ಪಾಪ ಅನಿರುದ್ಧ್ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಮಾಡಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹಲವಾರು ಕಾರ್ಯಕ್ರಮಗಳಿಗೆ ಭಾಗವಹಿಸುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲದಿರುವ ದುಃಖವನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಹೆಲ್ತ್ ಕಾರ್ಡ್ ಅನ್ನು ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಕಲಾವಿದರಿಗೆ ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಈ ಕಾರ್ಡ್ ಅನ್ನು ವಿತರಿಸಲು ಮುಖ್ಯ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಮೇಡಂ ಅವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಹಾಗೂ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಹೆಸರನ್ನು ಗಳಿಸಿರುವ ನಟ ಅನಿರುದ್ಧ ಅವರು ಕೂಡ ದೂರದಲ್ಲಿ ನಿಂತಿದ್ದನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಂಡಿರುತ್ತಾರೆ.

ಇತ್ತೀಚಿಗಷ್ಟೇ ಕೆಲವು ತಿಂಗಳ ಹಿಂದೆ ನಟ ಅನಿರುದ್ಧ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿಯಿಂದ ಹೊರಬಂದ ಹಿನ್ನೆಲೆಯಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಕ್ಕದಲ್ಲಿಯೇ ಅನಿರುದ್ಧ್ ಅವರು ಕೂಡ ನಿಂತಿದ್ದರು.

ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅನಿರುದ್ಧ್ ಅವರು ಕಂಡು ನಮಸ್ಕಾರ ಮಾಡಿದ ಕೂಡಲೇ ಎದ್ದು ನಿಂತು ನಮಸ್ಕಾರ ಮಾಡಿ ಗೌರವ ಸೂಚಿಸುತ್ತಾರೆ. ಆ ಸಮಯದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಕೆಲಸದ ಅವಸರದಲ್ಲಿ ಅನಿರುದ್ಧ ಅವರನ್ನು ತಳ್ಳಿದರು. ಇದು ಅನಿರುದ್ಧ ಅವರಿಗೆ ಸ್ವಲ್ಪ ಬೇಸರ ತಂದಿತು. ಆದರೆ ಇದು ಅಶ್ವಿನಿ ಅವರ ಬಾಡಿಗಾರ್ಡ್ ಉದ್ದೇಶಪೂರ್ವಕವಾಗಿ ಮಾಡಿರುವ ಕೆಲಸ ಅಲ್ಲ. ಕೆಲಸದ ಗಡಿಬಿಡಿ ಅಲ್ಲಿ ee ರೀತಿಯಲ್ಲಿ ನಡೆದುಕೊಂಡರು. ಅನಿರುದ್ಧ ಅವರು ಸಹ ನಂತರ ನಗುತ್ತಾ ಬಾಡಿಗಾರ್ಡ್ ಗೆ ಮುಂದೆ ಸಾಗಲು ಜಾಗವನ್ನು ಬಿಟ್ಟರು. ಇವೆಲ್ಲ ವನ್ನು ವೀಕ್ಷಣೆ ಮಾಡುತ್ತಿದ್ದ ಅಶ್ವಿನಿ ಅವರು ನಂತರ ಅನಿರುದ್ಧ ಸಲ್ಲಿಸಿದ ಗೌರವ ನಿಜಕ್ಕೂ ಶ್ಲಾಘನೀಯ. ತಮ್ಮ ಸೊಸೆಗೆ ದೊಡ್ಮನೆ ಕುಟುಂಬ ಹೇಳಿ ಕೊಟ್ಟಿರುವ ಸಂಸ್ಕಾರವೆಂದರೆ ಇದೆ ನೋಡಿ . ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಎಲ್ಲರೂ ಕೂಡ ಮನಸ್ಪೂರ್ತಿಯಾಗಿ ಮೆಚ್ಚಿ ಹೊಗಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!