಿಶ್ವಾಸ್ ಅವರ ಸ್ಪಿಮ್ಮಿಂಗ್ ಕೋಛ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ಇಷ್ಟಪಟ್ಟು ಈ ಪಾತ್ರವನ್ನು ನಿರ್ವಹಿಸುತ್ತಿರುವ ಅಣ್ಣಾಮಲೈ ಈ ಚಿತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಖಂಡಿತ ನೀವು ಊಹೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಅಣ್ಣಾಮಲೈ ಈ ಚಿತ್ರದ ಅಭಿನಯಕ್ಕಾಗಿ ತೆಗೆದುಕೊಂಡಿದ್ದು ಕೆಮಲ ಒಂದು ರೂಪಾಯಿ! ಹೌದು, ಯಾವುದೇ ಸಂಭಾವನೆಯನ್ನೂ ಮಡೆಯದೇ ಅರಬ್ಬಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು!

ಅರಬ್ಬಿ ಚಿತ್ರದ ನಿರ್ದೇಶನವನ್ನು ಮಾಡುತ್ತಿರುವ ರಾಜಕುಮಾರ್, ಕಥೆ ಚಿತ್ರಕಥೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಜೊತೆಗೆ ಇದರಲ್ಲಿರುವ ಎರಡು ಹಾಡಿಗೆ ಅವರದ್ಡೇ ಸಾಹಿತ್ಯವಿದೆ. ಆಯುಷ್ ಮಂಜು ಅವರ ಸಂಗೀತ ಸಂಯೋಜನೆ ಇದೆ. ಇನ್ನು ಆನಂದ್ ದಿಂಡವಾರ್ ಈ ಚಿತ್ರದ ಛಾಯಾಗ್ರಾಹಕ. ಸುನೀಲ್ ಕಶ್ಯಪ್ ಅವರ ಸಂಕಲನ ಈ ಚಿತ್ರಕ್ಕಿದೆ. ಚೇತನ್. ಸಿ.ಎಸ್ ಅವರ ನಿರ್ಮಾಣದಲ್ಲಿ ಅರಬ್ಬಿ ಚಿತ್ರ ನಿರ್ಮಾಣವಾಗುತ್ತಿದೆ. ಈಗ ಕನ್ನಡದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಮುಂದೆ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿಯೂ ತೆರೆಕಾಣಲಿದೆ. ಹಿಂದಿಯಲ್ಲಿ ಖ್ಯಾತ ನಿರ್ದೇಶಕ ಮಹೇಶ್ ಭಟ್ ಈ ಚಿತ್ರವನ್ನು ಬಿಡುಗಡೆ ಮಾಡಲು ಆಸಕ್ತಿ ತೋರಿಸಿದ್ದಾರೆ ಎಂದು ಅರಬ್ಬಿ ನಿರ್ದೇಶಕ ರಾಜಕುಮರ್ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!