ಅಪ್ಪು ಮರಣ ಹೊಂದುವ ಎರಡು ದಿನದ ಮುಂಚೆ ಮಾಡಿದ್ದ ಕೆಲಸವನ್ನು ನೆನೆದ ರಾಘಣ್ಣ

ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ದೊಡ್ಮನೆಯ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರಾಗಿದ್ದರು. ಕೇವಲ 46ನೇ ವಯಸ್ಸಿಗೆ ಅವರು ನಮ್ಮನ್ನೆಲ್ಲ ಬಿಟ್ಟು ಜೀವನದ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ತಂದೆ ತಾಯಿಯರ ಬಳಿ ಹೋಗುತ್ತಾರೆ ಎಂಬುದನ್ನು ಯಾರು ಕೂಡ ಕನಸಿನಲ್ಲಿ ಕೂಡ ಊಹಿಸಿರಲಿಲ್ಲ. ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದ ಅತ್ಯಂತ ದುಃಖಕರವಾದ ವಿಚಾರಗಳಲ್ಲಿ ಒಂದಾಗಿದೆ.

ಯಾಕೆಂದರೆ ಕೇವಲ ಸದಾಭಿರುಚಿಯ ಸಿನಿಮಾಗಳ ಮೂಲಕ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಷ್ಟದಲ್ಲಿರುವವರಿಗೆ ಅವರಿಗೆ ಬೇಕಾದಂತಹ ಸಹಾಯವನ್ನು ಕೂಡಲೇ ಮಾಡುತ್ತಿದ್ದ ಬಂಗಾರದ ಮನಸ್ಸಿನವರು ಎಂದರೆ ತಪ್ಪಾಗಲಾರದು. ಸಹಾಯ ಮಾಡುತ್ತಿದ್ದರು ಆದರೆ ಯಾವತ್ತೂ ಕೂಡ ಯಾರ ಬಳಿ ಅದರ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ಇನ್ನು ಕಳೆದ ವರ್ಷದ ಅಕ್ಟೋಬರ್ 29ರಂದು ಆರೋಗ್ಯವಾಗಿದ್ದ ಪುನೀತ್ ರಾಜಕುಮಾರ್ ಅವರು ಹಠಾತ್ತನೇ ನಮ್ಮನ್ನೆಲ್ಲ ಆಗಲಿ ಹೋಗಿದ್ದು ನಿಜಕ್ಕೂ ಕೂಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ದುಃಖವಾಗಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣಹೊಂದುವುದಕ್ಕಿಂತಲೂ ಎರಡು ದಿನ ಮುಂಚೆ ಏನು ಮಾಡಿದ್ದರು ಎಂಬುದನ್ನು ಈಗ ಅವರ ಅಣ್ಣ ಆಗಿರುವ ರಾಘವೇಂದ್ರ ರಾಜಕುಮಾರ್ ರವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಹೌದು ಸ್ನೇಹಿತರೆ ಅದಾಗಲೇ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಸಿದ್ದವಾಗಿತ್ತು. ರಾಘಣ್ಣ ಅವರನ್ನು ಮನೆಗೆ ಕರೆಸಿ ಪೂರ್ತಿ ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರು ಅವರಿಗೆ ತೋರಿಸುತ್ತಾರೆ. ಸಿನಿಮಾ ನೋಡಿ ಹೇಗಿದೆ ರಾಘಣ್ಣ ಎಂಬುದಾಗಿ ಅಪ್ಪು ಅವರು ರಾಘಣ್ಣ ಅವರನ್ನು ಕೇಳುತ್ತಾರೆ.

ಸಿನಿಮಾದ ಕೊನೆಯಲ್ಲಿ ಮೂಡಿ ಬರುವ ಅಪ್ಪಾಜಿಯವರ ಧ್ವನಿಯಂತೆ ಈ ಸಿನಿಮಾ ನೀನು ಮಾಡಿದ್ದೀಯಾ, ಚೆನ್ನಾಗಿದೆ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ನಮ್ಮೆಲ್ಲರ ನೆಚ್ಚಿನ ಅಪ್ಪು 46 ವರ್ಷಗಳ ಕಾಲ ಒಂದೊಳ್ಳೆ ಅರ್ಥ ನೀಡುವಂತಹ ಸಿನಿಮಾವನ್ನು ನೀಡಬೇಕಾಗಿದೆ ಅದಕ್ಕಾಗಿಯೇ ನನ್ನ ಸ್ವಂತ ಖರ್ಚಿನಿಂದ ಈ ಸಿನಿಮಾವನ್ನು ಮಾಡಿದ್ದೇನೆ ಎಂಬುದಾಗಿ ಪುನೀತ್ ರಾಜಕುಮಾರ್ ಅವರು ಹೇಳಿದ್ದಾರಂತೆ. ಇದೇ ಅಕ್ಟೋಬರ್ 28ರಂದು ಗಂಧದಗುಡಿ ದೇಶವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೊನೆಯ ಬಾರಿ ನಮ್ಮೆಲ್ಲರ ನೆಚ್ಚಿನ ಅಪ್ಪುವನ್ನು ಕರ್ನಾಟಕದ ವನಸಿರಿಯ ನಡುವೆ ಕಣ್ತುಂಬಿಕೊಳ್ಳೋಣ ಬನ್ನಿ ಸ್ನೇಹಿತರೆ.

Leave a Comment

error: Content is protected !!