Suresh Raina: ಕೆಸಿಸಿಯಲ್ಲಿ ಅಪ್ಪು ಜೊತೆ ಸುರೇಶ್ ರೈನಾ. ವೈರಲ್ ಆಯ್ತು ನೋಡಿ ಫೋಟೋ!

Puneeth Rajkumar ಕನ್ನಡ ಚಲನಚಿತ್ರ ಕಪ್ ಈಗಾಗಲೇ ನಡೆಯುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ನೇತೃತ್ವದಲ್ಲಿ ಕನ್ನಡದ ಕಲಾವಿದರಲ್ಲವೂ ಕೂಡ ಒಂದೇ ಸೂರಿನ ಅಡಿಯಲ್ಲಿ ಕ್ರಿಕೆಟ್ ಮೂಲಕ ಒಂದಾಗುತ್ತಿರುವಂತಹ ಸಂಭ್ರಮದ ಕ್ರೀಡಾ ಹಬ್ಬಕ್ಕೆ ಕೆಸಿಸಿ ಅಥವಾ ಕನ್ನಡ ಚಲನಚಿತ್ರ ಕಪ್(Kannada Chalanachitra Cup) ಎಂದು ಹೇಳಬಹುದಾಗಿದೆ. ಈ ಬಾರಿ ಮೂರನೇ ಆವೃತ್ತಿಯಾಗಿದ್ದು ಇಂಟರ್ನ್ಯಾಷನಲ್ ಕ್ರಿಕೆಟರ್ಸ್ಗಳು ಕೂಡ ಆಗಮಿಸಿದ್ದಾರೆ.

ಕ್ರಿಸ್ ಗೇಲ್ ಸುರೇಶ್ ರೈನ(Suresh Raina) ಹರ್ಷಲ್ ಗಿಬ್ಸ್ ತಿಲಕರತ್ನೆ ದಿಲ್ಸನ್ ಬದ್ರಿನಾಥ್ ಸೇರಿದಂತೆ ಹಲವಾರು ನಟರು ಕ್ರಿಕೆಟಿಗರು ಕೂಡ ಕೆಸಿಸಿಯ ತಂಡಗಳಲ್ಲಿ ಶಾಮಿಲಾಗಿದ್ದಾರೆ. ಕಳೆದ ಬಾರಿ ಕೆಸಿಸಿ ನಡೆದಿದ್ದಾಗ ಒಂದು ತಂಡಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೂಡ ಕ್ಯಾಪ್ಟನ್ ಆಗಿದ್ದರು. ಆದರೆ ಈ ಬಾರಿ ಅವರಿಲ್ಲದ ಮೊದಲ ಕೆಸಿಸಿ ನಡೆಯುತ್ತಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರಿಲ್ಲ ಎನ್ನುವ ಕೊರತೆ ಕಾಣದಂತೆ ಅವರ ಅಭಿಮಾನಿಗಳು ಮಾಡುತ್ತಿರುವಂತಹ ಫೋಟೋ ಎಡಿಟ್ಗಳು ನಿಜಕ್ಕೂ ಕೂಡ ನಿಮ್ಮ ಕಣ್ಣನ್ನೇ ನೀವು ನಂಬದ ಹಾಗೆ ಮಾಡಿಬಿಡುತ್ತವೆ. ಹೌದು ಗೆಳೆಯರೇ ಸುರೇಶ್ ರೈನ ಅವರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಇದ್ದಿದ್ದರೆ ಹೇಗೆ ಇರುತ್ತಿತ್ತು ಎನ್ನುವ ಕಲ್ಪನೆಯನ್ನು ಫೋಟೋ ಎಡಿಟ್ ಮೂಲಕ ಅಪ್ಪು ಅಭಿಮಾನಿಗಳು ನಿಜ ಮಾಡಿದ್ದಾರೆ.

ಈಗಾಗಲೇ ಎಡಿಟ್ ಮಾಡಿರುವ ಫೋಟೋದಲ್ಲಿ ಸುರೇಶ್ ರೈನ ಹಾಗೂ ಅಪ್ಪು(Appu) ಒಂದೇ ಫ್ರೇಮಿನಲ್ಲಿ ಇರುವಂತೆ ಕಂಡುಬಂದಿದ್ದು ಸೋಶಿಯಲ್ ಮೀಡಿಯಾದಲ್ಲೂ ಇದು ವೈರಲ್ ಆಗಿ ಎಲ್ಲರನ್ನೂ ಭಾವುಕರನ್ನಾಗಿ ಮಾಡಿಸಿದೆ ಎಂದರೆ ತಪ್ಪಾಗಲಾರದು. ನೀವು ಕೂಡ ಅಪ್ಪು ಫ್ಯಾನ್ ಆಗಿದ್ದರೆ ತಪ್ಪದೆ ಶೇರ್ ಮಾಡಿ ಇನ್ನಷ್ಟು ಜನರಿಗೆ ತಲುಪಿಸಿ.

Leave a Comment

error: Content is protected !!